Tuesday, 16th October 2018  

Vijayavani

ಉಪ ಮಹಾಸಂಗ್ರಾಮದ ಅಖಾಡ ಫೈನಲ್-ಕೊನೆದಿನ ಉಗ್ರಪ್ಪ, ಶಾಂತಾ, ಮಧು ನಾಮಪತ್ರ- ಎಲೆಕ್ಷನ್ ಗೆಲ್ಲಲು ತಂತ್ರ, ಪ್ರತಿತಂತ್ರ        ರಣಕಣದಲ್ಲಿ ಆರಂಭವಾಯ್ತಾ ಜಾತಿ ಮೇಲಾಟ?-ಡಿಕೆಗೆ ಪೋಸ್ ಲೀಡರ್ ಅಂತಾ ಜಾರಕಿಹೊಳಿ ಟಾಂಗ್- ಇನ್ನೂ ಆರದ ಕೈ ದಳ್ಳುರಿ.!        ನಾಮಿನೇಷನ್ ಆಯ್ತು ಈಗ ಯುದ್ಧ ಸ್ಟಾರ್ಟ್​- ಉಪಚುನಾವಣೆಯಲ್ಲಿ ಯಾರ ಪರ ಇದೆ ಜನಮತ- ದಿಗ್ವಿಜಯ ಗ್ರೌಂಡ್​ ರಿಪೋರ್ಟ್​        ನಾಳೆ ಶಬರಿಮಲೈ ದೇವಸ್ಥಾನ ಬಾಗಿಲು ಓಪನ್- ಪ್ರವೇಶಕ್ಕೆ ಕೆಲ ನಾರಿಯರ ಕಾತರ- ಮಹಿಳಾ ಎಂಟ್ರಿ ವಿರುದ್ಧ ಭುಗಿಲೆದ್ದ ಹೋರಾಟ        ಬಿಹಾರ ಲೋಕಗುರಿ ತಲುಪಲು ನಿತೀಶ್ ಹೊಸಬಾಣ- ಪ್ರಶಾಂತ್​ ಕಿಶೋರ್​​ ಗೆ ಪಕ್ಷದಲ್ಲಿ ಜವಾಬ್ದಾರಿ        ಮೈಸೂರು ದಸರಾದಲ್ಲಿ ಮತ್ತಷ್ಟು ವೈಭವ -2000 ಬೊಂಬೆಗಳ ಪ್ರದರ್ಶನ-ಆನೆಗಳಿಗೆ ಅಂತಿಮ ತಾಲೀಮು, ಕಳೆಗಟ್ಟಿದ ಪುಷ್ಪಲೋಕ       
Breaking News

ಸುರಪುರ ತಹಸಿಲ್​ ಕಚೇರಿಗೆ ಮುತ್ತಿಗೆ

Friday, 10.08.2018, 5:37 AM       No Comments

ಸುರಪುರ: ದೇಶದಲ್ಲಿ ಆಡಳಿತ ನಡೆಸುತ್ತಿರುವ ಯಾವ ಸರ್ಕಾರಗಳು ರೈತರ ನೆರವಿಗೆ ಬಾರದೆ ಮೋಸ ಎಸಗುತ್ತಿವೆ. ಸತತ ಬರಗಾಲದಿಂದ ಕಂಗೆಟ್ಟ ರೈತರು ನಿತ್ಯ ಆತ್ಮಹತ್ಯೆಗೆ ಶರಣಾಗುತ್ತಿದ್ದರೂ, ಸರ್ಕಾರಗಳು ರೈತರ ಸಂಪೂರ್ಣ ಸಾಲ ಮನ್ನಾ ಮಾಡದೆ ನಿರ್ಲಕ್ಷ್ಯ ತೋರಿವೆ ಎಂದು ಸಾಮೂಹಿಕ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸಾಮೂಹಿಕ ಸಂಘಟನೆಗಳ ವೇದಿಕೆಯಿಂದ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಮಂಗಳವಾರ ಹಮ್ಮಿಕೊಂಡಿದ್ದ ಜೈಲ್ ಭರೋ ಚಳವಳಿಯಲ್ಲಿ ಭಾಗವಹಿಸಿ ಮಾತನಾಡಿ ಪ್ರಮುಖರು, ಕಳೆದ 4 ವರ್ಷಗಳಿಂದ ಸತತವಾಗಿ ರಾಜ್ಯದಲ್ಲಿ ಬರಗಾಲವಿದೆ. ಇದು ಸರ್ಕಾ‘ರಗಳಿಗೆ ಗೊತ್ತಿದ್ದು ರೈತರಿಗೆ ಎಕರೆಗೆ ಇಪ್ಪತ್ತು ಸಾವಿರ ಪರಿಹಾರ ನೀಡುತ್ತಿಲ್ಲ. ಇನ್ನೂ ಸಾಲಮನ್ನಾ ವಿಷಯದಲ್ಲೂ ತಾರತಮ್ಮ ಎಸಗಲಾಗಿದೆ ಎಂದು ಆರೋಪಿಸಿದರು.
ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಆರಂಭದಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ತಹಸಿಲ್ ಕಚೇರಿವರೆಗೆ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸಕರ್ಾರದ ವಿರುದ್ಧ ಘೋಷಣೆಗಳ ಕೂಗಿದರು. ನಂತರ ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಧರ್ಮಣ್ಣ ದೊರೆ, ಸುರೇಖಾ ಕುಲಕಣರ್ಿ, ಯಲ್ಲಪ್ಪ ಚಿನ್ನಾಕಾರ, ರಾಮಯ್ಯ ಬೋವಿ, ಬಸ್ಸಮ್ಮ ಆಲ್ಹಾಳ, ಪ್ರಕಾಶ ಆಲ್ಹಾಳ, ನಸೀಮಾ ಮುದನೂರ, ರಾಧಾಬಾಯಿ ಲಕ್ಷ್ಮೀಪುರ, ಶಿವರಾಜ ಕರಿಗುಡ್ಡ, ಸಿದ್ದಲಿಂಗಯ್ಯ ವಗ್ಗಾ, ಚಂದ್ರಾಮ ಚಂದಲಾಪುರ, ಮಲ್ಲಿಕಾಜರ್ುನ ಹಡಪದ, ಬಸವರಾಜ ಕವಲ್ದಾರ, ಗೀತಾ ನಗನೂರ, ಯಮನಪ್ಪ ಕುಂಬಾರ, ಮಹಿಬೂಬ್ ಸುರಪುರ, ಮಲ್ಲನಗೌಡ ಗೌಡಗೇರಾ, ನಿಂಗಣ್ಣ ಕಲ್ಲದೇವನಹಳ್ಳಿ ಇತರರಿದ್ದರು.
ಕೇರಳ ಮಾದರಿ ರೈತರ ಸಾಲ ಮನ್ನಾ ಮಾಡಲಿ: ರೈತರ, ಕಾರ್ಮಿಕರ, ಎಲ್ಲ ಸ್ತ್ರಿಶಕ್ತಿ ಸಂಘಗಳ ಸಂಘಗಳ ಸಾಲವನ್ನು ಕೇರಳ ಮಾದರಿಯಲ್ಲಿ ಸಂಪೂರ್ಣ ಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಕೆಲಸವನ್ನು ಎರಡು ನೂರು ದಿನಗಳಿಗೆ ಹೆಚ್ಚಿಸಬೇಕು. ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ರೈತರಿಗೆ, ಕೂಲಿ ಕಾಮಿಕರಿಗೆ ಮಾಸಿಕ ಐದು ಸಾವಿರ ಪಿಂಚಣಿ ನೀಡಬೇಕು. ಬೂದಿಹಾಳ, ಪೀರಾಪುರ ಏತ ನೀರಾವರಿ ಯೊಜನೆ ಶೀಘ್ರ ಮುಗಿಸಬೇಕು. ಅನ್ ಲಿಮಿಟೇಶನ್ ಮನೆಗಳ ಅರ್ಜಿ ಹಾಕಿದ ಎಲ್ಲ ಫಲಾನುಭವಿಗಳಿಗೆ ಮನೆಗಳನ್ನು ನೀಡಬೇಕು. ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿನ ಭ್ರಷ್ಟಾಚಾರ ಕೂಡಲೇ ತಡೆಯಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

Back To Top