More

    ಬರೀ 23 ದಿನಗಳಲ್ಲಿ ಭಾರತದಲ್ಲಾಗಲಿವೆ 35 ಲಕ್ಷ ಮದುವೆಗಳು!; ಈ ಮದುವೆ ಸೀಸನ್​ನ ವಹಿವಾಟೆಷ್ಟು ಗೊತ್ತೇ?; ಇಲ್ಲಿದೆ ವಿವರ..

    ನವದೆಹಲಿ: ದೇಶದಲ್ಲಿ ಈ ವರ್ಷ ದಾಖಲೆ ಸಂಖ್ಯೆಯಲ್ಲಿ ಮದುವೆಗಳಾಗಲಿದ್ದು, ಭಾರಿ ಪ್ರಮಾಣದ ವಹಿವಾಟು ಕೂಡ ನಡೆಯಲಿದೆ. ಅಖಿಲ ಭಾರತ ವರ್ತಕರ ಒಕ್ಕೂಟ (ಕಾನ್​ಫೆಡರೇಷನ್ ಆಫ್​ ಆಲ್ ಇಂಡಿಯಾ ಟ್ರೇಡರ್ಸ್​-ಸಿಎಐಟಿ) ಇಂಥದ್ದೊಂದು ಮಾಹಿತಿಯನ್ನು ಬಹಿರಂಗಪಡಿಸಿದೆ.

    ಸಿಎಐಟಿ ಈ ಕುರಿತು ಲೆಕ್ಕಾಚಾರ ಹಾಕಿದ್ದು, ಎಷ್ಟು ಅವಧಿಯಲ್ಲಿ ಇಷ್ಟು ಮದುವೆಗಳು ಆಗಲಿವೆ ಎಂಬ ಮಾಹಿತಿಯನ್ನು ಕೂಡ ನೀಡಿದೆ. ಈ ವರ್ಷದ ನ. 23ರಿಂದ ಡಿ. 15ರ ಅವಧಿಯಲ್ಲಿ 35 ಲಕ್ಷ ಮದುವೆಗಳು ಭಾರತದಲ್ಲಿ ಆಗಲಿವೆ ಎಂದು ಅದು ಹೇಳಿದೆ. ಮಾತ್ರವಲ್ಲ ಈ ಮದುವೆಗಳಿಂದ ಬರೋಬ್ಬರಿ 4.25 ಲಕ್ಷ ಕೋಟಿ ರೂ. ವಹಿವಾಟು ಕೂಡ ನಡೆಯಲಿದೆ ಎಂದು ಅಂದಾಜಿಸಿದೆ.

    ಇದನ್ನೂ ಓದಿ: ‘ಮೋದಿಯನ್ನು ಅಧಿಕಾರಕ್ಕೆ ತಂದ್ರೆ ಉಳಿತೀರಿ’ ಎಂದ ಸ್ವಾಮೀಜಿ: ಒಂದೇ ದಿನದಲ್ಲಿ ಇಲ್ಲವಾದ ‘ಭವಿಷ್ಯ’!

    ದ ಕೇಟ್ ರಿಸರ್ಚ್​ ಆ್ಯಂಡ್ ಟ್ರೇಡ್​ ಡೆವೆಲಪ್​ಮೆಂಟ್​ ಸೊಸೈಟಿಯ ಸರ್ವೇಯಲ್ಲಿ ಈ ಮಾಹಿತಿ ಕಂಡುಬಂದಿದೆ. ಆ ಪೈಕಿ ದೆಹಲಿಯೊಂದರಲ್ಲೇ 3.5 ಲಕ್ಷ ಮದುವೆಯಾಗಲಿದೆ. ಈ ಮೂಲಕ ಒಟ್ಟಾರೆ ಮದುವೆಗಳಲ್ಲಿ ಶೇ. 10ರಷ್ಟು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವುದು ತಿಳಿದುಬಂದಿದೆ.

    ಇದನ್ನೂ ಓದಿ: ಮಹಿಳಾ ಕುಸ್ತಿಪಟುಗಳ ನಾಡಿಮಿಡಿತ ಚೆಕ್ ಮಾಡಿದ್ದೆ, ಅಷ್ಟೇ..: ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಬ್ರಿಜ್​ ಭೂಷಣ್ ಹೇಳಿಕೆ

    ಈ 35 ಲಕ್ಷ ಮದುವೆಗಳಲ್ಲಿ 6 ಲಕ್ಷ ಮದುವೆಗಳು ತಲಾ ಸುಮಾರು 3 ಲಕ್ಷ ರೂ. ಬಜೆಟ್​ನಲ್ಲಿ ನಡೆಯಲಿವೆ. ಹತ್ತು ಲಕ್ಷ ಮದುವೆಗಳು ತಲಾ 6 ಲಕ್ಷ ರೂ. ಖರ್ಚಿನಲ್ಲಿ ನಡೆಯಲಿವೆ. 12 ಲಕ್ಷ ಮದುವೆಗಳು ತಲಾ 10 ಲಕ್ಷ ರೂ. ಖರ್ಚಿನಲ್ಲಿ ಮತ್ತು 6 ಲಕ್ಷ ವಿವಾಹಗಳು ತಲಾ 25 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿವೆ ಎಂದೂ ವಿವರಿಸಲಾಗಿದೆ. ಅಲ್ಲದೆ 50 ಸಾವಿರ ಲಗ್ನಗಳು 50 ಲಕ್ಷ ರೂ. ಮತ್ತು ಉಳಿದ 50 ಸಾವಿರ ವಿವಾಹಗಳು ತಲಾ 1 ಕೋಟಿ ರೂ. ಖರ್ಚಿನಲ್ಲಿ ನಡೆಯಲಿವೆ ಎಂದು ಈ ಸಮೀಕ್ಷೆ ತಿಳಿಸಿದೆ.

    ಜೊಮ್ಯಾಟೊ ಫುಡ್ ಡೆಲಿವರಿಗೆ ಸ್ಟೈಲಿಶ್ ಬೈಕು, ಚಂದದ ಯುವತಿ!; ಏನಿದರ ರಹಸ್ಯ?

    ರಾತ್ರಿ ಸರಿಯಾಗಿ ನಿದ್ರೆ ಬರದಿದ್ದರೆ ಅದಕ್ಕೆ ಇವೇ ಕಾರಣಗಳಂತೆ!

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts