More

    ಜ್ವಾಲಾಮಾಲಿನಿ ಜೇಸಿ ಸಂಸ್ಥೆಗೆ 9 ಪ್ರಶಸ್ತಿ

    ಎನ್.ಆರ್.ಪುರ: ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದ 2024ರ ಜೆಸಿಐ ಮಧ್ಯವಾರ್ಷಿಕ ಸಮ್ಮೇಳನ, ಮನ್ವಂತರ, ನಕ್ಷತ್ರಗಳ ಸಮ್ಮಿಲನದಲ್ಲಿ ಎನ್.ಆರ್.ಪುರ ಜ್ವಾಲಾಮಾಲಿನಿ ಜೇಸಿ ಸಂಸ್ಥೆಗೆ 9 ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ತಿಳಿಸಿದ್ದಾರೆ.

    ರೀಜನ್-ಡಿ ವಿಭಾಗದಲ್ಲಿ ಅತ್ಯುತ್ತಮ ಘಟಕ, ಘಟಕದ ಅಧ್ಯಕ್ಷ ಎಂ.ಪಿ.ಮನು ಅವರಿಗೆ ಅತ್ಯುತ್ತಮ ಅಧ್ಯಕ್ಷ, ಕಾರ್ಯದರ್ಶಿ ವಿನುತ್ ಅವರಿಗೆ ಉತ್ತಮ ಕಾರ್ಯದರ್ಶಿ ಸೇರಿದಂತೆ 9 ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ 6 ತಿಂಗಳಲ್ಲಿ ಮುಖ್ಯವಾಗಿ ಮಂಗಳೂರಿನ ಪ್ರೆಸಿಡೆನ್ಸಿಯಲ್ ಅಕಾಡೆಮಿಯಲ್ಲಿ ನಡೆದ ತರಬೇತಿಯಲ್ಲಿ ಭಾಗಿ, ಪಲ್ಸ್ ಪೋಲಿಯೋ ಕಾರ್ಯಕ್ರಮ, ವಿಶ್ವ ಪರಿಸರ ದಿನಾಚರಣೆ, ವಿಶ್ವ ತಂಬಾಕು ವಿರೋಧಿ ದಿನಾಚರಣೆ, ಅವಾರ್ಡ್ ಓರಿಯೆಂಟೇಷನ್, ಸೆಮಿನಾರ್ ಆಯೋಜನೆ, ಲಾಟ್ಸ್ ವಲಯ ಕಾರ್ಯಕ್ರಮದಲ್ಲಿ ಭಾಗಿ, ಅತಿ ಹೆಚ್ಚು ಅಂಕ ಪಡೆದ ಜೇಸಿ ಕುಟುಂಬದ ಮಕ್ಕಳಿಗೆ ನಗದು ಪುರಸ್ಕಾರ, ಎರಡು ಬಡ ಕುಟುಂಬದ ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
    ಸಮ್ಮೇಳನದಲ್ಲಿ ವಲಯ ಅಧ್ಯಕ್ಷೆ ಆಶಾ ಜೈನ್, ಉಪಾಧ್ಯಕ್ಷ ಕೆ.ಎ.ಸುಜನ್ ಹಾಗೂ ವಲಯದ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ಪುರಸ್ಕಾರ ಪಡೆದಿದ್ದೇವೆ. ಸಾಧನೆಗೆ ಜೇಸಿ ಸಂಸ್ಥೆ ಸದಸ್ಯರು, ಪೂರ್ವಾಧ್ಯಕ್ಷರ ಮಾರ್ಗದರ್ಶನ ಕಾರಣ ಎಂದು ಹೇಳಿದ್ದಾರೆ.
    ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ವಲಯ ಅಧಿಕಾರಿ ಚರಣ್, ಘಟಕದ ಅಧ್ಯಕ್ಷ ಎಂ.ಪಿ.ಮನು, ಉಪಾಧ್ಯಕ್ಷ ಅಪೂರ್ವ ರಾಘು, ಕಾರ್ಯದರ್ಶಿ ವಿನುತ್, ಸಹ ಕಾರ್ಯದರ್ಶಿ ದರ್ಶನ್, ಪವನ್‌ಕರ್, ಸದಸ್ಯರಾದ ರಜಿತ್, ಆದರ್ಶ, ಜೋಸೆಫ್, ಪ್ರೀತಂ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts