More

    ಸ್ಥಳ ತೋರಿಸದೆ ವರ್ಗ, ಪಿಡಿಒಗಳು ಕಂಗಾಲು: ಆಯುಕ್ತಾಲಯದಲ್ಲಿ ಹಾಜರಿ ಹಾಕುವ ಪಜೀತಿ, ರಚನೆಯಾಗದ ವೃಂದ-ನೇಮಕಾತಿ ನಿಯಮ

    | ಶಿವಾನಂದ ಹಿರೇಮಠ ಗದಗ
    ರಾಜ್ಯದಲ್ಲಿ 475ಕ್ಕೂ ಅಧಿಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವರ್ಗಾವಣೆಗೆ ಸರ್ಕಾರ ಆದೇಶಿಸಿದೆ. ಆದರೆ, ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸದೇ ವರ್ಗಾವಣೆ ಮಾಡಿರುವುದಕ್ಕೆ ಪಿಡಿಒಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ 100ಕ್ಕೂ ಅಧಿಕ ಪಿಡಿಒಗಳಿಗೆ ಸ್ಥಳ ತೋರಿಸದೇ ವರ್ಗಾವಣೆ ಮಾಡಿದ್ದರಿಂದ ನಿತ್ಯ ಆಯುಕ್ತಾಲಯದಲ್ಲಿ ಹಾಜರಿ ಹಾಕಬೇಕಾದ ಸ್ಥಿತಿ ಉಂಟಾಗಿದೆ. ಮಹಿಳಾ ಪಿಡಿಒಗಳಿಗೆ ಸಮಸ್ಯೆ ಎದುರಾಗಿದ್ದು, ಹಲವರು ಹುದ್ದೆ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಕೌನ್ಸೆಲಿಂಗ್ ಇಲ್ಲದೆಯೇ ವರ್ಗಾವಣೆ ಮಾಡಿರುವುದಕ್ಕೂ ಆಕ್ರೋಶ ವ್ಯಕ್ತವಾಗಿದೆ.

    ನಿಯಮ ಉಲ್ಲಂಘನೆ: ರಾಜ್ಯದಲ್ಲಿ ಈ ಮೊದಲಿದ್ದ ಜಿಲ್ಲಾಮಟ್ಟದ ವರ್ಗಾವಣೆ (ಜಿಲ್ಲಾವೃಂದ/ಶಿಸ್ತು ಪ್ರಾಧಿಕಾರ) ಮಿತಿಯನ್ನು ಸಡಿಲಗೊಳಿಸಿದ್ದ ಅಂದಿನ ಆರ್​ಡಿಪಿಆರ್ ಸಚಿವ ಎಚ್.ಕೆ. ಪಾಟೀಲ ಅಂತರ ಜಿಲ್ಲಾ ವರ್ಗಾವಣೆಗೆ (ನಿಯಮ 16ಎ) ಅನುಮತಿ ನೀಡಿದ್ದರು. ನಂತರ ಪಿಡಿಒಗಳ ಹುದ್ದೆಯನ್ನು ರಾಜ್ಯ ವೃಂದವಾಗಿ ಉನ್ನತೀಕರಿಸಲು ಹಿಂದಿನ ಬಿಜೆಪಿ ಸರ್ಕಾರ ಅನುಮೋದನೆ ನೀಡಿತ್ತು. ಸಿ ಆಂಡ್ ಆರ್ ರಚಿಸಲು ಪಂಚಾಯತ್ ರಾಜ್ ಇಲಾಖೆಯನ್ನು ಪ್ರಾಧಿಕಾರವಾಗಿ ಆದೇಶಿಸಿತ್ತು. ಆದರೆ, ಸರ್ಕಾರ ನಿಯಮ ರಚಿಸದೇ, ನಿಯಮಗಳ ಸಾಧಕ-ಬಾಧಕ ಪರಿಶೀಲಿಸಲು ಸಾರ್ವಜನಿಕ ಪ್ರಕಟಣೆ ಹೊರಡಿಸದೇ, ನಿಯಮಗಳಿಗೆ ಸಂಪುಟ ಅನುಮೋದನೆ ಯನ್ನೂ ಪಡೆಯದೇ ಏಕಾಏಕಿ ವರ್ಗಾವಣೆ ಮಾಡಿದ್ದು ಸಮಸ್ಯೆಗೆ ಕಾರಣವಾಗಿದೆ.

    ವರ್ಗಾವಣೆ ಏಕೆ?: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ರಾಮ ಪಂಚಾಯಿತಿಗಳ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಪಿಡಿಒಗಳ ವರ್ಗಾವಣೆಗೆ ಸ್ಥಳೀಯ ಶಾಸಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಸರ್ಕಾರ ವರ್ಗಾವಣೆಗೆ ಕೈ ಹಾಕಿದೆ. ಇದು ಸ್ಥಳೀಯ ಆಡಳಿತ ಯಂತ್ರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. 100ಕ್ಕೂ ಹೆಚ್ಚು ಪಿಡಿಒಗಳಿಗೆ ಸ್ಥಳ ನಿಯೋಜಿಸದೇ ವರ್ಗಾವಣೆ ಮಾಡಿದ್ದರಿಂದ ಹುದ್ದೆ ನಿಯುಕ್ತಿಗೊಳ್ಳದ ಪಿಡಿಒಗಳು ಬೆಂಗಳೂರಿನಲ್ಲೇ ಇದ್ದು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯಕ್ಕೆ ವರದಿ ಮಾಡಿಕೊಳ್ಳುತ್ತಿದ್ದಾರೆ.

    ಪಿಡಿಒ ವರ್ಗಾವಣೆ ಬಗ್ಗೆ ಗಮನಕ್ಕೆ ಬಂದಿದೆ. ಸಿ ಆಂಡ್ ಆರ್ ಇಲ್ಲದೆ ವರ್ಗಾವಣೆ, ಕೌನ್ಸೆಲಿಂಗ್ ಮಾಡದಿರುವ ಬಗ್ಗೆ ಸಚಿವರ ಗಮನಕ್ಕೆ ತರಲಾಗುವುದು. ಪಿಡಿಒಗಳ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.

    | ನಾರಾಯಣಸ್ವಾಮಿ, ರಾಜ್ಯ ಪಂಚಾಯತ್ ಪರಿಷತ್ ಒಕ್ಕೂಟ ಅಧ್ಯಕ್ಷ

    ಅವಧಿ ಮುಗಿದ ಮೇಲೆ: ಜು.3ಕ್ಕೆ ಪಿಡಿಒಗಳ ಸಾಮಾನ್ಯ ವರ್ಗಾವಣೆ ಅವಧಿ ಮುಕ್ತಾಯವಾದರೂ ಸರ್ಕಾರ ಜು.25ರಂದು ವರ್ಗಾವಣೆ ಮಾಡಿದೆ. ಈ ರೀತಿಯ ವರ್ಗಾವಣೆಯನ್ನು ಪಿಡಿಒಗಳು ನಿರೀಕ್ಷಿಸಿರಲಿಲ್ಲ. ಹಲವರು ಸದ್ಯ ಇರುವ ಸ್ಥಳದಲ್ಲೇ ಮಕ್ಕಳನ್ನು ಶಾಲೆಗಳಿಗೆ ಸೇರಿಸಿದ್ದು, ಈಗ ಅನಿರೀಕ್ಷಿತ ವರ್ಗಾವಣೆಯಿಂದ ಕಂಗಾಲಾಗಿದ್ದಾರೆ.

    ಪತ್ನಿ ಮೇಲೆ ವಿಕೃತಿ ಮೆರೆದ ಪತಿ; ಇಂಥ ಪೈಶಾಚಿಕ ಕೃತ್ಯ ಯಾರೂ ಮಾಡಿರಲಾರರು!

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts