More

    ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ ಕಮಲಪಡೆ

    ಚಿತ್ರದುರ್ಗ:ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ನಿಗಮದಲ್ಲಿ ಆಗಿರುವ ಕೋಟ್ಯಂತರ ರೂ. ದುರ್ಬಳಕೆ ಹಗರಣದ ವಿರುದ್ಧ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
    ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಗರದ ಮದಕರಿ ನಾಯಕ ಪ್ರತಿಮೆಗೆ ಮಾರ್ಲಾಪಣೆ ಮಾಡಿದ ಬಳಿಕ ತೆರೆದ ವಾಹನದಲ್ಲಿ ಅಲ್ಲಿಂದ ವೀರವನಿತೆ ಒನಕೆ ಓಬವ್ವ ವೃತ್ತಕ್ಕೆ ಮೆರವಣಿಯಲ್ಲಿ ಆಗಮಿಸಿ ಮಾತನಾಡಿದರು.
    ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ, ನುಂಗಿ ನೀರು ಕುಡಿಯಲು ನಾಯಕ ಸಮಾಜದ 187 ಕೋಟಿ ರೂ. ಬೇಕಿತ್ತೇ ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನೀಸಿದರು.
    ವಾಲ್ಮೀಕಿ ಸಮುದಾಯದ 16ಕ್ಕೂ ಹೆಚ್ಚು ಶಾಸಕರು ಹಗರಣದ ಬಗ್ಗೆ ಮಾತನಾಡುತ್ತಿಲ್ಲ. ಬಿಟ್ಟಿ ಭಾಗ್ಯಗಳಿಗೆ ವರ್ಷಕ್ಕೆ 60 ಸಾವಿರ ಕೋಟಿ ರೂ. ಬೇಕಿದೆ. ಎಲ್ಲರಿಗೂ ಉಚಿತ ವಿದ್ಯುತ್ ಪೂರೈಸುವುದಾಗಿ ಸರ್ಕಾರ ಹೇಳಿತ್ತು. ಪೆಟ್ರೋಲ್ ಬೆಲೆ 10 ರೂ. ಇಳಿಸುವುದಾಗಿ ಭರವಸೆ ನೀಡಿತ್ತು. ಆದರೆ, ಈಗ ದರ ಹೆಚ್ಚಿಸಿರುವ ಈ ಸರ್ಕಾರ ನುಡಿದಂತೆ ನಡೆದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
    ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ತಮ್ಮ ಅಧಿಕಾರವಧಿಯಲ್ಲಿ ಹಣ ಮೀಸಲಿಟ್ಟಿದ್ದರು. 2019ರಿಂದ ನಾಲ್ಕು ಹಣಕಾಸು ವರ್ಷಗಳಿಂದ ನಿಗಮದಲ್ಲಿದ್ದ ಹಣ ದುರ್ಬಳಕೆ ಆಗಿದೆ. ಕಾಂಗ್ರೆಸ್ ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಬದ್ಧ ಎಂದು ಹೇಳಿಕೊಂಡು ಬರುತ್ತಿದೆ ಹೊರತು, ಅದರಂತೆ ನಡೆದುಕೊಳ್ಳುತ್ತಿಲ್ಲ ಎಂದು ದೂರಿದರು.
    ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ, ನಾನು ಕೂಡ ಈ ನಿಗಮದ ಅಧ್ಯಕ್ಷನಾಗಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದೇನೆ. ವಿದೇಶದಲ್ಲಿ ಓದುತ್ತಿರುವ ನಾಯಕ ಸಮುದಾಯದ ವಿದ್ಯಾರ್ಥಿಗಳಿಗೆ ಎಂಟು ತಿಂಗಳಿಂದ ಹಣ ಕೊಟ್ಟಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
    ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ನಿಗಮದ ಹಣದೊಂದಿಗೆ ಬುಡಕಟ್ಟು ವರ್ಗಗಳ ಜನರ ಕಲ್ಯಾಣಕ್ಕೆಂದು ಕೇಂದ್ರ ಬಿಡುಗಡೆ ಮಾಡಿದ್ದ ಅನುದಾನ 183 ಕೋಟಿ ರೂ. ದುರ್ಬಳಕೆಯಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
    ಬಿ.ನಾಗೇಂದ್ರ ಅವರು ರಾಜೀನಾಮೆ ಕೊಟ್ಟರೆ ಸಾಲದು, ಸಿಎಂ ಸಿದ್ದರಾಮಯ್ಯ, ಸಚಿವ ಶರಣಪ್ರಕಾಶ ಪಾಟೀಲ, ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಅವರೂ ಪದವಿ ತ್ಯಜಿಸಬೇಕು ಎಂದು ಆಗ್ರಹಿಸಿದರು.
    ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಎಂಎಲ್ಸಿ ಕೆ.ಎಸ್.ನವೀನ್, ಎಸ್ಟಿ ಮೋರ್ಚಾ ರಾಜ್ಯ ರ್ಕಾಯದರ್ಶಿ ಶರಣ್ ತಾಳಿಕೆರೆ, ಜಿಲ್ಲಾಧ್ಯಕ್ಷ ಶಿವಣ್ಣ, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಪಕ್ಷದ ಜಿಲ್ಲಾ ಅಧ್ಯಕ್ಷ ಎ.ಮುರಳಿ, ಮಧುಗಿರಿ ಅಧ್ಯಕ್ಷ ಹನುಮಂತೇ ಗೌಡ, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯಾ ಬಸವರಾಜನ್, ಕೆ.ಟಿ.ಕುಮಾರಸ್ವಾಮಿ, ಉಮೇಶ್ ಕಾರಜೋಳ, ಜಿ.ಎಸ್.ಅನಿತ್ಕುಮಾರ್, ಎಂ.ಸಿ.ರಘುಚಂದನ್, ಡಾ.ಸಿದ್ದಾರ್ಥ ಗುಂಡಾರ್ಪಿ, ಸುರೇಶ್ ಸಿದ್ದಾಪುರ, ಬಾಳೇಕಾಯಿ ರಾಮದಾಸ್, ಜಿ.ಎಸ್.ಸಂಪತ್ಕುಮಾರ್, ರಾಜೇಶ್ ಬುರುಡೆಕಟ್ಟೆ, ಮಾಧುರಿ ಗಿರೀಶ್, ಲಕ್ಷಿà್ಮಕಾಂತ್, ನವೀನ್ ಚಾಲುಕ್ಯ, ಭಾರ್ಗವಿ ದ್ರಾವಿಡ,ತಿಪ್ಪೇಸ್ವಾಮಿ ಛಲವಾದಿ, ನರೇಂದ್ರ ಹೊನ್ನಾಳ್, ಜಯಪಾಲಯ್ಯ, ಕೆ.ಮಲ್ಲಿಕಾರ್ಜುನ್, ವೆಂಕಟೇಶ್ ಯಾದವ್, ದಗ್ಗೆ ಶಿವಪ್ರಕಾಶ್,ನಾಗರಾಜ್ಬೇಂದ್ರೆ, ನಂದಿನಾಗರಾಜ್, ರಾಮು, ಸೀತಾರಾಮರೆಡ್ಡಿ, ಡಾ.ಮಂಜುನಾಥ್, ವಿಶ್ವನಾಥ್, ಸೂರನಹಳ್ಳಿ ಶ್ರೀನಿವಾಸ್, ಮೋಹನ್, ವೀರೇಶ ಜಾಲಿಕಟ್ಟೆ, ಗೂಳಿಹಟ್ಟಿ ಜಗದೀಶ್, ಅಶೋಕ್, ಸರಸ್ವತಿ, ಶೀಲಾ, ಕಾಂಚನಾ, ಕವನಾ, ಶೈಲೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಬ್ಯಾರಿಕೇಡ್ ಹತ್ತಲು ಯತ್ನ
    ಡಿಸಿ ಕಚೇರಿಗೆ ಪ್ರತಿಭಟನಾಕಾರರು ನುಗ್ಗದಂತೆ ಬೆಳಗ್ಗೆಯಿಂದಲೇ ಪೊಲೀಸರು ಒನಕೆ ಓಬವ್ವ ವೃತ್ತ ಸಹಿತ ನಾನಾ ಕಡೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ನಾಲ್ಕೈದು ಕೆಎಸ್ಆರ್ಟಿಸಿ ಬಸ್, ಎರಡು ಕೆಎಸ್ಆರ್ಪಿ ತುಕಡಿ, ಹಲವು ಪೊಲೀಸ್ ವ್ಯಾನಗಳೊಂದಿಗೆ ಎಎಸ್ಪಿಗಳಾದ ಎಸ್.ಜೆ.ಕುಮಾರಸ್ವಾಮಿ, ಎ.ವಿ.ಲಕ್ಷಿà್ಮನಾರಾಯಣ, ಡಿವೈಎಸ್ಪಿ ಕೆ.ದಿನಕರ್ ನೇತೃತ್ವದಲ್ಲಿ ನೂರಾರು ಪೊಲೀಸರು ಬೀಡುಬಿಟ್ಟಿದ್ದರು. ವೆಂಕಟೇಶ್ ಯಾದವ್, ಹನುಮಂತೇಗೌಡ ಬ್ಯಾರಿಕೇಡ್ ಏರಿದರು. ವಿಜಯೇಂದ್ರ, ಶಾಸಕ ಚಂದ್ರಪ್ಪ ಮತ್ತಿತರರು ಬ್ಯಾರಿಕೇಡ್ ಭೇದಿಸಲು ಯತ್ನಿಸಿದಾಗ ಪೊಲೀಸರು ಅವರನ್ನೂ ಸೇರಿ ಹಲವರನ್ನು ವಶಕ್ಕೆ ಪಡೆದು ಗ್ರಾಮಾಂತರ ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು.

    ಘೋಷಣೆಗಳು
    ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕವಾಗಿ ಧಿಕ್ಕಾರ ಕೂಗುತ್ತಿದ್ದ ಪ್ರತಿಭಟನಾನಿರತರು, ಹಗರಣ ರೂವಾರಿ ಯಾರು?, ನಿಗಮದ ಹಣ ಕಾಂಗ್ರೆಸ್ ಚುನಾವಣೆ ವೆಚ್ಚಕ್ಕೆ ಬಳಕೆ ಶಂಕೆ, ಮಾಜಿ ಸಚಿವ ಬಿ.ನಾಗೇಂದ್ರ ಬಂಧಿಸಿ ಇತ್ಯಾದಿ ಭಿತ್ತಿಪತ್ರಗಳು ಪ್ರತಿಭಟನೆಯಲ್ಲಿ ರಾರಾಜಿಸಿದವು.

    ಬಸ್ಸಿಗೆ ಅಡ್ಡ ಹಾಕಿದರು
    ವಿಜಯೇಂದ್ರ ಮತ್ತಿತರರನ್ನು ಬಂಧಿಸಿ ಕರೆದೊಯ್ಯತ್ತಿದ್ದಾಗ ಅವರಿದ್ದ ಬಸ್, ಕೋರ್ಟ್ ಮಾರ್ಗದಲ್ಲಿ ಸಾಗುವ ವೇಳೆ ನೂರಾರು ರ್ಕಾಯಕರ್ತರು ಅಡ್ಡ ಬಂದರು. ಈ ವೇಳೆ ರ್ಕಾಯಕರ್ತರನ್ನು ಚದುರಿಸುವಲ್ಲಿ ಪೊಲೀಸರು ಹೈರಾಣದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts