More

    ಧಾರಾಕಾರ ಮಳೆ ನಡುವೆ ರಸ್ತೆಯಲ್ಲಿ 8 ಅಡಿ ಉದ್ದದ ಮೊಸಳೆ ಓಡಾಟ; ಸ್ಥಳೀಯರು ಏನಂದ್ರು ಗೊತ್ತಾ?

    ಮುಂಬೈ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನದಿಗಳೂ ಉಕ್ಕಿ ಹರಿಯುತ್ತಿವೆ. ನದಿಯಿಂದ ಹೊರಬಂದ ಮೊಸಳೆಯೊಂದು ರಸ್ತೆಯಲ್ಲಿ ಓಡಾಡಿದ್ದು ಅಲ್ಲಿದ ಜನರನ್ನು ಬೆಚ್ಚಿಬಿಳಿಸಿದೆ. ರಸ್ತೆಯಲ್ಲಿ 8 ಅಡಿ ಉದ್ದದ ಮೊಸಳೆ ಓಡಾಡುತ್ತಿರುವ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರತ್ನಗಿರಿ ಜಿಲ್ಲೆಯ ಚಿಪ್ಲುನ್ ತೆಹಸಿಲ್​ ರಸ್ತೆಯಲ್ಲಿ ಈ ದೃಶ್ಯ ಕಂಡುಬಂದಿದೆ.

    ಇದನ್ನು ಓದಿ: ಲೋಕಸಭೆ ಅಧಿವೇಶನದಿಂದ ಪ್ರತಿಪಕ್ಷಗಳು ಹೊರನಡೆದಿದ್ದೇಕೆ?; ಸಭಾತ್ಯಾಗಕ್ಕೆ ಕಾರಣವಾದ ಬೇಡಿಕೆ ಏನು.. ಇಲ್ಲಿದೆ ಡೀಟೇಲ್ಸ್​

    ನಗರದಲ್ಲಿ ಹರಿಯುವ ಶಿವನದಿಯಲ್ಲಿ ಮೊಸಳೆಗಳು ಕಂಡುಬರುತ್ತವೆ. ಭಾರೀ ಮಳೆಯಿಂದಾಗಿ ಮೊಸಳೆ ನದಿಯಿಂದ ಹೊರ ಬಂದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ರತ್ನಗಿರಿಯಲ್ಲಿ ದಿನದಿಂದ ದಿನಕ್ಕೆ ಮೊಸಳೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ನಗರಸಭೆ ಮತ್ತು ಅರಣ್ಯ ಇಲಾಖೆಗೆ ಪದೇಪದೆ ದೂರು ನೀಡುತ್ತಿದ್ದರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪವಾಗಿದೆ. ಅಲ್ಲದೆ ಈ ರೀತಿ ಮೊಸಳೆಗಳು ಹೊರಗೆ ಬಂದರೆ ಭೀತಿ ಒಂದೆಡೆ ಆದರೆ ಮತ್ತೊಂದೆಡೆ ರಸ್ತೆಯಲ್ಲಿ ಓಡಾಡಲು ಪರದಾಡುವಂತಾಗಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು ಎನ್ನಲಾಗಿದೆ.

    ಸದ್ಯ ವೈರಲ್​ ಆಗುತ್ತಿರುವ ವೀಡಿಯೊವನ್ನು ಆಟೋರಿಕ್ಷಾ ಚಾಲಕನೊಬ್ಬ ಚಿತ್ರೀಕರಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ವೀಡಿಯೊದಲ್ಲಿ ಆಟೋರಿಕ್ಷಾವೊಂದು ಹೆಡ್‌ಲೈಟ್ ಆನ್ ಮಾಡಿ ಮೊಸಳೆಯನ್ನು ಬೆನ್ನಟ್ಟುತ್ತಿರುವುದನ್ನು ಕಾಣಬಹುದು. ಜತೆಗೆ ಇನ್ನು ಕೆಲವು ವಾಹನಗಳು ಇರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.

    ಅಂದ್ಹಾಗೆ ಮೊಸಳೆಯು ಬೀದಿಗಳಲ್ಲಿ ತಿರುಗಾಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಗುಜರಾತ್‌ನ ವಡೋದರಾದಲ್ಲಿ ವಿಶ್ವಾಮಿತ್ರಿ ನದಿಯಿಂದ ಮೊಸಳೆಯೊಂದು ಹೊರಬಂದು ರಸ್ತೆಗೆ ಬಂದಿತ್ತು. 12 ಅಡಿ ಉದ್ದದ ಮೊಸಳೆಯನ್ನು ನೋಡಿ ಜನರು ಬೆರಗಾಗಿದ್ದರು. ನಂತರ ಮೊಸಳೆ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅರಣ್ಯಾಧಿಕಾರಿಗಳು ಮೊಸಳೆಯನ್ನು ಹಿಡಿದು ಮತ್ತೆ ನದಿಗೆ ಬಿಟ್ಟಿದ್ದರು. (ಏಜೆನ್ಸೀಸ್​​​​)

    ಕಲ್ಕಿ 2898 AD ಸೀಕ್ವೆಲ್ ಬಿಡುಗಡೆ ಯಾವಾಗ; ನಿರ್ದೇಶಕ ನಾಗ್​ ಅಶ್ವಿನ್​​ ಹೇಳಿದ್ದೇನು? ಇಲ್ಲಿದೆ ಡೀಟೇಲ್ಸ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts