More

    ಕೆಎಸ್ಆರ್​ಟಿಸಿ ಬಸ್​ನಲ್ಲಿ ಮರೆತು ಹೋಗಿದ್ದ 2.5 ಲಕ್ಷ ರೂ. ವಾಪಸ್ ಕೊಟ್ಟ ಸಿಬ್ಬಂದಿ, ಕಾರ್ಯವೈಖರಿಗೆ ಮೆಚ್ಚುಗೆ

    ರಾಯಚೂರು: ನಿತ್ಯ ಜಂಜಾಟದ ಜೀವನದಲ್ಲಿ ಮರೆವು ಎನ್ನೋದು ಕಾಮನ್ ಆಗಿ ಬಿಟ್ಟಿದೆ. ಬಸ್ನಲ್ಲಿ ಪ್ರಯಾಣಿಸುವಾಗ, ಹೋಟೆಲ್ ನಲ್ಲಿ ತಿಂಡಿ ತಿನ್ನುವಾಗ ಜನ ಏನಾದ್ರು ಮರೆತು ಹೋಗುತ್ತಲೆ ಇರ್ತಾರೆ. ಕೆಲವರಿಗೆ ಅದೃಷ್ಡ ಎಂಬಂತೆ ಮರೆತ ವಸ್ತುಗಳು ಸಿಗುತ್ತೆ. ಆದ್ರೆ ಇನ್ನು ಕೆಲವರಿಗೆ ಅದು ಸಿಗೋದಿಲ್ಲ. ಅರೆ ಇದ‌ನೆಲ್ಲ ಇವಾಗ ಯಾಕ್ ಹೇಳ್ತಿದ್ದಾರೆ ಅನ್ಕೊಂಡ್ರಾ. ರಾಯಚೂರಿನಲ್ಲಿ ಅಂತಹುದೇ ಒಂದು ಅಪರೂಪದ ಘಟನೆ ನಡೆದಿದೆ.

    ಇದನ್ನೂ ಓದಿ: ಆಯೋಧ್ಯೆಯ ರಾಮ ಮಂದಿರದಲ್ಲಿ ಆವರಣದಲ್ಲೇ ಗುಂಡಿನ ದಾಳಿ, ಕರ್ತವ್ಯನಿರತ ಯೋಧ ಸಾವು: ರಾತ್ರಿ ಏನಾಯ್ತು?

    ಹುಬ್ಬಳಿಯಿಂದ ಹೈದ್ರಾಬಾದ್‌ಗೆ ಹೋಗುವ ಬಸ್‌ನಲ್ಲಿ ಮಾನ್ವಿ ನಿಲ್ದಾಣದಿಂದ ರಾಯಚೂರಿಗೆ ಬರುತ್ತಿದ್ದ ಬಸ್​ನಲ್ಲಿ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಸುಮಾರು 2.50 ಲಕ್ಷ ರೂಪಾಯಿಗಳಿದ್ದ ಬ್ಯಾಗ್​ ಹಾಗೂ ದಾಖಲಾತಿಗಳನ್ನು ವಾಪಸ್​ ಮಾಲೀಕರಿಗೆ ನೀಡುವ ಮೂಕ ಸಿಬ್ಬಂದಿ ಪ್ರಮಾಣಿಕತೆ ಮರೆದಿದ್ದಾರೆ. ತಮಗೆ ಸಿಕ್ಕ ಹಣದ ಬ್ಯಾಗ್ ನ್ನ ಸಂಬಂಧಿಸಿದವರಿಗೆ ಮರಳಿಸುವ ಮೂಲಕ ಸಾರಿಗೆ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಘಟನೆ ವಿವರ: ಹುಬ್ಬಳಿಯಿಂದ ಹೈದ್ರಾಬಾದ್‌ಗೆ ಹೋಗುವ ಬಸ್‌ನಲ್ಲಿ ಮಾನ್ವಿ ನಿಲ್ದಾಣದಿಂದ ರಾಯಚೂರಿಗೆ ಬರುತ್ತಿದ್ದ ಪ್ರಯಾಣಿಕ ಸೋಮಶೇಖರ ಪಾಟೀಲ್ ಇಳಿಯುವಾಗ ಅವಸರದಲ್ಲಿ ತಮ್ಮ ಬಳಿಯಿದ್ದ 2.50 ಲಕ್ಷ ರೂ.ಗಳಿದ್ದ ಬ್ಯಾಗನ್ನು ಮರೆತು ಇಳಿದಿದ್ದಾರೆ. ನಂತರ ಬಸ್ಸು ಹೈದ್ರಾಬಾದ್ ನಿಲ್ದಾಣ ತಲುಪಿದ್ದು, ಕಂಡಕ್ಟರ್ ಪರಿಶೀಲಿಸಿದ್ದಾರೆ. ಆಗ ಹಣವಿದ್ದ ಬ್ಯಾಗ್ ಪತ್ತೆಯಾಗಿದೆ. ಕೂಡಲೇ ಬ್ಯಾಂಕ್ ಪಾಸ್ ಬುಕ್ ನಲ್ಲಿ ಮೊಬೈಲ್ ನಂಬರ್ ಪಡೆದು ಕರೆ ಮಾಡಿದಾಗ ಹೌದು ಹಣ ಕಳೆದುಕೊಂಡಿದ್ದಾಗಿ ಪ್ರಯಾಣಿಕ ತಿಳಿಸಿದ್ದಾರೆ. ಬಸ್ ಗುರುವಾರ ಮರಳಿ ರಾಯಚೂರು ಬಸ್ ನಿಲ್ದಾಣಕ್ಕೆ ಬರಲಿದ್ದು, ಅಲ್ಲಿಗೆ ಬರುವಂತೆ ತಿಳಿಸಿದ ಚಾಲಕ ಮಂಜುನಾಥ ನವಲಗುಂದಾ ಮತ್ತು ಕಂಡಕ್ಟರ್ ಅವರ ಬ್ಯಾಗ್‌ನ್ನು ನಿಲ್ದಾಣಾಧಿಕಾರಿ ಶೀಲಪ್ಪ ಅವರ ಮೂಲಕ ಹಣವನ್ನು ವಾಪಸ್ ನೀಡಿದ್ದಾರೆ.

    ಚನ್ನಪಟ್ಟಣದಿಂದ ಡಿಸಿಎಂ ಸ್ಪರ್ಧೆ? ಹೊಸ ರಾಜಕೀಯ ಅಧ್ಯಾಯ ಪ್ರಾರಂಭ ಎಂದ ಶಿವಕುಮಾರ್​

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts