More

    ರೋಬಾಟಿಕ್ ತಂತ್ರಜ್ಞಾನ ಬಳಸಿ 29 ನಿಮಿಷದಲ್ಲೇ ಹೃದಯ ಚಿಕಿತ್ಸೆ

    ಬೆಂಗಳೂರು: ದೀರ್ಘಕಾಲದ ಮಿಟ್ರಲ್ ವಾಲ್ವ್ ಡಿಸೀಸ್‌ನಿಂದ (ಎಂವಿಡಿ) ಬಳಲುತ್ತಿದ್ದ 38 ವರ್ಷದ ಯೆಮನ್ ದೇಶದ ರೋಗಿಗೆ ರೋಬಾಟಿಕ್ ಕಾರ್ಯವಿಧಾನದ ಮೂಲಕ ಕೇವಲ 29 ನಿಮಿಷಗಳಲ್ಲಿ ಶಸಚಿಕಿತ್ಸೆ ಪೂರ್ಣಗೊಳಿಸುವಲ್ಲಿ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

    ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ರೋಗಿಯ ಸ್ಥಿತಿ ಗಂಭೀರವಾಗಿತ್ತು. ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ರೋಬಾಟಿಕ್ ಶಸಚಿಕಿತ್ಸೆಗೆ ನಿರ್ಧರಿಸಲಾಯಿತು. ಚಿಕಿತ್ಸೆ ಬಳಿಕ ಅತಿಕಡಿಮೆ ಸಮಯದಲ್ಲಿ ರೋಗಿ ಚೇತರಿಸಿಕೊಂಡು ಮನೆಗೆ ತೆರಳಿದ್ದಾಗಿ ಡಾ. ಸತ್ಯಕಿ ನಂಬಲ ತಿಳಿಸಿದ್ದಾರೆ.

    ಹೃದಯ ಸಂಬಂಧಿ ಸಮಸ್ಯೆ ಚಿಕಿತ್ಸೆ ಅವಧಿ ಬಹಳ ಕಡಿಮೆ ಇದೆ. ಅದಕ್ಕೆ ಈ ರೋಬಾಟಿಕ್ ಚಿಕಿತ್ಸೆ ವರದಾನವಾಗಿ ಪರಿಣಮಿಸಿದೆ. ಅಸ್ಪತ್ರೆಯಲ್ಲಿ ಈವರೆಗೂ 150ಕ್ಕೂ ಅಧಿಕ ರೋಬಾಟಿಕ್ ಮಿಟ್ರಲ್ ವಾಲ್ವ ರಿಪ್ಲೀಸ್ಮೆಂಟ್‌ಗಳನ್ನು ಮಾಡಲಾಗಿದ್ದು, ಮುಂದುವರಿದ ಹೃದಯ ಆರೈಕೆಯಲ್ಲಿ ಭಾರತ ಜಾಗತಿಕವಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

    See also  ಒಜಾಕಿ ವಿಧಾನ ರೋಗಿಗಳಿಗೆ ವರದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts