Wednesday, 19th September 2018  

Vijayavani

ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ ಡೆಪಾಸಿಟ್ ಆಗ್ತಿದೆ ಹವಾಲಾ ಹಣ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಡಿಕೆಶಿ ಮನೆಯಲ್ಲಿ ಸಿಕ್ಕಿದೆ 20 ಕೋಟಿ ಹಣ - ಡಿಕೆಶಿ ಆಪ್ತ ಆಂಜನೇಯ ತಪ್ಪೊಪ್ಪಿಗೆ ಹೇಳಿಕೆ ಬಿಡುಗಡೆ - ಸಂಬಿತ್ ಪಾತ್ರ ಆರೋಪ        ರಾಜ್ಯ ಬಿಜೆಪಿ ಶಾಸಕರ ಸಭೆ ಆರಂಭ - ಗಾಯತ್ರಿ ವಿಹಾರದಲ್ಲಿ ಮೀಟಿಂಗ್ - ತೀವ್ರ ಕುತೂಹಲ ಕೆರಳಿಸಿದ ಬಿಎಸ್​ವೈ ಮೀಟಿಂಗ್        ನನಗೂ 2 ಮುಖಗಳಿವೆ, ಆದ್ರೂ ಶಾಂತವಾಗಿರ್ತೀನಿ - ಒಂದು ವಾರ ನೋಡಿ ಚಾಟಿ ಬೀಸ್ತೀನಿ - ಸಿಎಂ ಗುಡುಗು        ಶಕ್ತಿಕೇಂದ್ರವಾದ ರಮೇಶ್ ನಿವಾಸ - ಮಿನಿಸ್ಟರ್ ಮನೆಗೆ ಶಾಸಕರ ದಂಡು - ಎಂಟಿಬಿ, ರಾಮಪ್ಪ, ಅಬ್ಬಯ್ಯ ಸೇರಿ ಹಲವರ  ಮಾತುಕತೆ        ಜಾರಕಿಹೊಳಿ ಆಯ್ತು, ಈಗ ಬಳ್ಳಾರಿ ಹುಳಿ - ನಾಗೇಂದ್ರ ಪರ ಬ್ಯಾಟ್ ಬೀಸಿದ್ದ ರಮೇಶ್ ವಿರುದ್ಧ ಗರಂ       
Breaking News

ಕೋಲಿ ಸಮಾಜಕ್ಕೆ ಎಚ್ಡಿಕೆ ಅನ್ಯಾಯ

Tuesday, 10.07.2018, 3:47 AM       No Comments

ಸುರಪುರ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಲ್ಮೀಕಿ, ಕನಕ, ಕೂಡಲ ಸಂಗಮದ ಗುರು ಪೀಠಗಳಿಗೆ 25 ಕೋಟಿ ರೂ. ಅನುದಾನ ನೀಡಿ, ನಮ್ಮ ಕೋಲಿ ಸಮುದಾಯಕ್ಕೆ ನಯಾಪೈಸೆ ನೀಡದೆ ಈ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದರು.

ತಾಲೂಕಿನ ಮಾಚಗುಂಡಾಳ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೂಡಲೇ ನರಸಿಪುರದ ಅಂಬಿಗರ ಚೌಡಯ್ಯ ಗುರುಪೀಠಕ್ಕೆ 25 ಕೋಟಿ ರೂ. ಅನುದಾನ ನೀಡಬೇಕು. ಹಾಗೊಂದು ವೇಳೆ ನೀಡದಿದ್ದಲ್ಲಿ ಸಮಾಜ ಬಾಂಧವರೊಂದಿಗೆ ತಮ್ಮ ಮನೆ ಎದುರು ಧರಣಿ ಮಾಡುವುದಾಗಿ ಎಚ್ಚರಿಸಿದರು.

ಈ ಹಿಂದೆ ಮೋಯ್ಲಿ ಸರ್ಕಾರದಲ್ಲಿ ಸಚಿವನಾಗಿದ್ದಾಗ ಕೋಲಿ ಸಮಾಜಕ್ಕೆ ಪ್ರವರ್ಗ-1ರಲ್ಲಿ ಸೇರಿಸುವ ಕೆಲಸ ಮಾಡಿದೆ. ಎಸ್.ಎಂ ಕೃಷ್ಣ ಮಖ್ಯಮಂತ್ರಿಯಾಗಿದ್ದಾಗ ಸಮಾಜದ ದೇವಸ್ಥಾನಗಳಿಗೆ 33 ಲಕ್ಷ ರೂ. ಅನುದಾನ ಕೊಡಿಸಿದೆ. ಸಿದ್ದರಾಮಯ್ಯ ಸರ್ಕಾವಿದ್ದಾಗ ಯಾನಾಗುಂದಿಯಲ್ಲಿ ಸಮಾವೇಶ ಮಾಡಿ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನರಸಿಪುರದ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೆ ಸಂಸ್ಕಾರ ಎಂಬುದು ಮುಖ್ಯ, ಸಂಸ್ಕಾರ ಇಲ್ಲದ ಮಕ್ಕಳು ದಾಯಾದಿಗಳಾಗುತ್ತಾರೆ. ಆದ್ದರಿಂದ ಎಲ್ಲರೂ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸಬೇಕು ಸಲಹೆ ನೀಡಿದರು.

ಇದಕ್ಕೂ ಮೊದಲು ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ಮಹಿಳೆಯರ ಕುಂಭ ಕಳಸ ಹಾಗೂ ವಾದ್ಯ ಮೇಳದೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು. ನಂತರ ಅಂಬಿಗರ ಚೌಡಯ್ಯನವರ ಮೂರ್ತಿ ಹಾಗೂ ವೇದಿಕೆಯಲ್ಲಿದ್ದ ವಿಠ್ಠಲ ಹೇರೂರರ ಭಾವಚಿತ್ರ ಅನಾವರಣಗೊಳಿಸಲಾಯಿತು.
ವೇದಿಕೆಯಲ್ಲಿದ್ದ ಕೋಲಿ ಸಮಾಜದ ರಾಜ್ಯಾಧ್ಯಕ್ಷ ಬಸವರಾಜ ಸಪ್ಪನಗೊಳ, ಮೌಲಾಲಿ ಅನಪೂರ, ಶಿವಕುಮಾರ ನಾಟೇಕಾರ್, ಶಿವಾಜಿ ನಟಗಾರ, ಮೋನಪ್ಪ ಶಿರವಾಳ, ಅಯ್ಯಣ್ಣ ಕನ್ಯೆಕೊಳೂರ, ಉಮೇಶ ಮುದ್ನಾಳ, ಮಾನಪ್ಪ ಸೂಗುರು ಮಾತನಾಡಿದರು.

ಹೋತಪೇಟದ ಶಿವಲಿಂಗ ಸ್ವಾಮೀಜಿ, ಶಂಕರ ನಾಯಕ, ಸಣ್ಣ ದೇಸಾಯಿ, ರಾಮಣ್ಣ ನಾಯ್ಕೋಡಿ, ಶಿವಣ್ಣ ಕಟ್ಟಿಮನಿ, ಮಹಾದೇವಪ್ಪ ಸಾಲಿಮನಿ, ಶಿವಪ್ಪ ರಸ್ತಾಪುರ, ಹಣಮಂತ ಲಾಠಿ, ಶ್ರೀನಿವಾಸ ದರಬಾರಿ, ದೊಡ್ಡಕೊತಲೆಪ್ಪ ಹಾವಿನ್, ವೆಂಕಣ್ಣ ಕಟ್ಟಿಮನಿ, ರಾಘವೇಂದ್ರ ನಾಗನಟಿಗಿ ಇತರರಿದ್ದರು.

ಈ ಬಾರಿ ನನ್ನನ್ನ ಸೋಲಿಸಲು ಯಾದಗಿರಿ ಜಿಲ್ಲೆಯ ಶಾಸಕರೊಬ್ಬರು 2 ಕೋಟಿ ರೂ. ಹಣ ನೀಡಿ ಸೋಲಿಸಿದರು. ಸಮಯ ಬಂದಾಗ ಆ ಶಾಸಕ ಯಾರು ಎಂದು ಬಹಿರಂಗ ಮಾಡುವೆ.
| ಬಾಬುರಾವ್ ಚಿಂಚನಸೂರ, ಮಾಜಿ ಸಚಿವ

Leave a Reply

Your email address will not be published. Required fields are marked *

Back To Top