More

    ಹಾವಿನ ಮರಿಗಳು ಕಾಡಿಗೆ

    ವಿಜಯವಾಣಿ ಸುದ್ದಿಜಾಲ ಧಾರವಾಡ: ಹಾವು ಹಿಡಿಯಲು ಹೋಗಿದ್ದ ವೇಳೆ ಪತ್ತೆಯಾಗಿದ್ದ ಮೊಟ್ಟೆಗಳನ್ನು ವಶಕ್ಕೆ ಪಡೆದ ಉರಗ ರಕ್ಷಕ ಅಡಿವೆಪ್ಪ ತಳವಾರ, ಅವುಗಳಿಗೆ ಕೃತಕ ಕಾವು ಕೊಟ್ಟು ಮರಿಗಳಾದ ಮೇಲೆ ಕಾಡಿಗೆ ಬಿಟ್ಟಿದ್ದಾರೆ.
    ವೈಲ್ಡ್ ಲೈಫ್ ಸೊಸೈಟಿ ಉಪಾಧ್ಯಕ್ಷರಾಗಿರುವ ಅಡಿವೆಪ್ಪ ತಳವಾರ ವರೂರ ಗ್ರಾಮದ ಮನೆಯೊಂದರಲ್ಲಿ ಹಾವು ಹಿಡಿಯಲು ಹೋಗಿದ್ದರು. ಈ ವೇಳೆ ಹಾವಿನ 8 ಮೊಟ್ಟೆಗಳು ಪತ್ತೆಯಾಗಿದ್ದವು. ಮನೆಗೆ ಒಯ್ದು ಕೃತಕ ಕಾವು ಕೊಟ್ಟು 62 ದಿನ ಜೋಪಾನ ಮಾಡಿದ್ದರು. ಇತ್ತೀಚೆಗೆ 5 ಮರಿಗಳು ಹೊರಬಂದು ಉಳಿದವು ಮೃತಪಟ್ಟಿದ್ದವು. ಹಸಿರು ಹಾವು ಅಂದರೆ ಗ್ರೀನ್ ಕಿಲ್ ಬ್ಯಾಕ್ ಪ್ರಬೇದದ ಮರಿಗಳನ್ನು ಜೋಪಾನದಿಂದ ಕಾಡಿಗೆ ಬಿಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts