More

    ಕೋವಿಡ್ “ಆಕ್ಸಿಜನ್’ ಮಹತ್ವ ತಿಳಿಸಿತು

    ಚಿತ್ರದುರ್ಗ: ಪ್ರತಿಯೊಬ್ಬರೂ ಪ್ರಕೃತಿಯನ್ನು ಪ್ರೀತಿಸಿ, ಗೌರವಿಸುವುದರೊಂದಿಗೆ ಸಂರಕ್ಷಿಸಬೇಕೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
    ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಿದ್ಧಾರ್ಥ ಬಡಾವಣೆಯ ಉದ್ಯಾನದಲ್ಲಿ ಶುಕ್ರವಾರ ಆಯುರ್ವೇದ ವನ ಉದ್ಘಾಟಿಸಿ ಮಾತನಾಡಿ, ಆಯುರ್ವೇದ ವನ ನಿರ್ಮಾಣ ಮಾಡುತ್ತಿರುವುದು ಶ್ರೇಷ್ಠವಾದ ಕೆಲಸ ಎಂದರು.
    ಕೋವಿಡ್ ಸಂದರ್ಭದಲ್ಲಿ ಜನರಿಗೆ ಆಕ್ಸಿಜನ್ ಬೆಲೆ ಗೊತ್ತಾಯಿತು. ಸರ್ಕಾರ ಕಾಡನ್ನು ಉಳಿಸಿ, ಬೆಳೆಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಜನರು ಕೂಡ ಸಹಕಾರ ನೀಡಬೇಕು. ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು ಎಂದರು.
    ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯಾ ಬಸವರಾಜನ್ ಮಾತನಾಡಿ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ಋಷಿ ಸಂಸ್ಕೃತಿ ಗುರುಕುಲ ಮಹಾ ಸಂಸ್ಥಾನದಿಂದ ಜಿಲ್ಲಾದ್ಯಂತ ಸಸಿಗಳನ್ನು ನೆಟ್ಟು ಪೋಷಿಸಲು ಕ್ರಮ ವಹಿಸಬೇಕೆಂದು ಸಲಹೆ ನೀಡಿದರು.
    ನಗರಸಭೆ ಸದಸ್ಯ ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಡಿಸಿಎಫ್ ಟಿ.ರಾಜಣ್ಣ, ಡಾ.ಎಂ.ಸಿ.ನರಹರಿ, ಮಾಲತೇಶ್ ಅರಸ್, ಟಿ.ರುದ್ರಮುನಿ, ದುರ್ಗೇಶ್, ಬಸವರಾಜ್, ಡಾ.ನವೀನ್ ಸಜ್ಜನ್, ನಾಗರಾಜ್, ಉಷಾರಾಣಿ ಮತ್ತಿತರರು ಇದ್ದರು.
    ನಗರಸಭೆ, ಅರಣ್ಯ ಇಲಾಖೆ, ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ಶ್ರೀವಿದ್ಯಾಗಣಪತಿ ಸೇವಾ ಸಮಿತಿ ಸಿದ್ಧಾರ್ಥ ಬಡಾವಣೆ, ಅಮೃತ ಆಯುರ್ವೇದ ಕಾಲೇಜು ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಆಸಕ್ತರು ಸಂಪರ್ಕಿಸಲು ಮನವಿ
    ಗಿಡನೆಡಲು ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಗ್ರೀನ್ ಕರ್ನಾಟಕ ತಂಡ ಸನ್ನದ್ದವಾಗಿದೆ. ಗ್ರೀನ್ ಕರ್ನಾಟಕ ಟೀಮ್ ಸೇರಲು ್ಟ್ಠಠಜಜಿಜ್ಠ್ಟ್ಠk್ಠ್ಝಚಃಜಞಚಜ್ಝಿ.್ಚಟಞ (8073744244) ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts