Thursday, 29th June 2017  

Vijayavani

1. ಗಣಿಗಾರಿಕೆ ವಿರುದ್ಧದ ಕ್ರಮಕ್ಕೆ ವರ್ಗಾವಣೆ ಭಾಗ್ಯ- ಒಂದೇ ತಿಂಗಳಿಗೆ ಕುಣಿಗಲ್​​​​​​ ತಹಶೀಲ್ದಾರ್​​​ ಟ್ರಾನ್ಸ್​​ಫರ್​​- ಅಕ್ರಮ ಗಣಿಗಾರಿಕೆ ಸುದ್ದಿ ಭಿತ್ತರಿಸಿದ್ದ ದಿಗ್ವಿಜಯ ನ್ಯೂಸ್​ 2. ಮುಂದಿನ ಸಿಎಂ ಅಭ್ಯರ್ಥಿ ಕುರಿತು ಚರ್ಚೆಯಾಗಿಲ್ಲ- ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ- ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಎಸ್​.ಆರ್​.ಪಾಟೀಲ್​​ ವಿಶ್ವಾಸ 3. ಪತ್ರಕರ್ತ ರವಿ ಬೆಳೆಗೆರೆ ಜೈಲು ಶಿಕ್ಷೆ ವಿಚಾರ- ಸಿಎಂ ಮನವಿ ಮೇರೆಗೆ ಬಂಧಿಸದಂತೆ ಸೂಚನೆ- ಪೊಲೀಸರಿಗೆ ಸೂಚನೆ ನೀಡಿದ ಸ್ಪೀಕರ್​​​​​​​ ಕೋಳಿವಾಡ 4. ಕಲಬುರಗಿಯಲ್ಲಿ ಸರಣಿ ಕಳ್ಳತನ- ಹಲವು ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ಕಳುವು- ಸಿಸಿಟಿವಿಯಲ್ಲಿ ಕಳ್ಳರ ದೃಶ್ಯ ಸೆರೆ 5. ಪ್ರಧಾನಿಗೆ ಮುಜುಗರ ತಂದ ಕೇಂದ್ರ ಕೃಷಿ ಸಚಿವ- ಸಾರ್ವಜನಿಕ ಸ್ಥಳದಲ್ಲಿ ಸಚಿವರ ಮೂತ್ರ ವಿಸರ್ಜನೆ- ರಾಧಾ ಮೋಹನ್​ ಸಿಂಗ್​ ನಡೆಗೆ ವ್ಯಾಪಕ ಖಂಡನೆ
Breaking News :

ಚಾಂಪಿಯನ್ಸ್​ ಟ್ರೋಫಿ: ಪಾಕ್​ ಗೆಲುವಿಗೆ ಕಾಶ್ಮೀರದಲ್ಲಿ ಸಂಭ್ರಮಾಚರಣೆ

Monday, 19.06.2017, 8:11 AM       No Comments

ಶ್ರೀನಗರ: ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಪಟಾಸಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಪಾಕ್​ ಗೆಲುವಿಗೆ ಶ್ರೀನಗರದಲ್ಲಿ ಕಾಶ್ಮೀರಿ ಯುವಕರು ಸಂಭ್ರಮಿಸುತ್ತಿರುವ ವಿಡಿಯೋ ಫ್ರಂಟ್​ಲೈನ್​ ಕಾಶ್ಮೀರ ಎಂಬ ಟ್ವಿಟರ್​ ಅಕೌಂಟ್​ನಲ್ಲಿ ಮೊದಲು ಅಪ್​ಲೋಡ್​ ಆಗಿದ್ದು. ನಂತರ ನೂರಾರು ಜನರು ಇದನ್ನು ರಿ ಟ್ವಿಟ್​ ಮಾಡಿದ್ದಾರೆ. ಅಲ್ಲದೆ ಈದ್​ಗೂ ಮುನ್ನವೇ ಈದ್​ ಆಚರಣೆ ನಡೆದಿದೆ ಎಂಬ ಅಡಿಬರಹವನ್ನೂ ಹಾಕಲಾಗಿದೆ.

ಕಣಿವೆ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಮುಂದಿವರೆದಿರುವ ಪಾಕ್​ ಗೆಲುವನ್ನು ಕಾಶ್ಮೀರಿ ಯುವಕರು ಸಂಭ್ರಮಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *

one × one =

Back To Top