More

    ಒತ್ತಡದ ಮಧ್ಯೆ ಕೆಲಸದ ಸವಾಲು

    ಕಲಬುರಗಿ: ವೈದ್ಯರು ಮತ್ತು ಪತ್ರಕರ್ತರು ಅನೇಕ ರೀತಿಯ ಒತ್ತಡಗಳ ಮಧ್ಯೆ ಕಾರ್ಯನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಬ್ಬರಿಗೂ ಇದು ಸವಾಲಿನ ಸಮಯ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಹೇಳಿದರು.
    ವೈದ್ಯರು ಹಾಗೂ ಪತ್ರಿಕಾ ದಿನಾಚರಣೆ ನಿಮಿತ್ತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಯುನೈಟೆಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಡಿ ಪತ್ರಕರ್ತರು ಮತ್ತು ಅವರ ಕುಟುಂಬದವರಿಗಾಗಿ ಹಾಸ್ಪಿಟಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
    ಇಂಟರ್‌ನೆಟ್ ಇತರ ತಂತ್ರಜ್ಞಾನ ನೆರವಿನಿಂದ ಜನರಿಗೆ ಸುದ್ದಿ ಮಾಹಿತಿ ಬೇಗ ಸಿಗಬಹುದು. ಆದರೆ ಪತ್ರಕರ್ತರು ನಿಖರವಾದ ಸುದ್ದಿ ಕೊಡಲು ಮಾಹಿತಿ ಎಷ್ಟು ಸತ್ಯಾಂಶದಿAದ ಕೂಡಿದೆ ಎಂಬುದನ್ನು ಎಲ್ಲ ಆಯಾಮಗಳಿಂದ ಪರಿಶೀಲಿಸಬೇಕಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಬರುವುದೆಲ್ಲ ನಿಜವಲ್ಲ, ಪತ್ರಿಕೆಯಲ್ಲಿ ಬಂದ ಸುದ್ದಿಯೇ ನಿಜವಾಗಿರುತ್ತದೆ ಎಂದು ಓದುಗರು ಬಲವಾಗಿ ನಂಬಿದ್ದಾರೆ ಎಂದರು.
    ಒತ್ತಡದ ನಡುವೆ ಕಾರ್ಯನಿರ್ವಹಿಸುವ ಸ್ಥಿತಿ ಇದ್ದುದರಿಂದ ಪತ್ರಕರ್ತರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಯುನೈಟೆಡ್ ಆಸ್ಪತ್ರೆಯ ಡಾ.ವಿಕ್ರಮ ಸಿದ್ದಾರಡ್ಡಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ಮಾದರಿಯಾಗಿದ್ದಾರೆ. ಸಮಾಜಮುಖಿಯಾಗಿರುವ ಪತ್ರಕರ್ತರಿಗೆ ಆರೋಗ್ಯ ಭಾಗ್ಯ ನೀಡಲು ಮುಂದಾಗಿರುವುದನ್ನು ಶ್ಲಾಘಿಸಿದರು.
    ಜುಲೈ ೧ ವಿಶೇಷ ದಿನ. ವೈದ್ಯರು, ಪತ್ರಕರ್ತರು ಹಾಗೂ ಚಾರ್ಟೆಡ್ ಅಕೌಂಟೆAಟ್‌ಗಳ ದಿನ ಆಚರಿಸಲಾಗುತ್ತಿದೆ. ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಲೇ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
    ಹೆಚ್ಚುವರಿ ಎಸ್‌ಪಿ ಶ್ರೀನಿಧಿ ಮಾತನಾಡಿ, ಇದೊಂದು ವಿಶೇಷ ಕಾರ್ಯಕ್ರಮ. ಯುನೈಟೆಡ್ ಆಸ್ಪತ್ರೆ ಪತ್ರಕರ್ತರು ಮತ್ತವರ ಕುಟುಂಬದವರಿಗೆ ಆರೋಗ್ಯ ತಪಾಸಣೆ ಉಚಿತ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
    ಅಧ್ಯಕ್ಷತೆ ವಹಿಸಿದ್ದ ಯುನೈಟೆಡ್ ಆಸ್ಪತ್ರೆ ಮುಖ್ಯಸ್ಥ ಡಾ.ವಿಕ್ರಮ ಸಿದ್ದಾರಡ್ಡಿ ಮಾತನಾಡಿದರು. ಆಸ್ಪತ್ರೆ ನಿರ್ದೇಶಕಿ ಡಾ.ವೀಣಾ ಸಿz್ದÁರಡ್ಡಿ, ವಿವಿಧ ರೋಗ ತಜ್ಞ ವೈದ್ಯರಾದ ಡಾ.ರಾಜು ಕುಲಕರ್ಣಿ, ಡಾ.ನಿಶಾಂತ್ ಜಾಜಿ, ಡಾ.ಮಹ್ಮದ್ ಅಬ್ದುಲ್ ಬಶೀರ್, ಡಾ.ಬಸವಪ್ರಭು ಅಮರಖೇಡ, ಡಾ.ಉಡುಪಿಕೃಷ್ಣ ಜೋಶಿ, ಡಾ.ಸುದರ್ಶನ ಲಾಖೆ, ಡಾ.ರಾಕೇಶ್ ಬೇಂದ್ರ, ಡಾ.ಕೃಷ್ಣ ರಾಠೋಡ್, ಡಾ.ವಿನಯಸಾಗರ್ ಶರ್ಮ, ಡಾ.ಕೇದಾರನಾಥ ರಟಕಲ್, ಡಾ.ಅಬ್ದುಲï ಹಕೀಮ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ರಾಜ್ಯ ಸಮಿತಿ ಸದಸ್ಯ ಶಿವರಂಜನ್ ಸತ್ಯಂಪೇಟೆ, ಕಾರ್ಯದರ್ಶಿಗಳಾದ ಅರುಣ ಕದಂ, ವೀರೇಂದ್ರ ಕೊಲ್ಲೂರ, ಹಿರಿಯ ಪತ್ರಕರ್ತರಾದ ಎಸ್.ಬಿ. ಜೋಶಿ, ಸಿದ್ದಣ್ಣ ಮಾಲಗಾರ, ದೇವಯ್ಯ ಗುತ್ತೇದಾರ್, ಹಣಮಂತರಾವ ಭೈರಾಮಡಗಿ, ಶೇಷಮೂರ್ತಿ ಅವಧಾನಿ, ಮನೋಜಕುಮಾರ ಗುದ್ದಿ, ಕುಮಾರ ಬುರಡಿಕಡ್ಡಿ ಇತರರಿದ್ದರು.
    ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ನಿರೂಪಣೆ ಮಾಡಿದರು. ಆಸ್ಪತ್ರೆ ವ್ಯವಸ್ಥಾಪಕ ದಾವೂದ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts