More

    ಕನ್ನಡಿಗರಿಗೆ ಉದ್ಯೋಗ ನೀಡಿ

    ಕಲಬುರಗಿ: ಸಮರ್ಪಕ ಕಾನೂನು ರೂಪಿಸಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಒದಗಿಸಬೇಕು ಎಂದು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದು, ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜು.೧ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ರP್ಷÀಣಾ ವೇದಿಕೆ ಜಿ¯್ಲÁ ಘಟಕದ ಅಧ್ಯP್ಷÀ ಪುನೀತರಾಜ ಕವಡೆ ತಿಳಿಸಿದರು.

    ಎಲ್ಲ ಖಾಸಗಿ ಸಂಸ್ಥೆಗಳಿಗೆ ಸಿ ಮತ್ತು ಡಿ ದರ್ಜೆಯ ಶೇ.೧೦೦ ಹುದ್ದೆ ಕನ್ನಡಿಗರಿಗೆ ಮೀಸಲಿಡಬೇಕು. ಎಲ್ಲ ಖಾಸಗಿ ಇತರೆ ಹುz್ದೆಗಳಲ್ಲಿ ಶೇ.೮೦ ಹುz್ದÉ ಕನ್ನಡಿಗರಿಗೆ ಮೀಸಲಿಡಬೇಕು. ೧೫ ವರ್ಷ ಕರ್ನಾಟದಲ್ಲಿ ನೆಲೆಸಿದವರನ್ನು ಕನ್ನಡಿಗರೆಂದು ಪರಿಗಣಿಸುವ ನಿಯಮ ತೆಗೆದು, ಕನ್ನಡ ಬರವಣಿಗೆಯ ಪರೀಕ್ಷೆ ನೀಡಿ ಅದರಲ್ಲಿ ಉತ್ತೀರ್ಣರಾದವರನ್ನು ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು. ನಿಯಮಾವಳಿಗಳನ್ನು ಪಾಲಿಸದ ಸಂಸ್ಥೆಗಳ ಮಾನ್ಯತೆ ರದ್ದುಗೊಳಿಸಿ ದಂಡ ವಿಧಿಸಿ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

    ರಾಜ್ಯ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ವಲಯ ಘಟಕಗಳಲ್ಲಿ ಕನ್ನಡಿಗರಿಗೆ ಶೇ.೧೦೦ ಮೀಸಲು ನೀಡಬೇಕು. ಕೇಂದ್ರ ಸರ್ಕಾರ ಇಲಾಖೆಗಳು ಮತ್ತು ಸಾರ್ವಜನಿಕ ವಲಯ ಘಟಕಗಳಲ್ಲಿ ಗ್ರೂಪ್ ಸಿ ಮತ್ತು ಡಿ ಹುz್ದÉಗಳು ಕನ್ನಡಿಗರಿಗೆ ಶೇ.೧೦೦ ಮೀಸಲು ನೀಡಬೇಕು. ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯ ಘಟಕಗಳಲ್ಲಿ ಸಿ ಮತ್ತು ಡಿ ದರ್ಜೆ ಹುz್ದÉಗಳ ಹೊರತಾದ ಉಳಿದೆಲ್ಲ ಹುz್ದÉಗಳಿಗೂ ಶೇ.೯೦ ಮೀಸಲು ನೀಡಬೇಕು. ರಾಜ್ಯ-ಕೇಂದ್ರ ಸರ್ಕಾರದ ಇಲಾಖೆಗಳು ಸಾರ್ವಜನಿಕ ವಲಯದ ಘಟಕಗಳಲ್ಲಿ ಉದ್ಯೋಗ ಮೀಸಲು ಕಲ್ಪಿಸಲು ವಿಫಲವಾಗುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
    ಮಹೇಶ ಕಾಳೆ, ದೇವಿಂದ್ರ ಮಯೂರ, ನಿರ್ಮಲಾ ತಳವಾರ, ಸಂಗಮೇಶ ಬೋರಟ್ಟಿ, ನೀಲಕಂಠಪ್ಪಗೌಡ, ಕಲ್ಯಾಣಿ ತಳವಾರ, ಪ್ರಭು ಯಳವಂತಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts