More

    ಫೋನ್‌ನಲ್ಲೇ 65 ಸಾವಿರ ರೂ. ವಂಚನೆ

    ಕಲಬುರಗಿ: ಬ್ಯಾಂಕ್ ಸಿಬ್ಬಂದಿ ಎಂದು ಹೇಳಿ ಕರೆ ಮಾಡಿದ ಅಪರಿಚಿತನೊಬ್ಬ ವ್ಯಕ್ತಿಯೊಬ್ಬರಿಂದ ೬೫ ಸಾವಿರ ರೂ. ವಂಚಿಸಿದ ಘಟನೆ ನಡೆದಿದೆ. ಸೇಡಂ ನೃಪತುಂಗ ಕಾಲೇಜಿನ ಪ್ರಥಮ ದರ್ಜೆ ಸಹಾಯಕ, ನಗರದ ಓಂ ನಗರದ ನಿವಾಸಿ ಚಿತ್ರಶೇಖರ ರ‍್ಯಾಕಾ ಮೋಸಕ್ಕೆ ಒಳಗಾದವರು. ತಿಂಗಳ ವೇತನವು ಸೇಡಂನ ಎಸ್‌ಬಿಐ ಬ್ರಾÈಂಚ್‌ನಲ್ಲಿ ಜಮಾ ಆಗುತ್ತಿತ್ತು. ಮಾ.೧ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ನಾನು ಎಸ್‌ಬಿಐಯಿಂದ ಮಾತನಾಡುತ್ತಿz್ದೆÃನೆ. ನಿಮ್ಮ ಅಕೌಂಟ್‌ಗೆ ಕೆವೈಸಿ ಮಾಡಬೇಕಾಗಿದ್ದು, ನಿಮ್ಮ ಆಧಾರ ಕಾರ್ಡ್ ನಂಬರ್ ಕೇಳಿz್ದÁನೆ. ನಂತರ ನಾನು ಹೇಳುವ ನಂಬರ್‌ಗೆ ೬೫ ಸಾವಿರ ರೂ. ಫೋನ್ ಪೇ ಮಾಡುವಂತೆ ಹೇಳಿz್ದÁರೆ. ಆ ವೇಳೆ ನನಗೆ ಪೋನ್ ಪೇ ಉಪಯೋಗಿಸಲು ಬರಲ್ಲ ಎಂದು ಹಣ ಕಳುಹಿಸಿರುವುದಿಲ್ಲ. ಮತ್ತೊಮ್ಮೆ ಅದೇ ವ್ಯಕ್ತಿ ಕರೆ ಮಾಡಿ ನಿಮಗೊಂದು ಕ್ಯೂ ಆರ್ ಕೋಡ್ ಕಳುಹಿಸಲಾಗಿದೆ. ಅದನ್ನು ಸ್ಕಾÈನ್ ಮಾಡಿ ಎಂದಿದ್ದಾರೆ. ಸ್ಕಾ ್ಯನ್ ಮಾಡಿದಾಗ ಸುಮಾರು ೬೫ ಸಾವಿರ ರೂ. ಕಡಿತಗೊಂಡಿವೆ. ಈ ಕುರಿತು ಸೈಬರ್ ಹೆಲ್ಪ್ಲೈನ್ ೧೯೩೦ಗೆ ಕರೆ ಮಾಡಿ ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts