More

    ಹಣ್ಣು ಮಾರಾಟಕ್ಕೆ ಸೂಕ್ತ ವ್ಯವಸ್ಥೆ

    ಶಿರಸಿ : ಕರೊನಾ ಲಾಕ್​ಡೌನ್​ನಿಂದ ನಷ್ಟ ಅನುಭವಿಸುತ್ತಿದ್ದ ಅನಾನಸ್ ಬೆಳೆಗಾರರಿಗೆ ಚೈತನ್ಯ ತುಂಬಲು ಇಲ್ಲಿನ ತೋಟಗಾರಿಕೆ ಇಲಾಖೆ ಮುತವರ್ಜಿ ವಹಿಸಿದೆ. ಮೊದಲ ಹಂತದಲ್ಲಿ ಅಂದಾಜು 500 ಟನ್​ಗಳಷ್ಟು ಅನಾನಸ್ ಹಣ್ಣುಗಳನ್ನು ರೈತಮಿತ್ರ ಸಂಘಟನೆಗಳ ಮೂಲಕ ಮಾರಾಟ ವ್ಯವಸ್ಥೆ ಮಾಡಿದೆ.

    ಲಾಕ್​ಡೌನ್ ಕಾರಣಕ್ಕೆ ವ್ಯಾಪಾರ- ವಹಿವಾಟು ಸ್ಥಗಿತಗೊಂಡ ಕಾರಣ ಬನವಾಸಿಯ ವಿವಿಧ ಭಾಗದಲ್ಲಿ ಬೆಳೆದ ಅಂದಾಜು 20 ಸಾವಿರ ಟನ್​ಗಳಷ್ಟು ಅನಾನಸ್​ಗೆ ಮಾರುಕಟ್ಟೆ ಇಲ್ಲದೆ ಬೆಳೆಗಾರರು ಕಂಗಾಲಾಗಿದ್ದರು. ವ್ಯವಸಾಯಕ್ಕೆ ಹಾಕಿದ ಬಂಡವಾಳ ಕೂಡ ಸಿಗದೆ ಹಣ್ಣುಗಳು ಕೊಳೆತು ಹೋಗುವ ವಾತಾವರಣ ನಿರ್ವಣವಾಗಿತ್ತು. ಆದರೆ, ಈಗ ಅದನ್ನು ಖರೀದಿಸಲು ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದಿದ್ದು, ಆರಂಭದ ದಿನವೇ 500 ಟನ್​ಗಳಷ್ಟು ಅನಾನಸ್ ಹಣ್ಣು ಖರೀದಿಸಲಾಗಿದೆ. ‘ನೋ ಪ್ರಾಫಿಟ್, ನೋ ಲಾಸ್’ ಸ್ಕೀಮ್ ಅಡಿ ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಯೊಂದು ಅಂದಾಜು 250 ಟನ್ ಅನಾನಸ್ ಖರೀದಿಸಿದೆ. ಜತೆಗೆ ಸ್ಥಳೀಯ ತಾರಗೋಡಿನ ಮಧುಮಿತ್ರ ಹಾಗೂ ಅಂಗಡಿಯ ಮಧುಕೇಶ್ವರ ರೈತಮಿತ್ರ ಸಂಘಗಳು ಶೇ.5ರಷ್ಟು ಅನಾನಸ್ ಹಾಗೂ ಕಲ್ಲಂಗಡಿ ಹಣ್ಣುಗಳನ್ನು ಖರೀದಿಸಿವೆ. ನಗರದಲ್ಲಿರುವ ಕದಂಬ ಸೌಹಾರ್ದ ಕೂಡ ನಿತ್ಯ 3 ಟನ್ ಬಾಳೆ ಹಾಗೂ ಕೆಲ ಪ್ರಮಾಣದ ಶುಂಠಿಯನ್ನು ಖರೀದಿಸುತ್ತಿದೆ.

    ಇನ್ನು ಕಾರ್ವಿುಕ ಇಲಾಖೆಯಿಂದ ಕಾರ್ವಿುಕರಿಗೆ ನೀಡುತ್ತಿರುವ ಪ್ರತಿಯೊಂದು ಕಿಟ್​ನಲ್ಲಿ ಒಂದೊಂದು ಅನಾನಸ್ ಕೊಡಲಿದ್ದು, ಇಲಾಖೆಯು ಕೂಡ ರೈತರಿಂದ ಅಂದಾಜು 250 ಟನ್ ಹಣ್ಣನ್ನು ಖರೀದಿಸಲು ಮುಂದಾಗಿದೆ. ಒಂದು ಕೆಜಿ ಅನಾನಸ್ ಹಣ್ಣಿಗೆ 10 ರೂ.ನಂತೆ ರೈತರಿಗೆ ಲಭ್ಯವಾಗಲಿದೆ. ಕಳೆದ ವರ್ಷ ಅಂದಾಜು 20ರೂ. ನಂತೆ ಮಾರಾಟವಾಗಿತ್ತು.

    ವಾಣಿಜ್ಯ ಬೆಳೆಯಾದ ಅನಾನಸ್ ಬೆಳೆದು ಲಾಕ್​ಡೌನ್ ಕಾರಣಕ್ಕೆ ಎಲ್ಲವನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿತ್ತು. ಆದರೆ, ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಅವರ ಸಹಕಾರದಿಂದ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಖರೀದಿಗೆ ಮುಂದಾಗಿದ್ದರಿಂದ ಕಷ್ಟ ದೂರವಾಗಿದೆ.

    -ಸಂದೀಪ ಗೌಡ- ಅನಾನಸ್ ಬೆಳೆಗಾರ

    ಕಷ್ಟದಲ್ಲಿರುವ ರೈತರ ಪಾಲಿಗೆ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಸಹಾಯ ಹಸ್ತ ಚಾಚಿದ್ದು, ಶೀಘ್ರದಲ್ಲಿ ಉಳಿದ ಅನಾನಸ್ ಹಣ್ಣುಗಳು ಸೇರಿ ವಿವಿಧ ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಮಾಡುವ ಭರವಸೆಯನ್ನೂ ಇಲಾಖೆ ನೀಡಿದೆ.

    -ಸತೀಶ ಹೆಗಡೆ- ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts