More

    ಉದ್ಘಾಟನೆಗೆ ಸಜ್ಜಾಗಿದೆ ಅಗ್ನಿಶಾಮಕದಳ ಠಾಣೆ

    ಮುಂಡಗೋಡ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಮೂರು ಕೋಟಿ ರೂ. ಅನುದಾನದಲ್ಲಿ ನಿರ್ವಣಗೊಂಡ ಅಗ್ನಿಶಾಮಕದಳ ಠಾಣೆ ಉದ್ಘಾಟನೆಗೆ ಸಜ್ಜಾಗಿದೆ.

    ತಾಲೂಕಿನಲ್ಲಿ ಅಗ್ನಿ ಅನಾಹುತವಾದ ಸಮಯದಲ್ಲಿ ಶಿರಸಿ ಇಲ್ಲವೇ ಹಾನಗಲ್ಲ ತಾಲೂಕಿಗೆ ಮಾಹಿತಿ ನೀಡಿ ಅಗ್ನಿಶಾಮಕ ವಾಹನ ಕರೆಸಬೇಕಿತ್ತು. ಅಲ್ಲಿಂದ ವಾಹನ ಬರುವಷ್ಟರಲ್ಲಿ ಬೆಂಕಿ ವ್ಯಾಪಿಸಿ ಹೆಚ್ಚು ಅನಾಹುತ ಸಂಭವಿಸುತ್ತಿತ್ತು. ಹೀಗಾಗಿ ಮುಂಡಗೋಡ ತಾಲೂಕಿಗೆ ಪ್ರತ್ಯೇಕ ಅಗ್ನಿಶಾಮಕ ದಳ ಠಾಣೆ ಬೇಕೆಂಬ ಬೇಡಿಕೆ ಹೆಚ್ಚಾಗಿತ್ತು. 2013ರಲ್ಲಿ ತಾಲೂಕಿಗೆ ಪ್ರತ್ಯೇಕ ಅಗ್ನಿ ಶಾಮಕದಳ ಠಾಣೆ ಆರಂಭಿಸಲಾಗಿತ್ತು. ಆದರೆ, ಸ್ವಂತ ಕಟ್ಟಡ ಇಲ್ಲದೆ ಇಲ್ಲಿನ ಪಂಚಾಯತ್​ರಾಜ್ ಇಲಾಖೆಯ ಕಚೇರಿ ಆವರಣದಲ್ಲಿಯೇ ತಾತ್ಕಾಲಿಕವಾಗಿ ಶೆಡ್ ನಿರ್ವಿುಸಿ ಅಗ್ನಿಶಾಮಕ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ವಾಹನವೂ ಸನಿಹದ ಜಲಾಶಯಕ್ಕೆ ತೆರಳಿ ನೀರು ತುಂಬಿಸಿಕೊಂಡು ಬರಬೇಕಿತ್ತು. ಹೀಗೆ ಆರು ವರ್ಷ ಕಳೆಯಲಾಗಿತ್ತು. ನಂತರ 2020ರಲ್ಲಿ ಎಪಿಎಂಸಿ ಆವರಣದಲ್ಲಿ ಕೊಳವಿಬಾವಿ ಕೊರೆಯಿಸಿ ತಾತ್ಕಾಲಿಕ ಶೆಡ್ ನಿರ್ವಿುಸಲಾಗಿತ್ತು.

    ಶಾಸಕರ ಪ್ರಯತ್ನ: ಶಾಸಕ ಶಿವರಾಮ ಹೆಬ್ಬಾರ ಅವರು ಸಚಿವರಾದ ವೇಳೆಯಲ್ಲಿ ಅಗ್ನಿಶಾಮಕ ದಳದ ಠಾಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎಪಿಎಂಸಿ ಆವರಣದಲ್ಲಿ ಖುಲ್ಲಾ ಜಾಗದಲ್ಲಿ ಲೀಜ್ ಮೂಲಕ ಜಾಗ ಪಡೆದು ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ವಿುಸಲು ಅನುದಾನ ಮಂಜೂರು ಮಾಡಿದ್ದರು. ಈಗಾಗಲೇ ಸುಸಜ್ಜಿತವಾಗಿ ಅಗ್ನಿಶಾಮಕದಳ ಠಾಣೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಈ ಹೊಸ ಕಟ್ಟಡದಲ್ಲಿ ಮೂರು ಅಗ್ನಿಶಾಮಕ ವಾಹನ ನಿಲ್ಲುವ ವ್ಯವಸ್ಥೆ ಕಲ್ಪಿಸಲಾಗಿದೆ.

    ಮುಂಡಗೋಡ ಅಗ್ನಿಶಾಮಕ ಠಾಣೆಯ ಕಟ್ಟಡ ಪೂರ್ಣಗೊಂಡಿದ್ದು, ಅತೀ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ.

    | ಶಿವರಾಮ ಹೆಬ್ಬಾರ ಶಾಸಕ

    ಮುಂಡಗೋಡದಲ್ಲಿ ನೂತನವಾಗಿ ನಿರ್ವಣಗೊಂಡ ಕಟ್ಟಡದಲ್ಲಿ ಸಣ್ಣಪುಟ್ಟ ಕೆಲಸವಿದೆ. ಹಿರಿಯ ಅಧಿಕಾರಿಗಳು ಬಂದು ಪರಿಶೀಲಿಸಿದ ನಂತರ ಕಟ್ಟಡವನ್ನು ಹಸ್ತಾಂತರ ಮಾಡಿಕೊಳ್ಳುತ್ತೇವೆ.

    | ಸುನೀಲ ಕುಮಾರ, ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts