More

    ಹಾದಿ-ಬೀದಿಯಲ್ಲಿ ಕೇಳಿದ್ರೆ ಸಿಗುತ್ತಾ ಪರಿಹಾರ?

    ಕಲಬುರಗಿ: ಸಿಎಂ-ಡಿಸಿಎಂ ಹುದ್ದೆ ಕೇಳಲು ಎಲ್ಲರಿಗೂ ಹಕ್ಕಿದೆ. ಆದರೆ ಹಾದಿ-ಬೀದಿಯಲ್ಲಿ ಕೇಳುವುದು ತರವಲ್ಲ. ಸೂಕ್ತ ವೇದಿಕೆಯಲ್ಲಿ ಕೇಳಿದರೆ ಪರಿಹಾರ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
    ಎಲ್ಲಿ ಕೇಳಬೇಕೋ ಅಲ್ಲಿ ಕೇಳಬೇಕು. ಮಾಧ್ಯಮದಲ್ಲಿ ಕೇಳಿದರೆ ಅವರು ಮಾಡುತ್ತಾರಾ? ಬೀದಿಯಲ್ಲಿ ಬಂದು ಜಗಳ ಮಾಡುವುದು ಸರಿಯಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ ಅವರು, ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕೊರತೆ ಇದೆ. ನಾವು ಹೀಗೆ ಮಾತಾಡುತ್ತಿದ್ದರೆ ಬಿಜೆಪಿ ನಾಯಕರನ್ನು ನಾವೇ ಬೆಳೆಸಿದಂತಾಗಲಿದೆ. ನಮ್ಮ ಕಾರ್ಯಕರ್ತರಿಗೆ ಏನು ಸಂದೇಶ ಕೊಟ್ಟಂತಾಗುತ್ತದೆ ಎಂದು ಪ್ರಶ್ನಿಸಿದರು.
    ಸಮುದಾಯದ ಹಿರಿಯರು , ನಾಯಕರು ಇರಬಹುದು. ಎಲ್ಲರೂ ಹೈಕಮಾಂಡ್ ಬಳಿ ಕೇಳಲಿ. ಯಾವ್ಯಾವ ಸಮುದಾಯದವರು ಎಷ್ಟೆಷ್ಟು ವೋಟ್ ಹಾಕಿz್ದÁರೆ ಅಂತ ಗೊತ್ತು. ಕೆಲ ಸಮುದಾಯದವರಿಗೆ ಮಠದ ಸ್ವಾಮೀಜಿಗಳಿದ್ದಾರೆ. ಇಲ್ಲದವರು ನಮ್ಮ ಪರ ಕೆಲಸ ಮಾಡುತ್ತಿದ್ದಾರೆ ಹೊರತು, ಹುದ್ದೆ ಕೇಳುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಸಮುದಾಯಗಳು ನಮ್ಮ ಪರ ಕೆಲಸ ಮಾಡಿವೆ ಎಂದರು.
    ಕೇAದ್ರ ಸಚಿವ ಪ್ರಲ್ಹಾದ್ ಜೋಶಿ ಮೊದಲು ತಮ್ಮ ಮನೆ ಬೆಂಕಿ ಆರಿಸಿಕೊಳ್ಳಲಿ. ಅವರವರ ಸಮುದಾಯದವರು ಯಾರಾದರೂ ಕೇಳಲಿ ಅಂತ ಇರಬಹುದು. ಎಲ್ಲರನ್ನೂ ಡಿಸಿಎಂ ಮಾಡಲಿ ಅಂತ ನಾನು ಈಗಾಗಲೆ ಹೇಳಿz್ದೆÃನೆ. ಗ್ಯಾರಂಟಿ ಯೋಜನೆಗಳ ಬಗ್ಗೆ ರಂಭಾಪುರಿ ಜಗದ್ಗುರುಗಳ ಹೇಳಿಕೆ ವೈಯಕ್ತಿಕ ಅಭಿಪ್ರಾಯ ಆಗಿರಬಹುದು. ಲಾಭ ಆಗದಿದ್ದರೆ ೪.೫೦ ಕೊಟಿ ಜನ ಯಾಕೆ ನೋಂದಣಿ ಮಾಡಿಸುತ್ತಿದ್ದರು. ಕರ್ನಾಟಕದ ಜಿಡಿಪಿ ಏನು ಕಡಿಮೆ ಆಗಿದೆಯಾ ಎಂದು ಪ್ರಶ್ನಿಸಿದರು.
    ಕೆಪಿಸಿಸಿ ಅಧ್ಯP್ಷÀ ಸ್ಥಾನದ ಆಕಾಂಕ್ಷಿ ನಾನಲ್ಲ. ಈ ವಿಚಾರದ ಬಗ್ಗೆ ಏನು ಚರ್ಚೆ ಆಗುತ್ತಿದೆ ಅಂತ ಗೊತ್ತಿದೆ. ಹೀಗಾಗಿ ಈ ವಿಷಯದಲ್ಲಿ ನನ್ನ ಹೆಸರು ಬರೋದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts