More

    ನಿತ್ಯ 2 ಲಕ್ಷ ಲೀಟರ್ ನೀರು ಪೂರೈಸಿ

    ಕಲಬುರಗಿ: ಜಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆಯಲ್ಲಿ ನೀರಿಲ್ಲದೆ ಶಸ್ತçಚಿಕಿತ್ಸೆ ಮುಂದೂಡಲಾಗುತ್ತಿದೆ ಎಂದು ಮಾಧ್ಯಮದಲ್ಲಿ ಬಿತ್ತರ ಹಿನ್ನೆಲೆಯಲ್ಲಿ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗೆ ೨ ಲಕ್ಷ ಲೀಟರ್ ನೀರು ಪೂರೈಸುವಂತೆ ಸೂಚನೆ ನೀಡಿದರು.

    ಆಸ್ಪತ್ರೆಯ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು. ಜಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ಉಮೇಶ ಎಸ್.ಆರ್. ಮತ್ತು ಜಯದೇವ ಆಸ್ಪತ್ರೆ ವೈದ್ಯ ಡಾ.ವೀರೇಶ ಪಾಟೀಲ್‌ರಿಂದ ಮಾಹಿತಿ ಪಡೆದರು. ಸ್ವಚ್ಛ ನೀರಿಲ್ಲದಕ್ಕೆ ಶಸ್ತç ಚಿಕಿತ್ಸೆ ಮುಂದೂಡುವ ವಿಚಾರ ಸರಿಯಲ್ಲ. ರೋಗಿಯ ಆರೈಕೆ ಆಸ್ಪತ್ರೆ ಮತ್ತು ಸಿಬ್ಬಂದಿ ಜವಾಬ್ದಾರಿಯಾಗಿದೆ. ಜಿಮ್ಸ್ ಮತ್ತು ಜಯದೇವ ಅಸ್ಪತ್ರೆ ವೈದ್ಯರು ಕರ್ತವ್ಯ ಮರೆಯಬಾರದು. ಮಹಾನಗರ ಪಾಲಿಕೆ ಮತ್ತು ಕೆಯುಐಡಿಎಫ್‌ಸಿ ಅವರೊಂದಿಗೆ ಸಮನ್ವಯ ಸಾಧಿಸಿ ಆಸ್ಪತ್ರೆಗೆ ನಿತ್ಯ ನೀರು ಪೂರೈಸಬೇಕು. ರೋಗಿಗಳಿಗೆ ತೊಂದರೆಯಾಗದAತೆ ಮತ್ತು ನಿಯಮಿತ ವೈದ್ಯಕೀಯ ಸೇವೆಗಳು ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
    ಜಯದೇವ ಆಸ್ಪತ್ರೆ ವೈದ್ಯರು ಮಾತನಾಡಿ, ಬೆಣ್ಣೆತೋರಾ ಜಲಾನಯನ ಪ್ರದೇಶದಲ್ಲಿ ಮಳೆ ಹಿನ್ನೆಲೆಯಲ್ಲಿ ನಲ್ಲಿ ನೀರಿನಲ್ಲಿ ಮಣ್ಣು ಮಿಶ್ರಣದ ಅಂಶ ಹೆಚ್ಚಾಗಿದೆ. ಶಸ್ತç ಚಿಕಿತ್ಸೆಗೆ ಸ್ವಚ್ಛ ನೀರು ಅವಶ್ಯವಿದೆ. ಆದ್ದರಿಂದ ಸೇವೆಯಲ್ಲಿ ವ್ಯತ್ಯಯವಾಗಿದೆ. ನೀರಿನ ಅಭಾವ ಎಂದು ತಪ್ಪಾಗಿ ಭಾವಿಸಬಾರದು ಎಂದರು. ಡಿಎಚ್‌ಓ ಡಾ.ರತಿಕಾಂತ ಸ್ವಾಮಿ, ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ ಇತರೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts