More

    ಜೆಸ್ಕಾಂ ವ್ಯಾಪ್ತಿಯಲ್ಲಿ ಶೇ.೯೫.೪೧ ಸಾಧನೆ

    ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ವರ್ಷವಾಗುವ ಮೊದಲೇ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ೨೦.೬೯ ಲP್ಷÀಕ್ಕೂ ಹೆಚ್ಚು ಮನೆಗಳನ್ನು ಬೆಳಗಿಸಿದೆ.
    ಮಾಸಿಕ ಗರಿಷ್ಠ ೨೦೦ ಯೂನಿಟ್ ವಿದ್ಯುತ್ ಬಳಸುವ ಗ್ರಾಹಕರಿಗೆ ಉಚಿತ ವಿದ್ಯುತ್ ಕಲ್ಪಿಸುವ ಗೃಹಜ್ಯೋತಿ ಯೋಜನೆ ಅಧಿಕೃತವಾಗಿ ಜಾರಿಗೊಂಡು ಆಗಸ್ಟ್ ೧ಕ್ಕೆ (೨೦೨೩ರ ಜೂ.೧೮ರಿಂದ ನೋಂದಣಿ) ವರ್ಷವಾಗಲಿದೆ. ಲಕ್ಷಾಂತರ ಕುಟುಂಬಗಳು ಇದರ ಲಾಭ ಪಡೆದಿದ್ದು, ವಿದ್ಯುತ್‌ಗಾಗಿ ಪಾವತಿಸುವ ಮೊತ್ತವನ್ನು ತಮ್ಮ ಇತರ ಅಗತ್ಯಗಳಿಗೆ ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದ್ಬಳಕೆ ಮಾಡಿಕೊಂಡಿವೆ.
    ಗೃಹಜ್ಯೋತಿ ನೋಂದಣಿ ನಿರಂತರ ಪ್ರಕ್ರಿಯೆ. ೨೦೨೪ರ ಮೇ ಅಂತ್ಯದವರೆಗೆ ೨೧,೬೯,೩೭೧ ಮಂದಿ ನೋಂದಣಿ ಮಾಡಿದ್ದು, ಈ ಪೈಕಿ ೨೦,೬೯,೮೨೧ ಫಲಾನುಭವಿಗಳು ಶೂನ್ಯ ಬಿಲ್ ಲಾಭ ಪಡೆದಿz್ದÁರೆ. ಅಂದರೆ ಪ್ರತಿ ತಿಂಗಳು ವಿದ್ಯುತ್ ಬಳಸಿದರೂ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಜೆಸ್ಕಾಂ ತಿಳಿಸಿದೆ.

    ರು.೮೫೩.೪೧ ಕೋಟಿ ವಿದ್ಯುತ್ ಬಳಕೆ: ಗೃಹಜ್ಯೋತಿಯಡಿ ಮೇ ಅಂತ್ಯದವರೆಗೆ ೨೦,೬೯,೮೨೧ ಫಲಾನುಭವಿಗಳು ೯೧,೦೧,೦೩,೩೨೦ ಯೂನಿಟ್ ವಿದ್ಯುತ್ ಬಳಸಿದ್ದು, ಇದರ ಬಿಲï ಮೊತ್ತ ೮೫೩.೪೧ ಕೋಟಿ ರೂಪಾಯಿ. ಆದರೆ ಫಲಾನುಭವಿಗಳಿಗೆ ಶೂನ್ಯ ಬಿಲ್ ಇರುವುದರಿಂದ ಈ ಮೊತ್ತ ಅವರಿಗೆ ಉಳಿತಾಯವಾಗಿದ್ದರಿಂದ ಇತರ ಉz್ದೆÃಶಗಳಿಗೆ ಬಳಸಿಕೊಳ್ಳಲು ಅನುಕೂಲವಾಗಿದೆ.
    ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ ಜಿ¯್ಲÉಗಳಲ್ಲಿ ಕಲಬುರಗಿ ಮೊದಲ ಸ್ಥಾನದಲ್ಲಿದೆ. ಜಿ¯್ಲÉಯಲ್ಲಿ ನೋಂದಣಿ ಮಾಡಿದ ೫,೪೩,೭೦೩ ಗ್ರಾಹಕರಲ್ಲಿ ೫,೦೯,೮೪೮ ಜನ ಉಚಿತ ವಿದ್ಯುತ್ ಪಡೆಯುತ್ತಿz್ದÁರೆ.
    ಬಳ್ಳಾರಿಯಲ್ಲಿ ೨,೬೧,೧೫೬ ನೋಂದಾಯಿತ ಅರ್ಜಿಗಳ ಪೈಕಿ ೨,೪೬,೯೧೭, ಬೀದರ್ ೩,೪೮,೬೭೬ರಲ್ಲಿ ೩,೩೩,೯೫೯, ಕೊಪ್ಪಳದ ೨,೭೨,೧೭೫ ಅರ್ಜಿದಾರರ ಪೈಕಿ ೨,೬೪,೪೫೯, ರಾಯಚೂರಿನಲ್ಲಿ ೩,೦೩,೯೦೧ ನೋಂದಾಯಿತರ ಪೈಕಿ ೨,೯೦,೭೭೩, ವಿಜಯನಗರದ ೨,೪೮,೩೮೪ ನೋಂದಾಯಿತರ ಪೈಕಿ ೨,೩೮,೫೭೩ ಹಾಗೂ ಯಾದಗಿರಿ ಜಿಲ್ಲೆಯ ೧,೯೧,೩೭೬ ನೋಂದಾಯಿತರ ಪೈಕಿ ೧,೮೫,೨೯೨ ಗ್ರಾಹಕರು ಗೃಹಜ್ಯೋತಿ ಫಲಾನುಭವಿಗಳಾಗಿz್ದÁರೆ.

    ಯೋಜನೆ ಏನು?: ಗೃಹಜ್ಯೋತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಬುರಗಿಯಲ್ಲಿ ೨೦೨೩ರ ಆ.೧ರಂದು ಚಾಲನೆ ನೀಡಿದ್ದರು. ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುವ ಈ ಯೋಜನೆಯಡಿ ಪ್ರತಿ ಮನೆಗೆ ಸರಾಸರಿ ಬಳಕೆಯ ಯೂನಿಟ್ ನಿಗದಿಪಡಿಸಲಾಗುತ್ತದೆ. ಆಯಾ ತಿಂಗಳ ವಿದ್ಯುತ್ ಬಳಕೆ ೨೦೦ ಯೂನಿಟ್ ಮಿತಿಯಲ್ಲಿದ್ದರೆ, ಗೃಹ ಬಳಕೆದಾರರು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಸರಾಸರಿಗಿಂತ ಹೆಚ್ಚಿನ ಯೂನಿಟ್ ಬಳಸಿದರೆ ಹೆಚ್ಚುವರಿ ಯೂನಿಟ್‌ಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ೨೦೦ಕ್ಕೂ ಹೆಚ್ಚು ಯೂನಿಟ್ ಬಳಸಿದರೆ ಪೂರ್ಣ ಶುಲ್ಕ ಪಾವತಿಸಬೇಕಾಗುತ್ತದೆ.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts