More

    ಶಂಕರಪುರದ ಸಾಯಿ ಈಶ್ವರ್ ಗುರೂಜಿ 108 ಹಿಂದು ದೇವಸ್ಥಾನ ಸಂದರ್ಶನ ಸಂಕಲ್ಪ

    ಶಿರ್ವ: ಭಾರತೀಯ ಸನಾತನ ಹಿಂದು ಧರ್ಮದ ರಕ್ಷಣೆ ಮತ್ತು ದೇಶದ ಗಡಿಕಾಯುವ ರಾಷ್ಟ್ರ ಯೋಧರ ರಕ್ಷಣೆಗಾಗಿ ಕರ್ನಾಟಕ ರಾಜ್ಯದ 108 ಹಿಂದು ದೇವಸ್ಥಾನ ಸಂದರ್ಶಿಸಲು ಶಂಕರಪುರದ ಸಾಯಿ ಈಶ್ವರ್ ಗುರೂಜಿ ಸಂಕಲ್ಪ ಮಾಡಿದ್ದು, ಉಡುಪಿ ಜಿಲ್ಲೆಯಿಂದ ಆರಂಭಗೊಂಡು 108 ದಿನ ವಿವಿಧ ದೇಗುಲಗಳನ್ನು ಪ್ರದಕ್ಷಿಣೆ ಮಾಡಿ ಧರ್ಮ ಜಾಗೃತಿ ಮೂಡಿಸುವ ವಿನೂತನ ಪ್ರಯತ್ನಕ್ಕೆ ಜೂನ್ 14ರಂದು ಚಾಲನೆ ನೀಡಲಿದ್ದಾರೆ.

    ಕಟೀಲಿನ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಜೂನ್ 14ರಂದು ಬೆಳಗ್ಗೆ 9ಕ್ಕೆ ಈ ಮಹಾಸಂಕಲ್ಪಕ್ಕೆ ಚಾಲನೆ ಪಡೆದು ಸೆ.29ರವರೆಗೆ 108 ದಿನ 108 ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಧರ್ಮ, ರಾಷ್ಟ್ರ ಯೋಧರ ರಕ್ಷಣೆ ಬಗ್ಗೆ ಧಾರ್ಮಿಕ ಮುಖಂಡರೊಂದಿಗೆ ಚಿಂತನ ಮಂಥನ ನಡೆಸಲಾಗುವುದು. ಪ್ರತಿಯೊಂದು ಧರ್ಮಕ್ಷೇತ್ರಗಳ ದರ್ಶನದ ನೆನಪಿಗಾಗಿ ಬಿಲ್ವಪತ್ರೆಯ ಗಿಡ ದೇವಸ್ಥಾನದ ವಠಾರದಲ್ಲಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಸಂದೇಶವನ್ನೂ ಈ ಮೂಲಕ ಸಾಯಿ ಈಶ್ವರ್ ಗುರೂಜಿ ಸಾರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts