More

    ಫಾರ್ಮ್​ಹೌಸ್​ನಲ್ಲಿದ್ದ 20 ಕುರಿ ದರೋಡೆ

    ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ

    ತಾಲೂಕಿನ ಹಳ್ಳೂರ ಗ್ರಾಮದ ಹೊರವಲಯದ ಜಮೀನೊಂದರ ಫಾರ್ಮ್​ಹೌಸ್​ನಲ್ಲಿದ್ದ 20 ಕುರಿಗಳನ್ನು ಕಳ್ಳತನ ಮಾಡಿದ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ.

    ಗ್ರಾಮದ ಬಸನಗೌಡ ಪುರದಕೇರಿ ಎಂಬುವರು ಒಂದು ವರ್ಷದಿಂದ ಫಾರ್ಮ್​ಹೌಸ್​ನಲ್ಲಿ ಕುರಿ ಸಾಕಾಣಿಕೆ ಮಾಡಿಕೊಂಡಿದ್ದರು. ಎಂದಿನಂತೆ ಕುರಿ ಶೆಡ್ ಬಳಿಯೇ ಮಲಗಿಕೊಂಡಿದ್ದ ಮಾಲೀಕ ಬಸನಗೌಡ ಅವರ ಮೇಲೆ ರಾತ್ರಿ ವೇಳೆ 7-8 ಜನರ ತಂಡ ಫಾರ್ಮ್​ಹೌಸ್​ಗೆ ದಾಳಿ ಮಾಡಿದೆ. ಮಾಲೀಕನನ್ನು ಅಲ್ಲಿಯೇ ಕಟ್ಟಿ ಹಾಕಿ, ಬೈಕ್ ಜಖಂಗೊಳಿಸಿ, ಲಕ್ಷಾಂತರ ರೂ. ಬೆಲೆ ಬಾಳುವ 20 ಕುರಿಗಳನ್ನು ಕದ್ದೊಯ್ದಿದ್ದಾರೆ. ಕಳ್ಳರು ಉರ್ದು ಭಾಷೆ ಮಾತನಾಡುತ್ತಿದ್ದರು ಎಂದು ಮಾಲೀಕ ಬಸನಗೌಡ ಪುರದಕೇರಿ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    112 ಹೊಯ್ಸಳ ವಾಹನ ಅಪಘಾತ: ಕುರಿ ಕಳ್ಳತನ ಕುರಿತು ಬಸನಗೌಡ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹೊಯ್ಸಳ ವಾಹನ ಚಾಲಕ ಎಂ.ಎಸ್. ಪ್ರವೀಣ ಮತ್ತು ಹವಾಲ್ದಾರ್ ಹನುಮಂತಗೌಡ ಶಿವಪ್ಪಳವರ ಘಟನಾ ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ವಾಹನದ ಟೈರ್ ಬ್ಲಾಸ್ಟ್ ಆಗಿದೆ. ಹಳ್ಳೂರ ಗ್ರಾಮದ ಬಳಿ ವಾಹನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಎಂ.ಎಸ್. ಪ್ರವೀಣ ಗಂಭೀರವಾಗಿ ಗಾಯಗೊಂ ಡಿದ್ದಾರೆ. ಶಿವಮೊಗ್ಗ ನಾರಾಯಣ ಹೃದಯಾಲಯದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹವಾಲ್ದಾರ್ ಹನುಮಂತಗೌಡ ಶಿವಪ್ಪಳವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪಿಎಸ್​ಐ ಆರ್. ಆಶಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts