More

    ಬಹುಕೋಟಿ ವಂಚನೆ ಪ್ರಕರಣ ಸಿಐಡಿಗೆ?

    ಚಿತ್ರದುರ್ಗ: ಠೇವಣಿ ಹಣ ದುಪ್ಪಟ್ಟು ಮಾಡಿಕೊಡುವ ಕೋಡೆ ರಮಣಯ್ಯನ ವಂಚನೆ ಜಾಲ ವಿಸ್ತಾರವನ್ನು ಕಂಡು ಸಿಇಎನ್ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ವಂಚನೆಗೆ ಒಳಗಾದವರ ಸಂಖ್ಯೆ ಸಾವಿರಕ್ಕೂ ಹೆಚ್ಚಿರಬಹುದು ಹಾಗೂ ವಂಚನೆ ಮೊತ್ತ 210 ಕೋಟಿ ರೂ. ಮೀರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.
    ಆರೋಪಿಯ ಮೊಬೈಲ್ ಫೋನ್ ಹಾಗೂ ಲ್ಯಾಪ್ಟಾಪ್ನ ಮೀರರ್ ಇಮೇಜ್ ಪಡೆದ ಬಳಿಕ ಪೊಲೀಸರು, ತನಿಖೆಯನ್ನು ಸಿಐಡಿಗೆ ಒಪ್ಪಿಸುವಂತೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ಈ ಶಿಫಾರಸು ಪೊಲೀಸ್ ಮಹಾನಿರ್ದೇಶಕರ ಮುಂದಿದೆ. ಅವರು ನಿರ್ದೇಶಿಸಿದರೆ ಸಿಐಡಿ ತನಿಖೆ ನಡೆಯಲಿದೆ. ಇಲ್ಲವಾದಲ್ಲಿ ಸ್ಥಳೀಯ ಸಿಇಎನ್ ಪೊಲೀಸರೇ ತನಿಖೆ ಮುಂದುವರಿಸಲಿದ್ದಾರೆ.
    *ವಿವರ: ರೈಲ್ವೆ ನೌಕರ ಪಿ.ರಮೇಶಪ್ಪ ಅವರು ನೀಡಿದ್ದ ದೂರಿನಂತೆ ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರು ಪೊಲೀಸರು ಎಸ್ಪಿ ಧರ್ಮೇಂದರ್ಕುಮಾರ ಮೀನಾ ಅವರ ಆದೇಶದಂತೆ ತನಿಖೆ ನಡೆಸಿದ್ದರು. ಸಿಇಎನ್ ಪೊಲೀಸರು ಆಂಧ್ರಪ್ರದೇಶದ ಕರ್ನೂಲ್ನ ಕೋಡೆ ರಮಣಯ್ಯನನ್ನು ಕೋಲ್ಕತ್ತದಲ್ಲಿ ಜೂ.8ರಂದು ಬಂಧಿಸಿ ದುರ್ಗದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ತಮ್ಮ ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಿದ್ದರು.
    *ಹೊರರಾಜ್ಯದಲ್ಲೂ ಜಾಲ: ಹಣ ಕಳೆದುಕೊಂಡಿರುವವರ ಪೈಕಿ ಕರ್ನಾಟಕ, ರಾಜಸ್ತಾನ, ಆಂಧ್ರ ಪ್ರದೇಶದವರಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆರೋಪಿ ಇನ್ನೂ ಹಲವು ರಾಜ್ಯಗಳ ಜನರಿಗೆ ವಂಚಿಸಿರುವ ಸಾಧ್ಯತೆ ಇದೆ. ಇಂಥ ವಂಚನೆ ಪ್ರಕರಣಗಳಲ್ಲಿ ಆರೋಪಿಯ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹಣ ವಾಪಸು ಕೊಡಿಸಬೇಕೆಂದು ನೊಂದವರು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆರೋಪಿಯ ಬಂಧನವು ಹಣ ಕಳೆದುಕೊಂಡಿರುವವರಲ್ಲಿ ಭರವಸೆ ಮೂಡಿಸಿದೆ.
    ಆರೋಪಿಯ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದ. ಹಲವರಿಗೆ ಆರಂಭದಲ್ಲಿ ಹಣವೂ ಹಿಂತಿರುಗಿತ್ತಂತೆ. ನಂತರದಲ್ಲಿ ಒಪ್ಪಂದದಂತೆ ಅವಧಿ ಮೀರಿದರೂ ಹಣ ವಾಪಸ್ ಬರಲಿಲ್ಲ. ವಂಚನೆ ಮೊತ್ತ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆಯಾಗಿದೆ ಎಂದು ಹೇಳಲಾಗಿದೆ.
    ಕಂಪನಿ ಫೋನ್ ನಂಬರ್ಗಳಿಗೆ ಮಾಡಿದ ಕರೆ, ಸಂದೇಶಗಳಿಗೆ ಉತ್ತರ ಸಿಗುತ್ತಿರಲಿಲ್ಲ. ಆರೋಪಿ ಪತ್ತೆಗೆ ಲುಕ್ಔಟ್ ನೋಟಿಸ್ ಕೂಡ ಹೊರಡಿಸಲಾಗಿತ್ತು. ಈಚೆಗೆ ವಿಯೆಟ್ನಾಂನಲ್ಲಿದ್ದಾನೆ ಎಂಬ ಮಾಹಿತಿ ಆಧರಿಸಿ, ಆತ ಸ್ವದೇಶಕ್ಕೆ ಮರಳುವ ಜಾಡು ಹಾಗೂ ಕೋಲ್ಕತ್ತಾ ಪೊಲೀಸರ ನೆರವಿನೊಂದಿಗೆ ಸ್ಥಳೀಯ ಸಿಇಎನ್ ಪೊಲೀಸ್ ಅಧಿಕಾರಿ, ಸಿಬ್ಬಂದಿ ಚಾಣಾಕ್ಷತನದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

    *ಕೋಟ್
    ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಾವಿರಕ್ಕೂ ಅಧಿಕ ಜನರು ಹಣ ಕಳೆದುಕೊಂಡಿರುವ ಶಂಕೆ ಇದೆ. ವಂಚನೆ ಪ್ರಕರಣ 50 ಕೋಟಿ ರೂ. ಮೀರಿದರೆ ಅದನ್ನು ಸಿಐಡಿಗೆ ಒಪ್ಪಿಸಬೇಕಾಗಿದ್ದು, ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ. ಸಿಐಡಿಗೆ ಒಪ್ಪಿಸಿದರೆ ತನಿಖೆಯನ್ನು ಅವರು ಮುಂದುವರಿಸುತ್ತಾರೆ. ಇಲ್ಲವಾದಲ್ಲೇ ನಾವೇ ತನಿಖೆ ನಡೆಸುತ್ತೇವೆ.

    ಮಗ್ಶಾಟ್))) ಸಿಟಿಡಿ 28 ಆರೋಪಿ ಕೋಡೆ ರಮಣಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts