More

    ಶ್ರೀಲಂಕಾದಲ್ಲಿ ಹೆಚ್ಚಿದ ಸೈಬರ್​ಕ್ರೈಂ; 60 ಮಂದಿ ಭಾರತೀಯರನ್ನು ಅರೆಸ್ಟ್​ ಮಾಡಿದ ಪೊಲೀಸರು

    ಕೊಲಂಬೋ: ಆನ್​ಲೈನ್​ ಮೂಲಕ ಕೋಟ್ಯಂತರ ರೂಪಾಯಿ ಹಣಕಾಸು ವಂಚನೆ ಎಸಗಲಾಗಿದೆ ಎಂದು ಆರೋಪಿಸಿ ಶ್ರೀಲಂಕಾ ಪೊಲೀಸರು 60ಕ್ಕೂ ಭಾರತೀಯರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಶ್ರೀಲಂಕಾದ ರಾಜಧಾನಿ ಕೊಲಂಬೋದ ಮಡಿವೇಲಾ, ಬಟ್ಟರಮುಲ್ಲಾ ಮತ್ತು ನೆಗೊಂಬೋದಲ್ಲಿ ವಾಸಿಸುವ ಭಾರತೀಯರನ್ನು ಬಂಧಿಸಲಾಗಿದ್ದು, 135 ಮೊಬೈಲ್​, 55ಕ್ಕೂ ಹೆಚ್ಚು ಲ್ಯಾಪ್​ಟಾಪ್​ಗಳನ್ನು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯೊಬ್ಬರು ನೀಡಿದ ದೂರನ್ನು ಆಧರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್​ನಲ್ಲಿ ಭಾರತಕ್ಕಾಗಿ ಪ್ರತ್ಯೇಕ ರೂಲ್ಸ್​ ಮಾಡಲಾಗಿದೆ; ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ ಪಾಕ್​ ಮಾಜಿ ನಾಯಕ

    ಈ ಕುರಿತು ಮಾತನಾಡಿರುವ SSP ನಿಹಾಲ್​ ತಲ್ದುವಾ, ಬಂಧಿತರು ಸಾಮಾಜಿಕ ಜಾಲತಾಣಗಳ ಮೂಲಕ ಸಂತ್ರಸ್ತರಿಗೆ ಹಣದ ಆಮಿಷ ಒಡ್ಡುತ್ತಿದ್ದರು. ಬಳಿಕ ಇಂತಿಷ್ಟು ಠೇವಣಿ ಇಡಬೇಕು ಎಂದು ಹೇಳಿ ಹಣ ಪಡೆದು ವಂಚಿಸುತ್ತಿದ್ದರು. ಈ ಬಗ್ಗೆ ಸಂತ್ರಸ್ತ ಮಹಿಳೆ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ದೊಡ್ಡ ಜಾಲ ಪತ್ತೆಯಾಗಿದೆ.

    ಬಂಧಿತರು ಹಣಕಾಸಿನ ವಂಚನೆ, ಅಕ್ರಮ ಬೆಟ್ಟಿಂಗ್ ಹಾಗೂ ಜೂಜು ಸೇರಿದಂತೆ ವಿವಿಧ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇವರಿಂದ ವಂಚನೆಗೊಳಗಾದವರಲ್ಲಿ ಸ್ಥಳೀಯರು ಮತ್ತು ವಿದೇಶಿಯರು ಹೆಚ್ಚಿನವರಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಾಗುವುದು ಎಂದು SSP ನಿಹಾಲ್​ ತಲ್ದುವಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts