More

    ವಿತ್ತೀಯ ಕೊರತೆ ಮೀರಿದ್ದ ಬಿಜೆಪಿ ಸರ್ಕಾರ

    ಕಲಬುರಗಿ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಸಾಲ ಮಾಡಿಲ್ಲ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸಮರ್ಥಿಸಿಕೊಂಡಿದ್ದಾರೆ.
    ಸರ್ಕಾರದಲ್ಲಿ ಆರ್ಥಿಕ ಅಶಿಸ್ತು ಕಾಣಿಸಿಕೊಂಡಿದೆ ಎಂಬ ಬಿಜೆಪಿ ಸಂಸದರು, ರಾಜ್ಯದ ಕೇಂದ್ರ ಸಚಿವರು ಸಿಎಂಗೆ ಪತ್ರ ಬರೆದು ಆರೋಪಿಸಿರುವುದಕ್ಕೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಆರ್ಥಿಕ ಅಶಿಸ್ತು ಇಲ್ಲ ಎಂಬುದನ್ನು ಜ್ಞಾನಿಗಳಾದ ಬೊಮ್ಮಾಯಿ ತಿಳಿದುಕೊಳ್ಳಬೇಕು. ಮುಖ್ಯಮಂತ್ರಿ ಆಗಿದ್ದವರು ಸುಮ್ನೆ ಟೀಕೆ ಮಾಡುವುದು ತರವಲ್ಲ. ಜನರ ದಿಕ್ಕು ತಪ್ಪಿಸುವ ಹೇಳಿಕೆ ನೀಡಬಾರದು ಎಂದು ಹೇಳಿದರು.

    ೨೦೦೨ರಲ್ಲಿ ವಿತ್ತಿಯ ಹೊಣೆಗಾರಿಕೆ ಕಾಯ್ದೆ ಜಾರಿಗೆ ಬಂದಿದ್ದು, ವಿತ್ತಿಯ ಕೊರತೆ (ಜಿಎಸ್‌ಟಿಪಿ) ಶೇ.೩ಕ್ಕಿಂತ ಹೆಚ್ಚಿರಬಾರದು. ೨೦೦೯ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ೩.೫ಗೆ ಹೋಗಿತ್ತು, ಬೊಮ್ಮಾಯಿ ಸಿಎಂ ಆಗಿದ್ದಾಗ ಶೇ.೪ಕ್ಕೆ ಏರಿತ್ತು. ಪ್ರಸ್ತುತ ೨.೮೩ ಜಿಎಸ್‌ಟಿಪಿ ಇದೆ. ಬಿಜೆಪಿಗರು ಎರಡು ಬಾರಿ ಮಾನದಂಡ ಮುರಿದಿದ್ದಾರೆ ನಾವಲ್ಲ ಎಂದು ಹೇಳಿದರು.

    ರಾಜ್ಯದ ಆಂತರಿಕ ಉತ್ಪನ್ನ ೨೬ ಲಕ್ಷ ಕೋಟಿ ರೂ. ಆಗಿದ್ದು, ಆರ್‌ಬಿಐ ೧.೧೦ ಲಕ್ಷ ರೂ. ಸಾಲ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಅಭಿವೃದ್ಧಿಯ ದೃಷ್ಟಿಯಿಂದ ೧.೦೫ ಲಕ್ಷ ಕೋಟಿ ರೂ. ಸಾಲ ಪಡೆದಿದ್ದೇವೆ. ವಿತ್ತೀಯ ಕೊರತೆ ಮಿತಿ ದಾಟುವುದಿಲ್ಲ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಶೇ ೫.೮ರಷ್ಟಿದೆ. ೧೯೫೨ರಿಂದ ೨೦೧೪ರವರೆಗೆ ದೇಶದ ಸಾಲ ೫೨ ಲಕ್ಷ ಕೋಟಿ ರೂ.ನಷ್ಟಿತ್ತು. ಕಳೆದ ೧೦ ವರ್ಷಗಳಲ್ಲಿ ಕೇಂದ್ರ ಸರ್ಕಾರ ಆಂತರಿಕ ಮತ್ತು ಬಾಹ್ಯವಾಗಿ ೧೩೦ ಲಕ್ಷ ಕೋಟಿ ಸಾಲ ಮಾಡಿದೆ. ದೇಶದ ಒಟ್ಟು ಸಾಲದ ಪ್ರಮಾಣ ೧೮೦ ಲಕ್ಷ ಕೋಟಿ ರೂ.ನಷ್ಟಾಗಿದೆ. ಪ್ರಸಕ್ತ ವರ್ಷವೇ ೧೮ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಇದು ಮೋದಿ ಸರ್ಕಾರದ ಅಶಿಸ್ತು ತೋರಿಸುತ್ತದೆ. ಬಿಜೆಪಿಗರು ಇದರ ಬಗ್ಗೆ ಮಾತನಾಡಲಿ ಸವಾಲು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts