More

    737 ಮ್ಯಾಕ್ಸ್‌ ವಿಮಾನ ಮಾರಾಟ ಕುಸಿತ: ಬೋಯಿಂಗ್‌ ಕಂಪನಿ ಷೇರುಗಳ ಬೆಲೆ ಪಾತಾಳಕ್ಕೆ

    ನವದೆಹಲಿ: ಬೋಯಿಂಗ್‌ ವಿಮಾನಗಳ ಮಾರಾಟವು ಮೇ ತಿಂಗಳಲ್ಲಿ ವ್ಯಾಪಕ ಹಿನ್ನಡೆ ಅನುಭವಿಸಿದೆ. ಈ ಕಂಪನಿಯ ಅತಿಹೆಚ್ಚು ಮಾರಾಟವಾಗುವ 737 ಮ್ಯಾಕ್ಸ್‌ ಮಾದರಿ ವಿಮಾನಕ್ಕೆ ಸತತ ಎರಡನೇ ತಿಂಗಳು ಯಾವುದೇ ಬೇಡಿಕೆಗಳು ಬಂದಿಲ್ಲ.

    ಕಂಪನಿಯು ಕೇವಲ ನಾಲ್ಕು ಹೊಸ ವಿಮಾನಗಳಿಗೆ ಆರ್ಡರ್‌ಗಳನ್ನು ಪಡೆದಿದೆ. ಇದು ಯುರೋಪ್‌ನ ಪ್ರತಿಸ್ಪರ್ಧಿ ಕಂಪನಿ ಏರ್‌ಬಸ್‌ಗೆ ಹೋಲಿಸಿದರೆ ಸಾಕಷ್ಟು ಹಿನ್ನಡೆಯಾಗಿದೆ. ಏರ್​ಬಸ್​ ಇದೇ ಅವಧಿಯಲ್ಲಿ 15 ವಿಮಾನಗಳಿಗೆ ಆರ್ಡರ್​ ಪಡೆದುಕೊಂಡಿದೆ.

    ಏರೋಲಿನಾಸ್ ಅರ್ಜೆಂಟೀನಾಸ್ ವಿಮಾನಯಾನ ಸಂಸ್ಥೆ ಕೂಡ ತಾನು ಒಂದು ಮ್ಯಾಕ್ಸ್ ಜೆಟ್‌ ವಿಮಾನಕ್ಕೆ ನೀಡಿದ್ದ ಆರ್ಡರ್ ಅನ್ನು ಕೂಡ ರದ್ದುಗೊಳಿಸಿದೆ, ಈ ಮೂಲಕ ಬೋಯಿಂಗ್‌ನ ನಿವ್ವಳ ಮಾರಾಟವು ಈ ತಿಂಗಳಿಗೆ ಮೂರಕ್ಕೆ ಇಳಿಯಿತು. ಈ ಹಿನ್ನೆಲೆಯಲ್ಲಿ ಬೋಯಿಂಗ್ ಕಂಪನಿಯ ಷೇರುಗಳ ಬೆಲೆ ಕುಸಿತ ಕಂಡಿದೆ. ಹಲವಾರು ಸಮಸ್ಯೆಗಳು ಬೋಯಿಂಗ್‌ನ ಉತ್ಪಾದನೆ ಮತ್ತು ಮಾರಾಟದ ಮೇಲೆ ಪರಿಣಾಮ ಬೀರುತ್ತಿವೆ.

    ಅಲಾಸ್ಕಾ ಏರ್‌ಲೈನ್ಸ್​ನ ಮ್ಯಾಕ್ಸ್‌ ವಿಮಾನದಲ್ಲಿ ಬಾಗಿಲು ಕಿತ್ತುಹೋದ ಘಟನೆಯ ನಂತರ ಮತ್ತು ತ್ವರಿತ ಉತ್ಪಾದನೆಗಾಗಿ ಅಡ್ಡ ದಾರಿಗಳನ್ನು ಅನುಸರಿಸುವ ಕುರಿತ ಆರೋಪಗಳ ಹಿನ್ನೆಲೆಯಲ್ಲಿ ಅಮೆರಿಕದ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್, 737 ಮ್ಯಾಕ್ಸ್‌ ವಿಮಾನಗಳ ಉತ್ಪಾದನೆಯನ್ನು ಮಿತಿಗೊಳಿಸುತ್ತಿದೆ.

    ರೂ. 96,000 ಕೋಟಿ ಮೊತ್ತದ 5ಜಿ ಸ್ಪೆಕ್ಟ್ರಮ್​ ಹರಾಜು ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts