More

    ವ್ಯಕ್ತಿಯೊಬ್ಬನ ಶವ ಅಂದುಕೊಂಡು ಕೆರೆಯ ಬಳಿ ಹೋದ ಪೊಲೀಸರಿಗೆ ಕಾದಿತ್ತು ಬಿಗ್​ ಶಾಕ್​!

    ಹೈದರಾಬಾದ್​: ಕೆರೆಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ ಎಂದು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ದೊಡ್ಡ ಸೆರ್ಪ್ರೈಸ್ ಕಾದಿತ್ತು. ಅಷ್ಟಕ್ಕೂ ಆ ಸರ್ಪ್ರೈಸ್​ ಏನು ಎಂಬುದನ್ನು ನಾವೀಗ ವಿವರವಾಗಿ ತಿಳಿಯೋಣ.

    ತೆಲಂಗಾಣದ ಹನಮಕೊಂಡದ ರೆಡ್ಡಿಪುರಂನಲ್ಲಿ ಈ ಘಟನೆ ನಡೆದಿದೆ. ಸರ್​ ಕೆರೆಯಲ್ಲಿ ವ್ಯಕ್ತಿಯೊಬ್ಬನ ಶವ ತೇಲುತ್ತಿದೆ ಎಂದು ಸ್ಥಳೀಯ ಜನರು ತಮ್ಮ ವ್ಯಾಪ್ತಿಯ ಪೊಲೀಸ್​ ಠಾಣೆಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಕೂಡಲೇ ಸ್ಥಳಕ್ಕೆ ಧಾವಿಸುವ ಪೊಲೀಸರು ಕೆರೆಯ ದಡಕ್ಕೆ ಹೋಗಿ ಸತ್ತಂತೆ ಬಿದ್ದಿರುವ ವ್ಯಕ್ತಿಯ ಕೈಹಿಡಿದು ಎಳೆಯುತ್ತಾರೆ. ಆದರೆ, ಇದ್ದಕ್ಕಿದ್ದಂತೆ ಆ ವ್ಯಕ್ತಿ ಎಚ್ಚರಗೊಳುತ್ತಾನೆ. ಇದರಿಂದ ಒಂದು ಕ್ಷಣ ಪೊಲೀಸರೇ ದಂಗಾಗುತ್ತಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ವಿಡಿಯೋದಲ್ಲಿ ಏನಿದೆ?
    ಶರ್ಟ್​ ಇಲ್ಲದೇ ಕೇವಲ ನೀಲಿ ಜೀನ್ಸ್ ಧರಿಸಿ ಕೆರೆಯಲ್ಲಿ ಮಲಗಿರುವ ವ್ಯಕ್ತಿಯನ್ನು ವಿಡಿಯೋದಲ್ಲಿ ನೋಡಬಹುದು. ಅಲ್ಲಿಗೆ ಪೊಲೀಸ್​ ಅಧಿಕಾರಿ ಬಂದು ನೀರಿನಲ್ಲಿ ಶವದಂತೆ ಬಿದ್ದಿರುವ ವ್ಯಕ್ತಿಯ ಕೈಹಿಡಿದು ಮೇಲಕ್ಕೆ ಎಳೆಯುತ್ತಾರೆ. ಈ ವೇಳೆ ಆತ ಎದ್ದು ಕುಳಿತುಕೊಳ್ಳುತ್ತಾನೆ. ಬಳಿಕ ಕೆರೆಯಿಂದ ಎದ್ದು ಬಂದು ಪೊಲೀಸರ ಜತೆ ಮಾತನಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಮೂಲಗಳ ಪ್ರಕಾರ ಕುಡಿದು ಮತ್ತಿನಲ್ಲಿ ಈ ರೀತಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ನೆಲ್ಲೂರು ಜಿಲ್ಲೆಯ ಕವಲಿ ಮೂಲದ ವ್ಯಕ್ತಿಯಾಗಿದ್ದು, ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ.

    ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದು, ಬಿಸಿಲಿನ ತಾಪ ತಾಳಲಾರದೆ ಈ ರೀತಿ ಕೆರೆಯಲ್ಲಿ ಬಿದ್ದಿರುವುದಾಗಿ ಆ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ. ವಿಡಿಯೋ ವೈರಲ್ ಆದ ನಂತರ ಅನೇಕ ನೆಟ್ಟಿಗರು ಹಾಸ್ಯಮಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇದನ್ನು ನೋಡಿ ನಗು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್​)

    ಹುಡುಗರಿಗೆ ಪೈಪೋಟಿ… ವೇದಿಕೆ ಮೇಲೆಯೇ ಬಟ್ಟೆ ಬಿಚ್ಚಿದ ನಟಿ, ನಿರೂಪಕಿ ಅನಸೂಯ ಭಾರದ್ವಜ್​!

    ಅಫ್ಘಾನಿಸ್ತಾನ ಎದುರು ಹೀನಾಯ ಸೋಲು: ಭಾರತದ ವಿರುದ್ಧ ಚೀಪ್​ ಕಾಮೆಂಟ್​ ಮಾಡಿದ ಆಸಿಸ್ ಕ್ಯಾಪ್ಟನ್!

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts