More

    ಪೂಜೆ ನೆಪದಲ್ಲಿ ಮೌಲ್ವಿಯಿಂದ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ

    ಚಿತ್ರದುರ್ಗ: ಇಲ್ಲಿನ ಮಸೀದಿಯೊಂದರ ಮೌಲ್ವಿ ಅಬ್ದುಲ್ ರೆಹಮಾನ್ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಬಾಲಕಿಯ ಸಹೋದರ ಕೂಡ ಭಾಗಿಯಾಗಿರುವ ಆರೋಪದಡಿ ಇಬ್ಬರನ್ನು ಬಂಧಿಸಿ, ಪೋಕ್ಸೋ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಸಂತ್ರಸ್ತ ಬಾಲಕಿ ಗರ್ಭಿಣಿಯಾಗಿದ್ದು, ಮೂರು ತಿಂಗಳಿಗೆ ಗರ್ಭಪಾತವಾಗಿದೆ. ಲೈಂಗಿಕ ದೌರ್ಜನ್ಯವೇ ಇದಕ್ಕೆ ಕಾರಣವೆಂದು ಈ ಸಂಬಂಧ ಆಕೆಯ ತಾಯಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೇ 31ರಂದು ದೂರು ದಾಖಲಿಸಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಘಟನೆ ಹಿನ್ನೆಲೆ: ಕಳೆದ 3 ವರ್ಷದಿಂದಲೂ ಬಾಲಕಿ ಮಸೀದಿಯೊಂದಕ್ಕೆ ಕುರಾನ್ ಪಠಿಸಲು ಹೋಗುತ್ತಿದ್ದು, ಆರೋಪಿ ಮೌಲ್ವಿ ಬೋಧನೆ ಮಾಡುತ್ತಿದ್ದ. ಒಂದೂವರೆ ವರ್ಷದ ಹಿಂದೆ ಬಾಲಕಿಗೆ ಗಾಳಿ ಸೋಕಿದೆ, ಇದಕ್ಕೆ ಪೂಜೆಯೇ ಪರಿಹಾರ. ಅದು ಕೂಡ ಆಕೆಯ ಮನೆಯಲ್ಲೇ ನಡೆಯಬೇಕು. ಮಸೀದಿಯೊಳಗೆ ಬೇಡವೆಂದು ಹೇಳಿದ್ದ. ಅದಕ್ಕೆ ನಾನೂ ಒಪ್ಪಿದ್ದರಿಂದ ವಾರಕ್ಕೊಮ್ಮೆ ಬಂದು ಪೂಜೆ ಮಾಡುತ್ತಿದ್ದ ಎಂದು ಸಂತ್ರಸ್ತೆ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕೋಣೆ ಬಾಗಿಲು ಹಾಕಿಕೊಂಡು ಮಗಳ ಮೈ-ಕೈ ಮುಟ್ಟಿ ಮೌಲ್ವಿ ಅಸಭ್ಯವಾಗಿ ವರ್ತಿಸುತ್ತಿದ್ದ. ಕಳೆದ ಆರೇಳು ತಿಂಗಳ ಹಿಂದೆ ಬಾಲಕಿಯ ಸಹೋದರನನ್ನು ಕರೆದುಕೊಂಡು ಹೋಗಿದ್ದ. ನಿನ್ನ ತಂಗಿಗೆ ದೆವ್ವ ಮೆಟ್ಟಿದ್ದು, ಅದಕ್ಕೆ ಶಾಂತಿಯಾಗಲು ದೈಹಿಕ ಸುಖ ಕೊಡಬೇಕೆಂದು ನಂಬಿಸಿ, ಪ್ರೇರೇಪಿಸಿ ಅವನಿಂದಲೂ ಅತ್ಯಾಚಾರ ಎಸಗಿಸಿದ್ದಾನೆ. ಅದನ್ನು ವಿಡಿಯೋ ಮಾಡಿಕೊಂಡ ನಂತರ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.

    ಈ ವಿಚಾರ ಯಾರ ಬಳಿಯೂ ಹೇಳಬಾರದು. ವಿರುದ್ಧವಾಗಿ ನಡೆದಲ್ಲಿ ಪೂಜೆ ಫಲಿಸದು ಎಂದು ಹೇಳಿ ಮೌಲ್ವಿ ವಂಚಿಸಿದ್ದಾನೆ. ನನ್ನ ಮೇಲೆ ಪದೇ ಪದೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಗರ್ಭಪಾತವಾದ ಬಳಿಕ ಮಗಳು ಗೋಳಾಡಿ, 2023ರ ಜ.1ರಿಂದ 2024ರ ಮೇ 30ರವರೆಗೂ ನಡೆದ ಘಟನೆಯನ್ನು ಹೇಳಿಕೊಂಡಿದ್ದಾಳೆ. ಆದ್ದರಿಂದ ಮೌಲ್ವಿ, ಪುತ್ರನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಘಟನೆ ಸಂಬಂಧ ಮಹಿಳಾ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ, ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts