Monday, 16th July 2018  

Vijayavani

ಡ್ಯಾಂಗಳು ತುಂಬಿವೆ, ಸಿಎಂ ರಿಂದ ಕಣ್ಣೀರಧಾರೆ - ಸಿಎಂ ಕಣ್ಣೀರಿಗೆ ಆಯನೂರು ವ್ಯಂಗ್ಯ - ಕಲ್ಲು ಹೃದಯಗಳಿಗೆ ಕಣ್ಣೀರು ಬರಲ್ಲ ಅಂತಾ ಸಚಿವ ನಾಡಗೌಡ ಟಾಂಗ್‌        ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೇವೆ, ಪ್ರಮುಖ ಖಾತೆ ಬಿಟ್ಟಿದ್ದೇವೆ - ಸಿಎಂ ‘ವಿಷಕಂಠ’ ಹೇಳಿಕೆಗೆ ಎ. ಮಂಜು ಟಾಂಗ್‌ - ದೋಸ್ತಿ ಸರ್ಕಾರದಲ್ಲಿ ಮತ್ತೇ ಜಂಗೀ ಕುಸ್ತಿ        ಒಂದೇ ವೇದಿಕೆಯಲ್ಲಿ ಎಚ್‌ಡಿಕೆ, ಡಿಕೆಶಿ - ರಾಮನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ - ಉಪಚುನಾವಣೆಗೆ ದೋಸ್ತಿಗಳ ಅಡಿಪಾಯ        ಸಿದ್ದು ಅನ್ನಭಾಗ್ಯದಲ್ಲಿ ಮಿಂಚಿದ್ದವನಿಗೆ ದೌರ್ಭಾಗ್ಯ - ಮಗನಿಗೆ ಚಿಕಿತ್ಸೆ ಕೊಡಿಸಲು ತಂದೆಯ ಪರದಾಟ - ಜಾಹೀರಾತಿಗೆ ಬಳಸಿಕೊಂಡು ಕೈಬಿಟ್ಟ ಸರ್ಕಾರ        ನಾಲ್ಕನೇ ವರ್ಷಕ್ಕೆ ಕಾಲಿಟ್ಟ ಮಹಾದಾಯಿ ಹೋರಾಟ - ದಯಾಮರಣಕ್ಕಾಗಿ ರೈತರಿಂದ ಮನವಿ - ರಾಜ್ಯ ಕೇಂದ್ರದ ವಿರುದ್ಧ ಅನ್ನದಾತರ ಆಕ್ರೋಶ        ಮುಂದಿನ ಲೋಕಸಭೆ ಚುನಾವಣೆ ಭರ್ಜರಿ ತಯಾರಿ- 25 ಸ್ಥಾನ ಗೆಲ್ಲಲು ಬಿಜೆಪಿ ಬಿಗ್‌ ಪ್ಲಾನ್‌ - ಜುಲೈ 28 ಕ್ಕೆ ಅಮಿತ್‌ ಷಾ ರಾಜ್ಯಕ್ಕೆ ಆಗಮನ       
Breaking News

ವಿಶ್ವವನ್ನು ಒಂದುಗೂಡಿಸುವ ಶಕ್ತಿ ಯೋಗಕ್ಕಿದೆ: ಮೋದಿ

Thursday, 21.06.2018, 8:33 AM       No Comments

<<4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ>>

ಉತ್ತರಾಖಂಡ್​: ಯೋಗ ವ್ಯಕ್ತಿಯ ದೇಹ, ಮೆದುಳು ಮತ್ತು ಆತ್ಮಕ್ಕೆ ಸಂಬಂಧ ಕಲ್ಪಿಸಿ ಒಂದೇ ಬಾರಿಗೆ ಶಾಂತಿ ಭಾವವನ್ನು ಅನುಭವಿಸಲು ನೆರವಾಗುತ್ತದೆ. ಡೆಹ್ರಾಡೂನ್​ನಿಂದ ಡುಬ್ಲಿನ್​ವರೆಗು, ಶಾಂಘೈನಿಂದ ಚಿಕಾಗೊ, ಜಕಾರ್ತದಿಂದ ಜೊಹಾನ್ಸ್​ಬರ್ಗ್​ವರೆಗೂ ಎಲ್ಲೆಡೆ ಬರೀ ಯೋಗ(ಯೋಗ ಹಿ ಯೋಗ)! ಯೋಗವು ವಿಶ್ವವನ್ನೇ ಒಂದು ಮಾಡುವ ಶಕ್ತಿ ಹೊಂದಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಡೆಹ್ರಾಡೂನ್​ನ ಅರಣ್ಯ ಸಂಶೋಧನಾ ಸಂಸ್ಥೆ ಆವರಣದಲ್ಲಿ ಆಚರಿಸಲಾದ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಉತ್ತರಾಖಂಡ್ ಆದಿ ಶಂಕರಾಚಾರ್ಯರು, ವಿವೇಕಾನಂದರ ಪುಣ್ಯಭೂಮಿಯಾಗಿದ್ದು, ಹಲವು ವರ್ಷಗಳಿಂದ ಯೋಗದ ಮುಖ್ಯ ಕೇಂದ್ರವಾಗಿದೆ. ಇಲ್ಲಿನ ನಿರ್ಮಲ ವಾತಾವರಣ ಯೋಗ ಆಚರಿಸಲು ಸ್ಫೂರ್ತಿ ಎಂದರು.

ಪ್ರತಿನಿತ್ಯ ವ್ಯಕ್ತಿ, ಸಮಾಜದ ನಡುವೆ ಕಲಹ ಏರ್ಪಡುತ್ತಿದೆ. ಇಂತಹ ಕಲಹಗಳಿಂದ ಮನುಷ್ಯನ ಮಾನಸಿಕ ಅಸ್ಥಿತ್ವ ದುರ್ಬಲಗೊಳ್ಳುತ್ತಿದೆ. ಯೋಗದಿಂದ ಸಮಾಜದಲ್ಲಿ ಸದ್ಭಾವನೆ ಹೆಚ್ಚಾಗಲಿದೆ. ಆರೋಗ್ಯ ಸಮಸ್ಯೆಗೆ ಯೋಗವೇ ಪರಿಪಕ್ವ ಪರಿಹಾರ. ಆಧುನಿಕ ಜೀವನದ ಒತ್ತಡ ನಿರ್ವಹಣೆಗೆ ಯೋಗ ಸಹಕಾರಿ. ಕುಟುಂಬದ ವೈದ್ಯಕೀಯ ವೆಚ್ಚವನ್ನು ಯೋಗ ಕಡಿತಗೊಳಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಹಲವು ಕೇಂದ್ರ ಸಚಿವರ ಜತೆ 55 ಸಾವಿರ ಉತ್ಸಾಹಿಗಳು ಭಾಗಿಯಾಗಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top