More

    ತಂಡದ ಹೆಗಲಿಗೆ ಮಾದಕ ವಸ್ತು ಬಳಕೆ ನಿಯಂತ್ರಣ ಹೊಣೆ

    ಚಿತ್ರದುರ್ಗ: ಮಾದಕ ವಸ್ತುಗಳ ನಿಯಂತ್ರಣ ದಿಸೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿರುವ ತಂಡ ರಚಿಸಲಾಗುವುದೆಂದು ಡಿಸಿ ಟಿ.ವೆಂಕಟೇ ಶ್ ಹೇಳಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಾದಕ ವಸ್ತುಗಳ ನಿಯಂತ್ರಣ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಭೆಯಲ್ಲಿ ಮಾತನಾ ಡಿದ ಅವರು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ರಚಿಸುವ ಈ ತಂಡಗಳಿಗೆ ನಿಯಮಿತವಾಗಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಹೊಣೆ ಹೊರೆಸಲಾಗುವುದು.
    ಸಮಾಜಕಲ್ಯಾಣ,ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಪ್ರತಿ ತಿಂಗ ಳಿಗೊಮ್ಮೆ ಮಾದಕ ವಸ್ತುಗಳ ಸೇವನೆ ದುಷ್ಪರಿಣಾಮದ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ,ಕಡ್ಡಾಯವಾಗಿ ವರದಿ ಸಲ್ಲಿಸಬೇ ಕು.
    ಮಾದಕ ವಸ್ತುಗಳ ನಿಯಂತ್ರಣ ಕುರಿತಂತೆ ಪೊಲೀಸ್,ಸಂಬಂಧಿಸಿದ ಇತರೆ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮು ಖ್ಯಸ್ಥರು ಹಾಸ್ಟೆಲ್,ಕಾಲೇಜು ಕ್ಯಾಂಪಸ್ ಹಾಗೂ ಸಮೀಪದ ಪೆಟ್ಟಿಗೆ ಅಂಗಡಿ,ಅಡ್ಡೆಗಳ ಮೇಲೂ ತೀವ್ರ ನಿಗಾ ವಹಿಸಿ,ಅಕ್ರಮ ಚಟುವ ಟಿಕೆಗಳಿಗೆ ಕಡಿವಾಣ ಹಾಕಬೇಕು.
    ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಯುವ ಜನರು ಮಾದಕ ವಸ್ತುಗಳ ಬಳಕೆಯ ಬಲೆಗೆ ಬೀಳದಂತೆ ಎಚ್ಚರ ವಹಿಸುವುದು ಅಗತ್ಯ ವಾಗಿದ್ದು,ಶಿಕ್ಷಣ ಸಂಸ್ಥೆಗಳು ಕೂಡ ಆಂತರಿಕವಾಗಿ ಅಕ್ರಮ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾಕ್ಕೆ ವ್ಯವಸ್ಥೆ ಮಾಡಿಕೊಳ್ಳ ಬೇಕೆಂದರು.
    ಎನ್‌ಎಸ್‌ಎಸ್ ಜಿಲ್ಲಾ ಬೋಧಕ ಲೋಕೇಶ್ ಮಾತನಾಡಿ,ಎನ್‌ಎಸ್‌ಎಸ್ ವಾರ್ಷಿಕ ಶಿಬಿರಗಳಲ್ಲಿ ಮಾದಕ ವಸ್ತುಗಳ ಸೇವನೆಯ ದು ಷ್ಪರಿಣಾಮ ಕುರಿತು ಉಪನ್ಯಾಸ,ಜಾಗೃತಿ ಜಾಥಾಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು. ಎನ್‌ಎಸ್‌ಎಸ್ ಹಾಗೂ ಸ್ವಯಂ ಸೇವಕರ ತಂಡಗಳು ತಂಬಾಕು ಮುಕ್ತ ಗ್ರಾಮಗಳಿಗೆ ಶ್ರಮಿಸಬೇಕೆಂದು ಡಿಸಿ ಸಲಹೆ ನೀಡಿದರು.
    ಎಸ್‌ಪಿ ಧರ್ಮೇಂದರ್‌ಕುಮಾರ್‌ಮೀನಾ,ಸಮಾಜ ಕಲ್ಯಾಣ ಇಲಾಖೆ ಜೆಡಿ ಜಗದೀಶ್ ಹೆಬ್ಬಳ್ಳಿ,ಎಸ್‌ಜೆಎಂ ತಾಂತ್ರಿಕ ಮಹಾ ವಿದ್ಯಾ ಲಯ ಪ್ರಾಚಾರ‌್ಯ ಪಿ.ಬಿ.ಭರತ್ ಮಾತನಾಡಿದರು. ವಿವಿಧ ಕಾಲೇಜುಗಳ ಪ್ರಾಂಶುಪಾಲರು,ಮುಖ್ಯಸ್ಥರು ಹಾಗೂ ವಿವಿಧ ಇಲಾಖೆಗಳಿ ದ್ದರು.

    ಕಠಿಣ ಕ್ರಮ ಜರುಗಿಸಲಾಗುವುದು
    ಮಾದಕ ವಸ್ತುಗಳ ಬಳಕೆ ಸಂಬಂಧಿಸಿದಂತೆ ಹೊಳಲ್ಕೆರೆ,ಚಿತ್ರದುರ್ಗ ತಾಲೂಕುಗಳಿಂದ ಸಾಕಷ್ಟು ದೂರುಗಳಿವೆ. ಶಾಲಾ,ಕಾಲೇಜು ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ಪೆಡ್ಲರ್‌ಗಳ ಕುರಿತು ಸ್ಥಳೀಯರು,ಅಧಿಕಾರಿಗಳು,ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು,ಸಾರ್ವಜನಿ ಕರು ಮಾಹಿತಿ ನೀಡಿದರೆ ಕಠಿಣ ಕ್ರಮ ಜರುಗಿಸಲಾಗುವುದು.
    ಧರ್ಮೇಂದರ್‌ಕುಮಾರ್‌ಮೀನಾ,ಎಸ್‌ಪಿ,ಚಿತ್ರದುರ್ಗ.

    ತಿಳಿವಳಿಕೆ ನೀಡಲಾಗುತ್ತಿದೆ
    ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಇಲಾಖೆ ವ್ಯಾಪ್ತಿಯ ಎಲ್ಲ ವಸತಿ ಶಾಲೆ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲಾಗುತ್ತಿದೆ.
    ಜಗದೀಶ್ ಹೆಬ್ಬಳ್ಳಿ,ಜಂಟಿ ನಿರ್ದೇಶಕರು,ಸಮಾಜ ಕಲ್ಯಾಣ ಇಲಾಖೆ,ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts