More

    450 ಕ್ವಿಂಟಾಲ್ ಅಡಕೆ ಮಾರಾಟ

    ವಿಜಯವಾಣಿ ಸುದ್ದಿಜಾಲ ಶಿರಸಿ: ಇಲ್ಲಿನ ಟಿಎಂಎಸ್​ನಲ್ಲಿ ಮಂಗಳವಾರ ಟೆಂಡರ್ ವ್ಯವಸ್ಥೆಯಡಿ ಅಡಕೆ ವಹಿವಾಟು ನಡೆಸಲಾಯಿತು.

    ಬೆಳಗ್ಗೆ 10.30ರಿಂದ ಸುಮಾರು 200 ಲಾಟ್ ತೆಗೆದು 130ಕ್ಕೂ ಹೆಚ್ಚು ಬೆಳೆಗಾರರಿಗೆ ಮಹಸೂಲು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ನೇರ ಖರೀದಿಯಿಂದ ದರ ಏರಿಕೆ ಸಾಧ್ಯವಿಲ್ಲ ಎಂಬುದನ್ನು ಅರಿತ ಸಂಸ್ಥೆ ಪ್ರಮುಖರು ಟೆಂಡರ್ ಪ್ರಕ್ರಿಯೆ ಮೂಲಕ ವಹಿವಾಟಿಗೆ ಅವಕಾಶ ನೀಡಿದ ಕಾರಣ ವಿವಿಧೆಡೆಯ ಸುಮಾರು 50 ಜನ ವ್ಯಾಪಾರಿಗಳು ಆಗಮಿಸಿದ್ದರು. ಕೆಂಪಡಕೆ, ಬೆಟ್ಟೆ, ಚಾಲಿ, ಕೋಕ, ಬೆಳಿಗೋಟು, ಚಾಲಿಕೆಂಪು ಸೇರಿ ಸಾಮಾನ್ಯ ದಿನದ ವಹಿವಾಟಿನಂತೆ ಖರೀದಿ ಪ್ರಕ್ರಿಯೆ ನಡೆಯಿತು. ಒಟ್ಟು ಟೆಂಡರ್ ಪ್ರಕ್ರಿಯೆಯಲ್ಲಿ 151 ಕ್ವಿಂಟಲ್ ಅಡಕೆ ಮಾರಾಟ ಮಾಡಲಾಯಿತು. 30 ರಿಂದ 40 ಕ್ವಿಂಟಾಲ್ ಕೆಂಪಡಕೆ, ಸುಮಾರು 80 ಕ್ವಿಂ. ಚಾಲಿ, ಉಳಿದಂತೆ ಎರಡನೇ ದರ್ಜೆ ಅಡಕೆ ಮಾರಾಟ ನಡೆಯಿತು. ಸೇಲ್ ಯಾರ್ಡ್ ವ್ಯಾಪ್ತಿಯಲ್ಲಿ ಟೆಂಡರ್​ದಾರರಿಗೆ ಮಾತ್ರ ಅವಕಾಶ ನೀಡಿ ಲಾಕ್​ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು.

    ಟಿಎಸ್​ಎಸ್ ನೇರ ಖರೀದಿ: ಅಡಕೆ ಬೆಳೆಗಾರರ ಹಿತ ಕಾಯಲು ಇಲ್ಲಿನ ಟಿಎಸ್​ಎಸ್ ಆರಂಭಿಸಿದ ಅಡಕೆ ನೇರ ಖರೀದಿ ಪ್ರಕ್ರಿಯೆಯಡಿ ಮಂಗಳವಾರ 450 ಕ್ವಿಂಟಲ್​ನಷ್ಟು ಅಡಕೆ ವ್ಯಾಪಾರವಾಗಿದೆ. ಇದರಲ್ಲಿ ಶೇ. 75 ಚಾಲಿ ಅಡಕೆಯಾದರೆ ಶೇ. 25ರಷ್ಟು ಕೆಂಪಡಕೆ ಮಾರಾಟವಾಗಿದೆ. ಸುಮಾರು 150ರಷ್ಟು ರೈತರು ತಮ್ಮ ಮಹಸೂಲು ಮಾರಾಟ ಮಾಡಿದರು. ಟಿಎಸ್​ಎಸ್ ಟೆಂಡರ್ ವ್ಯವಸ್ಥೆಯಲ್ಲಿ ಕೆಂಪಡಕೆ ಕ್ವಿಂಟಾಲ್​ಗೆ 34,239 ರಿಂದ 36,699 ರೂ., ಚಾಲಿ- 22,199 ರಿಂದ 27,041 ರೂ.ಗೆ ಮಾರಾಟವಾಗಿದೆ.

    ಮೊದಲ ದಿನವೇ ಉತ್ತಮ ಸ್ಪಂದನೆ: ಸಿದ್ದಾಪುರ: ಕರೊನಾ ಲಾಕ್ ಡೌನ್​ನಿಂದಾಗಿ ತಾಲೂಕು ವ್ಯವಸಾಯ ಹುಟ್ಟುವಳಿ ಸಹಕಾರಿ ಮಾರಾಟ ಸಂಘದಲ್ಲಿ (ಟಿಎಂಎಸ್) ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಅಡಕೆ ವ್ಯಾಪಾರ ನೇರ ಖರೀದಿಯ ಮೂಲಕ ಮಂಗಳವಾರ ಪುನಃ ಆರಂಭಗೊಂಡಿದೆ.

    ಸಂಘದ ಸದಸ್ಯರ ಹಿತದೃಷ್ಟಿಯನ್ನಿಟ್ಟುಕೊಂಡು ಆಡಕೆ ವ್ಯಾಪಾರ ಪ್ರಾರಂಬಿಭಿಸಿರುವ ಮೊದಲ ದಿನವೇ ಉತ್ತಮ ಸ್ಪಂದನೆ ದೊರೆತಿದೆ. ವ್ಯಾಪಾರದ ಸಂದರ್ಭದಲ್ಲಿ ವ್ಯಾಪಾರಾಂಗಣದಲ್ಲಿ ಟೆಂಡರ್ ಬರೆಯುವವರಿಗೆ, ಎಪಿಎಂಸಿ ಅಧಿಕಾರಿಗಳಿಗೆ, ಸಂಘದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಮಾತ್ರ ಅವಕಾಶ ನೀಡಿ ಸಾಮಾಜಿಕ ಅಂತರದೊಂದಿಗೆ ನೇರ ಖರೀದಿ ನಡೆಯಿತು.

    ಟಿಎಂಎಸ್, ಕ್ಯಾಂಪ್ಕೋ ಹಾಗೂ ಪಟ್ಟಣದ ಅಡಕೆ ವ್ಯಾಪಾರಿಗಳು ಮಾತ್ರ ಮಂಗಳವಾರ ಟೆಂಡರ್ ಬರೆದಿದ್ದು ಹೊರಗಿನವರು ಯಾರೂ ಟೆಂಡರ್ ಬರೆಯುವುದಕ್ಕೆ ಬಂದಿಲ್ಲ. ಆದರೂ ಕೆಂಪಡಿಕೆ ಹಾಗೂ ಚಾಲಿ ಈ ಹಿಂದಿನಂತೆ ವ್ಯಾಪಾರವಾಗಿರುವುದರಿಂದ ಬೆಳೆಗಾರರಲ್ಲಿ ಸಂತಸ ತಂದಿದೆ.

    ಮಾರಾಟ, ದರ: ಕೆಂಪಡಕೆ 34,299ರಿಂದ 35,499ರೂ., ತಟ್ಟಿಬೆಟ್ಟೆ 18,209ರಿಂದ 26, 089ರೂ., ಕೆಂಪಗೋಟು 19, 369 ರಿಂದ 21069 ರೂ., ಬಿಳೆಗೋಟು 13,869ರಿಂದ 19119 ರೂ., ಚಾಲಿ 24,299ರಿಂದ 26,059 ರೂ., ಕೋಕಾ 12, 612ರಿಂದ 19, 369 ರೂ., ಕಾಳುಮೆಣಸು 30,699 ರೂ., ಗಳಾಗಿದೆ. 62 ಕ್ವಿಂಟಾಲ್ ಚಾಲಿ, 22 ಕ್ವಿಂಟಾಲ್ ಕೆಂಪಡಕೆ, 2 ಕ್ವಿಂಟಾಲ್ ಕಾಳಮೆಣಸು ಉಳಿದಂತೆ ಕೋಕಾ, ಬಿಳಿಗೋಟು, ಕೆಂಪುಗೋಟು ಸೇರಿ ಒಟ್ಟು 115 ಕ್ವಿಂಟಾಲ್​ನಷ್ಟು ವ್ಯಾಪಾರವಾಗಿದೆ.

    ಅಡಕೆ ಮಾರಿದ ಮೂವರು ರೈತರು: ಕುಮಟಾ ಎಪಿಎಂಸಿ ಆವಾರದಲ್ಲಿರುವ ಕ್ಯಾಂಪ್ಕೋ ಶಾಖೆಯಲ್ಲಿ ಸೋಮವಾರದಿಂದ ಸದಸ್ಯ ರೈತರಿಂದ ಅಡಕೆ ಖರೀದಿ ಆರಂಭವಾಗಿದೆ.

    ಆರಂಭದ ದಿನ ಸೋಮವಾರ ಕೇವಲ ಮೂವರು ರೈತರು ಟೋಕನ್ ಪಡೆದು ತಲಾ ಒಂದು ಕ್ವಿಂಟಾಲ್​ನಷ್ಟು ಅಡಕೆ ವಿಕ್ರಿಯಿಸಿದ್ದಾರೆ. ಹಳೇ ಚಾಲಿ ಅಡಕೆಗೆ ಕೆಜಿಗೆ 255 ರೂ. ಹಾಗೂ ಹೊಸ ಚಾಲಿ ಅಡಕೆಗೆ 245 ರೂ .ದರದಂತೆ ಖರೀದಿಸಲಾಗಿದೆ. ಉಳಿದಂತೆ ಪ್ರತಿವಾರದಲ್ಲಿ ಸೋಮವಾರದಂತೆ ಬುಧವಾರ ಹಾಗೂ ಶುಕ್ರವಾರವೂ ಖರೀದಿ ಪ್ರಕ್ರಿಯೆ ನಡೆಯಲಿದ್ದು ಏ.22 ರ ಬುಧವಾರಕ್ಕಾಗಿ ಈಗಾಗಲೇ 25 ಕ್ಕೂ ಹೆಚ್ಚು ಮಂದಿ ಟೋಕನ್ ಪಡೆದಿದ್ದಾರೆ ಎಂದು ಕ್ಯಾಂಪ್ಕೋದ ಶಾಖಾ ವ್ಯವಸ್ಥಾಪಕ ಅಮರೇಶ ವಿಜಯವಾಣಿಗೆ ತಿಳಿಸಿದ್ದಾರೆ.

    ಇಂದು 30 ಸದಸ್ಯರಿಂದ ಅಡಕೆ ಖರೀದಿ ಮಾಡಲಾಗಿದೆ. ಮಾರ್ಚ್ ತಿಂಗಳಲ್ಲಿ ವ್ಯಾಪಾರ ಇಲ್ಲದಿದ್ದರಿಂದ ತೊಂದರೆ ಉಂಟಾಗಿದೆ. ವಾರದಲ್ಲಿ ನಾಲ್ಕು ದಿವಸ ವ್ಯಾಪಾರ ಮಾಡಲಾಗುತ್ತಿದೆ. ಅಡಕೆಯನ್ನು ವ್ಯಾಪಾರಕ್ಕೆ ತರುವ ಸದಸ್ಯರು ಸಂಘದಲ್ಲಿ ಮುಂಚಿತವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. | ಆರ್.ಎಂ. ಹೆಗಡೆ ಬಾಳೇಸರ ಟಿಎಂಎಸ್ ಅಧ್ಯಕ್ಷ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts