More

    ಧೂಮಪಾನದಿಂದ ಈ ವ್ಯಕ್ತಿಗೆ ಬಂದ ಸ್ಥಿತಿಯನ್ನು ಕಂಡು ದಂಗಾದ ವೈದ್ಯರು; ಹೀಗೂ ಆಗುತ್ತಾ ಎಂದ ನೆಟ್ಟಿಗರು

    ನವದೆಹಲಿ: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಸಿಗರೇಟ್​ ಸೇವನೆಯಿಂದ ನಿಮ್ಮ ಉಸಿರಾಟದಲ್ಲಿ ತೊಂದರೆಯಾಗಬಹುದು ಮತ್ತು ಸಾವು ಸಂಭವಿಸಬಹುದು ಎಂಬ ಶಾಸನಬದ್ಧ ಎಚ್ಚರಿಕೆಯನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ. ಇದರ ಹೊರತಾಗಿಯೂ ಜನ ಧೂಮಪಾನ ಮಾಡುತ್ತಿರುತ್ತಾರೆ. ಇದೀಗ ಧೂಮಪಾನಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆಯೊಂದು ಬೆಳಕಿಗೆ ಬಂದಿದ್ದು, ವೈದ್ಯರು ರೋಗಿಯ ರಿಪೋರ್ಟ್​ ಕಂಡು ಶಾಕ್​ ಆಗಿದ್ದಾರೆ.

    ಆಸ್ಟ್ರಿಯಾದಲ್ಲಿ ಈ ಘಟನೆ ನಡೆದಿದ್ದು, ನಿರಂತರ ಧೂಮಪಾನದಿಂದಾಗಿ ವ್ಯಕ್ತಿಯ ಗಂಟಲಲ್ಲಿ ಕೂದಲು ಬೆಳೆದಿದ್ದು, ಈ ವಿಚಾರ ಸ್ಕ್ಯಾನಿಂಗ್​ನಲ್ಲಿ ಹೊರ ಬಂದಿದೆ. ರೋಗಿಯ ರಿಪೋರ್ಟ್​​ ಕಂಡು ವೈದ್ಯರು ದಂಗಾಗಿದ್ದು, ಆತನಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

    ಆಸ್ಟ್ರಿಯಾದಲ್ಲಿ ಈ ಘಟನೆ ನಡೆದಿದ್ದು, ಈ ವ್ಯಕ್ತಿಗೆ 52 ವರ್ಷ ವಯಸ್ಸಾಗಿದೆ. ಆತ 1990 ರಿಂದ ಸಿಗರೇಟ್ ಸೇದುವ ಅಭ್ಯಾಸ ಹೊಂದಿದ್ದ. 2007ರಲ್ಲಿ ನಿರಂತರ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದಾಗಿ ವೈದ್ಯರ ಬಳಿಗೆ ಹೋದಾಗ ಗಂಟಲಿನ ಒಳಭಾಗದಲ್ಲಿ ಅನೇಕ ಸಣ್ಣ ಕಪ್ಪು ಕೂದಲುಗಳು ಬೆಳೆದಿರುವುದು ಪರೀಕ್ಷೆಯ ವೇಳೆ ಕಂಡು ಬಂದಿದೆ. ಇದನ್ನು ನೋಡಿದ ವೈದ್ಯರು ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಅವರು ಹಿಂದೆಂದೂ ಇಂತಹ ಪ್ರಕರಣವನ್ನು ನೋಡಿರಲಿಲ್ಲವಂತೆ.

    Smoking

    ಇದನ್ನೂ ಓದಿ: ವೈಯಕ್ತಿಕ ಸಾಧನೆ ಹೆಚ್ಚಿನ ಮಹತ್ವ ಗಿಟ್ಟಿಸಿಕೊಳ್ಳುವುದಿಲ್ಲ; ವಿರಾಟ್​ಗೆ ಪರೋಕ್ಷವಾಗಿ ಟಾಂಗ್​​ ಕೊಟ್ರಾ ರೋಹಿತ್​?

    ಇದಾದ ಬಳಿಕ ವೈದ್ಯರು ರೋಗಿಗೆ ಔಷಧಿ ನೀಡಿದರೂ ಹೆಚ್ಚಿನ ಪ್ರಯೋಜನವಾಗಲಿಲ್ಲಗಿಲ್ಲ. ವರದಿಯ ಪ್ರಕಾರ, ವೈದ್ಯರು ಗಂಟಲಿನಿಂದ ಕೂದಲನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಿದ್ದಾರೆ. ಆದರೆ ಇದರ ನಂತರವೂ ರೋಗಿಯ ಕುತ್ತಿಗೆಯಲ್ಲಿ ಮುಂದಿನ 14 ವರ್ಷಗಳವರೆಗೆ ಕೂದಲು ಬೆಳೆಯುತ್ತಲೇ ಇತ್ತು. ನಿಯಮಿತ ಧೂಮಪಾನದಿಂದ ವ್ಯಕ್ತಿಯು ಈ ಸಮಸ್ಯೆಗೆ ಒಳಗಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.

     ಧೂಮಪಾನವು ಗಂಟಲಿನಲ್ಲಿ ಊತವನ್ನು ಉಂಟುಮಾಡುತ್ತದೆ, ಇದರಿಂದಾಗಿ ಜೀವಕೋಶಗಳು ಸಣ್ಣ ಕೂದಲುಗಳಾಗಿ ಪರಿವರ್ತನೆಗೊಳ್ಳುತ್ತವೆ. ಈ ಕೂದಲುಗಳು 6-9 ಇಂಚುಗಳವರೆಗೆ ಬೆಳೆಯುತ್ತವೆ ಮತ್ತು ಕೆಲವೊಮ್ಮೆ ಬಾಯಿಯನ್ನು ಕೂಡ ತಲುಪಬಹುದು. ವ್ಯಕ್ತಿ 2020 ರಲ್ಲಿ ಧೂಮಪಾನವನ್ನು ತೊರೆದಿದ್ದು, ಆತನಿಗೆ ಎಂಡೋಸ್ಕೋಪಿಕ್ ಆರ್ಗನ್ ಪ್ಲಾಸ್ಮಾ ಎಂಬ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಇದರಲ್ಲಿ, ಕೂದಲು ಬೆಳೆಯುವ ಮಾರ್ಗವನ್ನು ಮುಚ್ಚಲಾಗುತ್ತದೆ. ಸತತ ಚಿಕಿತ್ಸೆಯ ಫಲವಾಗಿ ಈ ವ್ಯಕ್ತಿ ಸಮಸ್ಯೆಯಿಂದ ಹೊರಬಂದಿದ್ದು, ಧೂಮಪಾನ ಎಷ್ಟು ಅಪಾಯಕಾರಿ ಎಂಬುದನ್ನು ತೊರಿಸಿಕೊಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts