More

    ಒಂದೇ ವಾರದಲ್ಲಿ 15% ಏರಿಕೆಯಾಗಿದೆ ಸರ್ಕಾರಿ ಕಂಪನಿ ಷೇರು: ಬಜೆಟ್​ ಬಳಿಕ ಏನಾಗಲಿದೆ ಎನ್ನುತ್ತಾರೆ ತಜ್ಞರು?

    ಮುಂಬೈ: ಸರ್ಕಾರಿ ಕಂಪನಿಯಾದ (ಪಿಎಸ್​ಯು) ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಇಂಡಿಯನ್​ ರಿನ್ಯೂವೆಬಲ್​ ಎನರ್ಜಿ ಡೆವಲೆಪ್​ಮೆಂಟ್​ ಎಜೆನ್ಸಿ- IREDA) ಷೇರುಗಳ ಬೆಲೆ ಗುರುವಾರ ಸಾಕಷ್ಟು ಏರಿಕೆ ಕಂಡಿತು. ಇರೇಡಾ ಷೇರುಗಳ ಬೆಲೆ ಕಳೆದೊಂದು ವಾರದಲ್ಲಿ ಅಂದಾಜು 15 ಪ್ರತಿಶತದಷ್ಟು ಏರಿಕೆ ಕಂಡಿದೆ. ಈ ಷೇರು ಹೂಡಿಕೆದಾರರ ಗಮನವನ್ನು ಸೆಳೆಯುತ್ತಿದೆ.

    ಈ ಷೇರಿನ ಬೆಲೆ ಗುರುವಾರ ಇಂಟ್ರಾ ಡೇ ವಹಿವಾಟಿನಲ್ಲಿ 4.5 ಪ್ರತಿಶತದಷ್ಟು ಹೆಚ್ಚಾಗಿ 205.10 ರೂ. ಮುಟ್ಟಿತು. ತದನಂತರದ ಲಾಭಕ್ಕಾಗಿ ಹೂಡಿಕೆದಾರರು ಮಾರಾಟ ಮಾಡಿದ್ದರಿಂದ ಈ ಸ್ಟಾಕ್‌ ಬೆಲೆ ಕುಸಿತ ಕಂಡಿತು. ಅಂತಿಮವಾಗಿ ಶೇ. 0.46ರಷ್ಟು ಕುಸಿತ ಕಂಡು ರೂ 193.80 ಬೆಲೆಯನ್ನು ಮುಟ್ಟಿತು.

    ಇದಕ್ಕೂ ಒಂದು ದಿನ ಮೊದಲು, ಬುಧವಾರದಂದು ಈ ಕಂಪನಿಯ ಷೇರುಗಳ ಬೆಲೆ ಶೇಕಡಾ 8 ರಷ್ಟು ಏರಿಕೆ ಕಂಡಿದ್ದವು. ಬುಧವಾರದ ವಹಿವಾಟಿನಲ್ಲಿ 63.24 ಲಕ್ಷ ಷೇರುಗಳು ಬಿಎಸ್‌ಇಯಲ್ಲಿ ವಹಿವಾಟು ನಡೆಸಿದ್ದರೆ, ಎನ್‌ಎಸ್‌ಇಯಲ್ಲಿ 10.05 ಕೋಟಿ ಷೇರುಗಳು ವಹಿವಾಟು ನಡೆಸಿದ್ದವು.

    ಸಂಸತ್ತಿನ ಬಜೆಟ್ ಅಧಿವೇಶನವು ಜುಲೈ 22 ರಿಂದ ಆಗಸ್ಟ್ 9, 2024 ರವರೆಗೆ ನಡೆಯುವ ಅಂದಾಜಿದೆ. ಪ್ರಸ್ತುತ ಲೋಕಸಭೆಯ ಮೊದಲ ಅಧಿವೇಶನವು ಈಗಾಗಲೇ ಜೂನ್ 25ರಿಂದ ಪ್ರಾರಂಭವಾಗಿದ್ದು, ಜುಲೈ 4 ರವರೆಗೆ ಮುಂದುವರಿಯುತ್ತದೆ.

    ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಸರ್ಕಾರಿ ಕಂಪನಿಗಳಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಹೀಗಾಗಿ, ಹೂಡಿಕೆದಾರರು ಬಜೆಟ್​ನಿಂದ ಲಾಭ ಪಡೆಯುವ ಸಾಧ್ಯತೆಯಿರುವ ಷೇರುಗಳಲ್ಲಿ ಹೂಡಿಕೆ ಮಾಡಲು ನೋಡುತ್ತಿದ್ದಾರೆ.

    ವರದಿಯ ಪ್ರಕಾರ, ಮೋದಿ ಸರ್ಕಾರವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54EC ಅಡಿಯಲ್ಲಿ ಎರಡು ಸರ್ಕಾರಿ ಕಂಪನಿಗಳಾದ ಇರೆಡಾ ಮತ್ತು ಹುಡ್ಕೊ ಸೇರಿಸಲು ಪರಿಗಣಿಸುತ್ತಿದೆ. ಇವುಗಳ ಸೇರ್ಪಡೆಯ ನಂತರ, ಈ ಸಂಸ್ಥೆಗಳ ಬಾಂಡ್‌ಗಳನ್ನು ಖರೀದಿಸುವ ಹೂಡಿಕೆದಾರರು ಬಂಡವಾಳ ಲಾಭ ತೆರಿಗೆಯಿಂದ ವಿನಾಯಿತಿ ಪಡೆಯುತ್ತಾರೆ.

    ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 54EC ಪ್ರಕಾರ, ಭೂಮಿ ಮತ್ತು ಮನೆಯಂತಹ ಸ್ಥಿರ ಆಸ್ತಿಗಳ ಮಾರಾಟದಿಂದ ಉಂಟಾಗುವ ಯಾವುದೇ ದೀರ್ಘಾವಧಿಯ ಬಂಡವಾಳ ಲಾಭಗಳ (LTCG) ಹಣವನ್ನು, ಸೆಕ್ಷನ್ 54EC ಅಡಿಯಲ್ಲಿ ಸೂಚಿಸಲಾದ ಪಿಎಸ್​ಯುನಲ್ಲಿ ಹೂಡಿಕೆ ಮಾಡಿದರೆ ತೆರಿಗೆಯನ್ನು ವಿಧಿಸಲಾಗುವುದಿಲ್ಲ. ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್ ಲಿಮಿಟೆಡ್ (REC) ಮತ್ತು ಪವರ್ ಫೈನಾನ್ಸ್ ಕಾರ್ಪೊರೇಷನ್ (PFC) ನಂತಹ ಪಿಎಸ್​ಯುಗಳ ಬಾಂಡ್‌ಗಳು ಪ್ರಸ್ತುತ ಇಂತಹ ವಿನಾಯಿತಿಗೆ ಅರ್ಹವಾಗಿವೆ.

    ಏಂಜೆಲ್ ಒನ್‌ನ ಹಿರಿಯ ತಾಂತ್ರಿಕ ಮತ್ತು ಉತ್ಪನ್ನಗಳ ವಿಶ್ಲೇಷಕ ಓಶೋ ಕೃಷ್ಣನ್ ಅವರು, ಇರೇಡಾ ಷೇರುಗಳ ಬೆಲೆ ಪ್ರಸ್ತುತ ಏರಿಕೆ ಕಾಣುತ್ತಿದೆ. ಹೊಸ ಹಣಕಾಸು ವರ್ಷದ ಆರಂಭದಿಂದಲೂ ಈ ಷೇರುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಲು ಸಿದ್ಧವಾಗಿವೆ ಎಂದಿದ್ದಾರೆ.

    ಬ್ರೋಕರೇಜ್ ಸಂಸ್ಥೆ ಚಾಯ್ಸ್ ಇಕ್ವಿಟಿ ಬ್ರೋಕಿಂಗ್ ಕೂಡ ಇರೇಡಾ ಷೇರುಗಳಿಗೆ ರೂ 203 ಗುರಿಯೊಂದಿಗೆ ಖರೀದಿ ರೇಟಿಂಗ್ ನೀಡಿದೆ. ಚುನಾವಣಾ ಫಲಿತಾಂಶದ ನಂತರ ಇರೇಡಾ ಷೇರುಗಳ ಬೆಲೆ ಏರಿಳಿತಗಳನ್ನು ಕಾಣುತ್ತಿವೆ.

    ಗರಿಷ್ಠ ಬೆಲೆ ಮುಟ್ಟಿದ ರತ್ನವೀರ್​ ಕಂಪನಿ ಷೇರು: ರೂ. 200 ಆಗಲಿದೆ ಎನ್ನುತ್ತದೆ ಬ್ರೋಕರೇಜ್ ಸಂಸ್ಥೆ

    ಒಂದು ಷೇರಿಗೆ ಮೂರು ಷೇರು ಉಚಿತವಾಗಿ ನೀಡುತ್ತಿದೆ ಫಾರ್ಮಾಸ್ಯೂಟಿಕಲ್​ ಕಂಪನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts