Monday, 15th October 2018  

Vijayavani

‘ಉಪ' ಕದನಕ್ಕೆ ಇಂದು ಉಮೇದುವಾರಿಕೆ-ಶಿವಮೊಗ್ಗದಲ್ಲಿ ಮಾಜಿ ಸಿಎಂ ಪುತ್ರ ನಾಮಪತ್ರ- ಇತ್ತ ರಾಮನಗರದಿಂದ ಸಿಎಂ ಪತ್ನಿ        ಕುತೂಹಲ ಕೆರಳಿಸಿದ ಬೆಳಗಾವಿ ಎಪಿಎಂಸಿ ಎಲೆಕ್ಷನ್-ಲಕ್ಷ್ಮೀ ವಿರುದ್ಧ ಸೋಲು ತೀರಿಸಿಕೊಳ್ಳಲು ಜಾರಕಿಹೊಳಿ ಬಣ ಸಿದ್ಧತೆ        ಸ್ಯಾಂಡಲ್​ವುಡ್​ನಲ್ಲೂ ‘ಮೀ ಟೂ’ ಸದ್ದು-ನಟಿ ಸಂಗೀತಾ ಭಟ್ ದಯವಿಟ್ಟು ಗಮನಿಸಿ ಅಂತ ಫೇಸ್​ಬುಕ್​ನಲ್ಲಿ ನೋವು        ಮೀ ಟೂ ಆರೋಪಕ್ಕೆ ಖುಷ್ಬು ತಿರುಗೇಟು-ಕೇಜ್ರಿಸ್ಟಾರ್ ಮೇಲೆ ಬೊಟ್ಟು ಮಾಡಿದವರಿಗೆ ಎದುರೇಟು        MEE TOOಗೆ ಬಿತ್ತು ಮೊದಲ ವಿಕೆಟ್-ಕೇಂದ್ರ ಸಚಿವ ಸ್ಥಾನಕ್ಕೆ ಎಂ.ಜೆ.ಅಕ್ಬರ್ ರಿಸೈನ್​        ಪೆಟ್ರೋಲ್ ಬ್ಯಾರಲ್ ಸ್ಫೋಟಕ್ಕೆ ಕೊಪ್ಪಳದ ಅಧಿಕಾರಿ ಸಾವು -ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನಲ್ಲಿ ಕೊನೆಯುಸಿರು       
Breaking News

ಅಪಾರ ಭಕ್ತ ಸಮೂಹ ಮಧ್ಯೆ ಗಂಧದ ಭವ್ಯ ಮೆರವಣಿಗೆ

Sunday, 08.07.2018, 5:53 AM       No Comments

ನಾಯ್ಕಲ್: ಕುರುಕುಂದಾ ಗ್ರಾಮದಲ್ಲಿ ಹಜರತ್ ಸೈಯದ್ ಷಹಾ ಫತೇ ಉಲ್ಲಾ ಖಾದ್ರಿ ರವರ 526ನೇ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.

ದರ್ಗಾದ ಪೀಠಾಧಿಪತಿ ಶ್ರೀ ಸಯ್ಯದ್ ಷಹಾ ಯಾಸೀನ್ ಹುಸೇನಿ ಪೀರಾ ಆಶಿರ್ವಚನ ನೀಡಿ, ಮನುಕುಲದ ಒಳಿತಿಗಾಗಿ, ನಾಡಿನಲ್ಲಿ ಉತ್ತಮ ಮಳೆ, ಬೆಳೆಗಾಗಿ ಹಾಗೂ ಜನತೆಗೆ ಆರೋಗ್ಯ ವೃದ್ಧಿಸಲಿ ಎಂದು ಮತ್ತು ನೈಸಗರ್ಿಕ ವಿಕೋಪಕ್ಕೆ ನಮ್ಮ ನಾಡು ತುತ್ತಾಗದಿರಲಿ ಎಂದು ಪ್ರಾರ್ಥಿಸಿದರು.

ಗ್ರಾಮದ ಹಾಗೂ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ ಅಪಾರ ಭಕ್ತ ಸಮೂಹದೊಂದಿಗೆ ಗ್ರಾಮದ ಸಣ್ಣ ಮಸೀದಿಯಿಂದ ಶುಕ್ರವಾರ ರಾತ್ರಿ 11 ಗಂಟೆಗೆ ಹೊರಟ ಮೆರವಣಿಗೆ ಬಾಜಾ ಭಜಂತ್ರಿಗಳೊಂದಿಗೆ ಪ್ರಮುಖ ಬೀದಿಗಳ ಮೂಲಕ ಶನಿವಾರ ನಸುಕಿನ ಜಾವ 4 ಗಂಟೆಗೆ ಗಂಧದೊಂದಿಗೆ ದರ್ಗಾಕ್ಕೆ ಆಗಮಿಸಿತು.
ದರ್ಗಾದ ಪೀಠಾಧಿಪತಿ, ಮೌಲಾನ ಸಯ್ಯದ್ ಷಹಾ ಯಾಸೀನ್ ಹುಸೇನಿ ಪೀರಾ, ಸೈಯದ್ ಶಂಷಾಲಂ ಹುಸೇನಿ ಪೀರಾ ಅವರಿಂದ ಗಂಧ ಧರಿಸಲಾಯಿತು. ಗಂಧ ಲೇಪನ ಕಾರ್ಯದಲ್ಲಿ ಮನುಕುಲದ ಒಳಿತಿಗಾಗಿ, ನಾಡಿನಲ್ಲಿ ಉತ್ತಮ ಮಳೆ, ಬೆಳೆಗಾಗಿ ಹಾಗೂ ಜನತೆಗೆ ಆರೋಗ್ಯ ವೃದ್ಧಿಸಲಿ ಎಂದು ಮತ್ತು ನೈಸರ್ಗಿಕ ವಿಕೋಪಕ್ಕೆ ನಮ್ಮ ನಾಡು ತುತ್ತಾಗದಿರಲಿ ಎಂದು ಪ್ರಾರ್ಥಿಸಲಾಯಿತು.
ಪ್ರಮುಖರಾದ ಎಚ್.ಕೆ.ಕುರುಕುಂದಾ, ಕಾಸಿಂ ಮುತ್ಯಾ, ಮಹ್ಮದ್ ಪೂಜಾರಿ, ಡಾ. ಹುಸೇನ್ ಬಾಷಾ, ಚಾಂದಪಾಶ ಗುತ್ತೇದಾರ್, ತಾಪಂ ಸದಸ್ಯ ಮಹ್ಮದ್ ರಸೂಲ್, ಲತೀಫ್ ಮೌಲಾನಾ ಸೇರಿ ಗ್ರಾಮದ ಹಿರಿಯ ಮುಖಂಡರು ಪಾಲ್ಗೊಂಡಿದ್ದರು.
ಭಾನುವಾರದಂದು ಹಜರತ್ರವರ ದೀಪೋತ್ಸವ ಹಾಗೂ ಸೋಮವಾರದಂದು ಜಿಯಾರತ್ ಜರುಗಲಿದೆ

Leave a Reply

Your email address will not be published. Required fields are marked *

Back To Top