Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಕೋಟ್ಯಧಿಪತಿ ಹಾಟ್​ಸೀಟ್​ನಲ್ಲಿ ಯಶ್

Friday, 13.07.2018, 3:03 AM       No Comments

ಬೆಂಗಳೂರು: ಜನಪ್ರಿಯ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಜನಸಾಮಾನ್ಯರ ಜತೆ ಸೆಲೆಬ್ರಿಟಿಗಳು ಕೂಡ ಭಾಗವಹಿಸುತ್ತಿರುವುದು ವಿಶೇಷ. ಈಗಾಗಲೇ ನಟ ಗಣೇಶ್ ಹಾಟ್​ಸೀಟ್​ನಲ್ಲಿ ಕುಳಿತು ತೀಕ್ಷ್ಣ ಪ್ರಶ್ನೆಗಳಿಗೆ ಉತ್ತರಿಸಿದ್ದಾಗಿದೆ. ಈಗಿನದ್ದು ‘ರಾಕಿಂಗ್ ಸ್ಟಾರ್’ ಯಶ್ ಸರದಿ. ‘ಸ್ಟಾರ್ ಸುವರ್ಣ’ ವಾಹಿನಿಯ ಈ ಆಕರ್ಷಕ ಕಾರ್ಯಕ್ರಮಕ್ಕೆ ಸೆಲೆಬ್ರಿಟಿ ಸ್ಪರ್ಧಿಯಾಗಿ ಬಂದಿರುವ ಅವರು ನಿರೂಪಕ ರಮೇಶ್ ಅರವಿಂದ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು ಮಾತ್ರವಲ್ಲದೆ, ಭರಪೂರ ಮನರಂಜನೆಯನ್ನೂ ನೀಡಿದ್ದಾರೆ. ಈ ಎಪಿಸೋಡ್​ಗಳು ಜು.13 ಮತ್ತು 16ರಂದು ಪ್ರಸಾರ ಆಗಲಿವೆ.

ಸಮಾಜಮುಖಿ ಕೆಲಸಗಳ ಸಲುವಾಗಿ ಪ್ರಾರಂಭವಾಗಿರುವ ‘ಯಶೋಮಾರ್ಗ’ ಸಂಸ್ಥೆ ಪರವಾಗಿ ಯಶ್ ಹಾಟ್​ಸೀಟ್​ನಲ್ಲಿ ಕುಳಿತಿದ್ದಾರೆ.

ಅವರು ಭಾಗವಹಿಸಿರುವ ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ನಿರೀಕ್ಷೆ ಹೆಚ್ಚಿಸಿವೆ. ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿರುವ ಯಶ್, ತಿಳಿಹಾಸ್ಯದ ಮೂಲಕ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಯ ಹುಟ್ಟಿಸುವ ಪ್ರಶ್ನೆ ಯಾವುದು, ಆದರ್ಶ ವ್ಯಕ್ತಿ, ನೆಚ್ಚಿನ ಕ್ರಿಕೆಟಿಗ ಯಾರು, ರಾಜ್​ಕುಮಾರ್ ಮತ್ತು ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿದ ಕ್ಷಣ ಹೇಗಿತ್ತು ಎಂಬಿತ್ಯಾದಿ ವಿಷಯಗಳನ್ನು ವಿವರಿಸಿದ್ದಾರೆ. ರಮೇಶ್ ಅರವಿಂದ್ ಜತೆ ‘ಅಣ್ಣಂಗೇ ಲವ್ ಆಗಿದೆ..’ ಎಂದು ಸ್ಟೆಪ್ ಹಾಕುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿರುವುದು ವಿಶೇಷ.

ಕಾರ್ಯಕ್ರಮದಲ್ಲಿ ಯಶ್​ಗೆ ಜತೆಗಾರರಾಗಿ ಅವರ ಆಪ್ತರಾದ ಡಾ. ಸೂರಿ ಮತ್ತು ನಿರ್ವಪಕ ಬೋಗೇಂದ್ರ ಪಾಲ್ಗೊಂಡಿದ್ದಾರೆ. ಫೋನ್ ಎ ಫ್ರೆಂಡ್ ಲೈಫ್ ಲೈನ್ ಬಳಸಿ ಪತ್ನಿ ರಾಧಿಕಾ ಪಂಡಿತ್ ಅವರೊಂದಿಗೆ ಮಾತನಾಡುವ ಯಶ್​ಗೆ ರಾಧಿಕಾ ಕಡೆಯಿಂದ ಸರಿಯಾದ ಉತ್ತರ ಸಿಗುತ್ತಾ? ಇದಕ್ಕೆಲ್ಲ ಶುಕ್ರವಾರ ಮತ್ತು ಸೋಮವಾರ ರಾತ್ರಿ 8 ಗಂಟೆಗೆ ‘ಕನ್ನಡದ ಕೋಟ್ಯಧಿಪತಿ’ ಸಂಚಿಕೆಗಳಲ್ಲಿ ಉತ್ತರ ದೊರೆಯಲಿದೆ.

Leave a Reply

Your email address will not be published. Required fields are marked *

Back To Top