More

    ತತ್ಸಾರ ಮಾಡುವುದು ಬಿಟ್ಟು ಮತದಾನ ಮಾಡಿ: ತಹಸೀಲ್ದಾರ್ ಆರ್.ಪ್ರದೀಪ್

    ಭದ್ರಾವತಿ: ನನ್ನ ಒಂದು ವೋಟಿನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಾಗುತ್ತಾ… ದೇಶ ಉದ್ಧಾರ ಆಗುತ್ತಾ… ಅನ್ನೋದನ್ನು ಮೊದಲು ಬಿಡಬೇಕು. ಪ್ರತಿ ವೋಟಿಗೂ ಅದರದೇ ಆದ ಮಹತ್ವವಿದೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ತಹಸೀಲ್ದಾರ್ ಆರ್.ಪ್ರದೀಪ್ ಹೇಳಿದರು.
    ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಬಿಇಒ ಕಚೇರಿಯಿಂದ ಮಂಗಳವಾರ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾಥಿಗಳಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
    ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಅರ್ಹತೆ ಇಲ್ಲದವರೂ ರಾಜರಾಗಿ ಆಡಳಿತ ನಡೆಸುತ್ತಿದ್ದರು. ಇದರಿಂದ ರಾಜ್ಯ ಹಾಳಾಗುತ್ತಿತ್ತು. ಅರ್ಹತೆ ಇರುವ ವ್ಯಕ್ತಿಯನ್ನು ಆಯ್ಕೆ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದೆ. ತಿಳಿವಳಿಕೆ ಹೊಂದಿರುವ ಮತದಾರರು ಅರ್ಹರಿಗೆ ಮತ ಚಲಾಯಿಸುವ ಮೂಲಕ ಯೋಗ್ಯ ಸರ್ಕಾರವನ್ನು ಆಯ್ಕೆ ಮಾಡಿ ಎಂದರು.
    ಪ್ರೌಢಶಾಲಾ ವಿದ್ಯಾರ್ಥಿಗಳು ಸಂವಿಧಾನ ನೀಡಿರುವ ಮತದಾನದ ಹಕ್ಕಿನ ಮಹತ್ವವನ್ನು ಪಾಲಕರಿಗೆ ಹಾಗೂ ಸುತ್ತಮುತ್ತಲ ಜನರಿಗೆ ತಿಳಿಸಿಕೊಡಬೇಕು. ಆಗ ನಿಮ್ಮೂರಿನ ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳಲು ಸಾಧ್ಯ. ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ಫೋಟೋ ಕೊಡಿ ಎಂದು ಕೇಳಿದರೂ ನೀಡದಂತಹ ಜನರಿದ್ದಾರೆ. ಅವರಿಗೆ ತಿಳಿವಳಿಕೆ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
    ಪೌರಾಯುಕ್ತ ಮನುಕುಮಾರ್ ಮಾತನಾಡಿ, ಯುವ ಮತದಾರರು ಮತದಾನ ಪ್ರಕ್ರಿಯಲ್ಲಿ ಹೆಚ್ಚು ಭಾಗವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮನ್ನು ಆಳುವ ನಾಯಕರ ಆಯ್ಕೆಯ ಅವಕಾಶ ಕೊಟ್ಟಿದೆ. ಅದರ ಮಹತ್ವ ತಿಳಿದುಕೊಳ್ಳಬೇಕು ಎಂದು ಹೇಳಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts