More

    ಬಜಾರ್ ಕಿರು ಚಿತ್ರ ಬಿಡುಗಡೆ ನಾಳೆ

    ಕಲಬುರಗಿ: ಕಮಲಾಪುರ ತಾಲೂಕಿನ ನಾಗೂರ ಗ್ರಾಮದ ಯುವ ಪ್ರತಿಭೆ ಹುಲಿ ನಾಗೂರ ನಿರ್ದೇಶನದ ಬಜಾರ್ ಕಿರುಚಿತ್ರ ಜೂ.೨೦ರಂದು ಸಂಜೆ ೭.೩೦ಕ್ಕೆ ನಗರದಲ್ಲಿ ಹುಲಿ ನಾಗೂರ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗಲಿದೆ ಎಂದು ಕಿರುಚಿತ್ರ ನಿರ್ದೇಶಕ ಹುಲಿ ನಾಗೂರ ತಿಳಿಸಿದರು. ಬಜಾರ್ ೪೫ ನಿಮಿಷದ ಕಿರುಚಿತ್ರವಾಗಿದೆ. ನಾಯಕನಾಗಿ ಸಾಯಬಣ್ಣ ಬೆಳಗುಂಪಿ ನಟಿಸಿz್ದÁರೆ. ಕಿರುಚಿತ್ರಕ್ಕೆ ಸವಿತಾ ಬೆಳಗುಂಪಿ ನಿರ್ಮಾಪಕರಾಗಿz್ದÁರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರೌಡಿಸಂನಲ್ಲಿ ತೊಡಗಿದವರು ಕೆಟ್ಟದ್ದನ್ನು ಹಾಗೂ ಒಳ್ಳೆಯದನ್ನು ಹೇಗೆ ಮಾಡುತ್ತಾರೆ ಎಂಬುವ ಸಂದೇಶ ನೀಡುತ್ತದೆ. ಕಲಬುರಗಿ ಕೋಟೆ, ಗಂಜ್ ಪ್ರದೇಶ, ರಿಂಗ್‌ರೋಡ್ ಸೇರಿ ಸ್ಥಳೀಯವಾಗಿ ಚಿತ್ರೀಕರಣ ಮಾಡಲಾಗಿದೆ. ಸಾಯಿ(ಪುಷ್ಪ ), ಚಂದ್ರು, ಅಮರ ದಿಡ್ಡಿಮನಿ, ಹುಲಿ ನಾಗೂರ, ಅರವಿಂದ ಕುಲಕರ್ಣಿ, ಅರುಣ ಪೊದ್ದಾರ, ಭಾಗ್ಯಶ್ರೀ, ಅರವಿಂದ ಜೋಗ, ಫೀರೋಜ್, ನೀಲಕಂಠ ಮಾಗಿ, ಸಿz್ದÁರ್ಥ ವಾರಿಕ್ ಸೇರಿ ೧೫ಕ್ಕೂ ಹೆಚ್ಚು ಜನರು ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿಲ್ಲೆಯ ಕಲಾವಿದರೆ ಇದ್ದು, ಸರ್ಕಾರ, ಸಂಘ ಸಂಸ್ಥೆಗಳು ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಅರುಣ ಪೋz್ದÁರ, ಅಮರ ಕದ್ದಿಮನಿ, ಅರವಿಂದ ಕುಲಕರ್ಣಿ, ಚಂದು ಹುಲಿಮನಿ, ಅರವಿಂದ, ಸಿದ್ಧಾರ್ಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts