More

    ಶಿರೋಳದಲ್ಲಿ ನಮ್ಮೂರ ರೊಟ್ಟಿ ಜಾತ್ರೆ ಇಂದಿನಿಂದ

    ಶಿರೋಳ: ಗ್ರಾಮದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಜ.15 ರಿಂದ 17ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

    ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ಹಾಗೂ ಶಿರೋಳದ ಗುರುಬಸವ ಸ್ವಾಮೀಜಿ ಸಮ್ಮುಖದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ. 15 ರಂದು ಬೆಳಗ್ಗೆ 10.30ಕ್ಕೆ ನರಗುಂದ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆಯಿಂದ ಕೃಷಿ ಪ್ರಾತ್ಯಕ್ಷಿಕೆ, 11ಕ್ಕೆ ಗ್ರಾಮೀಣ ಕ್ರೀಡೆ, ಪುರುಷರ ಕುಸ್ತಿ ಮತ್ತು ಮಹಿಳೆಯರ ಕುಸ್ತಿ ಸ್ವರ್ಧೆ ಹಮ್ಮಿಕೊಳ್ಳಲಾಗಿದೆ.

    ಸಂಜೆ 4 ಗಂಟೆಗೆ ಲಿಂ. ತ್ರಿವಿಧ ದಾಸೋಹಿ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಪುತ್ಥಳಿ ಅನಾವರಣಗೊಳ್ಳಲಿದೆ. 5 ಗಂಟೆಗೆ ಶ್ರೀ ತೋಂಟದಾರ್ಯ ರಥೋತ್ಸವ ಜರುಗುವುದು. ಸಂಜೆ 7ಕ್ಕೆ ಸದ್ಗುರು ಶ್ರೀ ಸಿದ್ಧಾರೂಢ ಚರಿತಾಮೃತ ಪ್ರವಚನ ಮಂಗಲೋತ್ಸವ ಜರಗಲಿದೆ. ಭೈರನಹಟ್ಟಿ ಶಾಂತಲಿಂಗ ಶ್ರೀ ಸಮ್ಮುಖ ವಹಿಸುವರು.

    ಜಾನಪದ ಸಂಜೆ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಮಲ್ಲಯ್ಯಸ್ವಾಮಿ ತೋಟಗಂಟಿ ಅವರಿಂದ ಜಾನಪದ ಸಂಜೆ ಸಾಧಕರ ಸತ್ಕಾರ, ಈರಯ್ಯ ಬಳಗಾನೂರಮಠ, ಗುರುಪಾದಪ್ಪ ಭಜಂತ್ರಿ ಅವರಿಂದ ವಚನ ಸಂಗೀತ ಜರುಗಲಿದೆ.

    16 ರಂದು ಬೆಳಗ್ಗೆ 10ಕ್ಕೆ ಗ್ರಾಮದ ಔಷಧ ವರ್ತಕರ ಸಹಯೋಗದಲ್ಲಿ ರಕ್ತದಾನ ಶಿಬಿರ, 11ಕ್ಕೆ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ, ಸಂಜೆ 5 ಕ್ಕೆ ಮಹಾಪೂಜೆ (ಜಂಗಮೋತ್ಸವ), 7ಕ್ಕೆ ಸಾಧಕರಿಗೆ ಸತ್ಕಾರ ಹಾಗೂ ಸಂಜೆ ಪ್ರಸಿದ್ಧ ರೊಟ್ಟಿ ಜಾತ್ರೆ ಜರುಗಲಿದೆ.

    ಲಘುರಥೋತ್ಸವ: 17 ರಂದು ಬೆಳಗ್ಗೆ 10ಕ್ಕೆ ಜಾನುವಾರುಗಳ ಪ್ರದರ್ಶನ, 11ಕ್ಕೆ ಸಂಗ್ರಾಣಿ ಕಲ್ಲು ಸಿಡಿ ಹೊಡೆಯುವುದು, ಸಂಜೆ 4 ಗಂಟೆಗೆ ಹುಬ್ಬಳ್ಳಿ ದರ್ಬಾರ್ ಬ್ಯಾಂಡ್, ವಾದ್ಯ ಮೇಳದೊಂದಿಗೆ ಲಘು ರಥೋತ್ಸವ, ಸಂಜೆ 7 ಕ್ಕೆ ರಾಜ್ ಮೆಲೋಡೀಸ್​ನಿಂದ ಸಂಗೀತ ಸಂಜೆ ನಡೆಯಲಿದೆ. ಜಾತ್ರಾ ಮಹೋತ್ಸವದಲ್ಲಿ ಶಿರೋಳದ ಕಲ್ಮೇಶ್ವರ, ದುರ್ಗಾದೇವಿ, ಶಾಂಭವಿ, ಬಸವೇಶ್ವರ, ಬೀರದೇವರ ಹಾಗೂ ಜ್ಯೋತಿಬಾ ಫುಲೆ ಯುವಕ ಮಂಡಳಗಳಿಂದ ನಂದಿಕೋಲಿನ ಸೇವೆ, ನಿತ್ಯ ವಚನ ಸಂಗೀತ ಸೇವೆ, ಕರಡಿ ಮಜಲಿನ ಸೇವೆ, ಡೊಳ್ಳಿನ ಸೇವೆ ಹಾಗೂ ಹಲಗಿ ಸೇವೆ ಜರುಗುವುದು.

    ಕೋಮು ಸೌಹಾರ್ದ ಮೆರೆಯುವ ರೊಟ್ಟಿ ಜಾತ್ರೆ

    ಶ್ರೇಷ್ಠ ದಾರ್ಶನಿಕರು, ಸಮಾಜ ಸುಧಾರಕರು, ವಿಶ್ವ ಮಾನವರು ಮಹಾತ್ಮ ಬಸವೇಶ್ವರರ ಕಟ್ಟಾ ಅನುಯಾಯಿಗಳು, ಜೀವನದುದ್ದಕ್ಕೂ ಬಸವ-ಬಸವ ಎನ್ನುತ್ತ ವಚನಗಳ ತತ್ತ್ವನ್ನು ಸಾರಿ ಹೇಳುವುದರೊಂದಿಗೆ ಅದೇ ರೀತಿಯಾಗಿ ಬಾಳಿ ಸಮಾಜಕ್ಕೆ ಬೆಳಕಾದ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳವರು ವಿಶ್ವ ಕಂಡ ಶ್ರೇಷ್ಠ ದಾರ್ಶನಿಕರಲ್ಲೊಬ್ಬರು.

    ಪ್ರತಿ ವರ್ಷದ ಸಂಕ್ರಮಣ ಕಾಲದಲ್ಲಿ ಬರುವ ಶ್ರೀಮಠದ ಜಾತ್ರೆ ಸರ್ವಧರ್ಮ ಸಮಾನತೆಯನ್ನು ಗೌರವಿಸಿದ ಹಾಗೂ ಸರ್ವರಿಗೂ ಸಾಮಾಜಿಕ ನ್ಯಾಯ ದೊರಕಿಸಲು ಹಗಲಿರುಳು ಶ್ರಮಿಸಿದ ಲಿಂ. ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಕೃಪಾಶೀರ್ವಾದದ ಸವಿನೆನಪಲ್ಲಿ ನೆರವೇರುತ್ತಿರುವ ಎರಡನೇ ಜಾತ್ರೆ ಇದಾಗಿದೆ.

    ಶಿರೋಳ ತೋಂಟದಾರ್ಯ ಮಠದ ಪೀಠಾಧಿಪತಿಗಳಾದ ಶ್ರೀ ಗುರುಬಸವ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಬೆಳೆಯುತ್ತಿರುವ ಮಠವು ಜಾತ್ರೆ ಎಂದರೆ ಉತ್ತತ್ತಿ ಹಾರಿಸುವುದಕಷ್ಟೇ ಅಲ್ಲ, ಜನಪರ, ಸಾಹಿತ್ಯಾತ್ಮಕ, ಆರೋಗ್ಯ ಪರ, ಜಾತ್ರೆಯನ್ನಾಗಿಸಿ ಉತ್ತರ ಕರ್ನಾಟಕದಲ್ಲಿಯೇ ಜನಪ್ರಿಯ ನಮ್ಮೂ್ಮರ ರೊಟ್ಟಿ ಜಾತ್ರೆ ಎಂದು ಪ್ರಸಿದ್ಧಿಗೊಳಿಸುವಲ್ಲಿ ಪೂಜ್ಯರು ಪಟ್ಟ ಶ್ರಮ ಅಷ್ಟಿಷ್ಟಲ್ಲ.

    ಲಿಂಗ, ವರ್ಣ, ವರ್ಗ, ಪಂಕ್ತಿ ಬೇಧಗಳಿಲ್ಲದೆ ಕೂಡಿ ಉಣ್ಣಬೇಕು ಕೂಡಿ ಬಾಳಬೇಕು ಎಂಬುವುದಕ್ಕಾಗಿಯೇ ಊಟದಲ್ಲಿಯೂ ಹೊಸ ಪ್ರಯೋಗ ಮಾಡಿದವರು ಡಾ.ತೋಂಟದ ಸಿದ್ಧ್ದಂಗ ಶ್ರೀಗಳು. ಅವರೇ ಡಂಬಳದಲ್ಲಿ ಮೊದಲು ಪ್ರಾರಂಭಿಸಿದ ಈ ರೊಟ್ಟಿ ಊಟದ ಪ್ರಸಾದ ಶಿರೋಳದ ರೊಟ್ಟಿ ಜಾತ್ರೆಯಾಗಿ ಪರಿವರ್ತನೆಯಾಗಿದೆ. ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ರೊಟ್ಟಿ ಊಟ ಸವಿಯುತ್ತಾರೆ.

    3000 ಹೋಳಿಗೆ ಪ್ರಸಾದ

    ಶಿರೋಳ: ಸ್ಥಳೀಯ ತೋಂಟದಾರ್ಯ ಮಠದ ಜಾತ್ರೆಯ ಸದ್ಗುರು ಶ್ರೀ ಸಿದ್ಧಾರೂಢ ಚರಿತಾಮೃತ ಪುರಾಣ ಪ್ರವಚನದಲ್ಲಿ ಶ್ರೀ ಮಠದ ಭಕ್ತರು ಸುಮಾರು 3000 ಹೋಳಿಗೆಯನ್ನು ಪ್ರಸಾದವಾಗಿ ಬಡಿಸಿದರು.

    ಈ ಸಂದರ್ಭದಲ್ಲಿ ಶಿರೋಳ ತೋಂಟದಾರ್ಯ ಗುರುಬಸವ ಸ್ವಾಮಿಜಿ, ಪುರಾಣ ಪ್ರವಚನಕಾರ ಪ್ರಭಾಕರ ಉಳ್ಳಾಗಡ್ಡಿ, ಅಪ್ಪಯ್ಯ ಹಿರೇಮಠ, ರುದ್ರಯ್ಯ ಹಿರೇಮಠ, ವೀರಯ್ಯ ಹಿರೇಮಠ ಹಾಗೂ 2020ನೇ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಧ್ಯಕ್ಷ ಗುರುಬಸಯ್ಯ ನಾಗಲೋಟಿಮಠ, ಉಪಾಧ್ಯಕ್ಷ ವೀರೂಪಾಕ್ಷಪ್ಪ ಶೆಲ್ಲಿಕೇರಿ, ಕಾರ್ಯದರ್ಶಿ ಶ್ರೀಧರ ಶೀಪ್ರಿ, ಸಹಕಾರ್ಯದರ್ಶಿ ಶರಣಪ್ಪ ಕುರುವಿನಶೆಟ್ಟಿ, ತಾಪಂ ಸದಸ್ಯ ಪ್ರಕಾಶಗೌಡ ತಿರಕನಗೌಡ್ರ, ಗ್ರಾಪಂ ಅಧ್ಯಕ್ಷ ಹನುಮಂತ ಕಾಡಪ್ಪನವರ ಹಾಗೂ ಶಿರೋಳ ತೋಂಟದಾರ್ಯ ಮಠದ ಭಕ್ತರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts