Wednesday, 19th September 2018  

Vijayavani

ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ ಡೆಪಾಸಿಟ್ ಆಗ್ತಿದೆ ಹವಾಲಾ ಹಣ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಡಿಕೆಶಿ ಮನೆಯಲ್ಲಿ ಸಿಕ್ಕಿದೆ 20 ಕೋಟಿ ಹಣ - ಡಿಕೆಶಿ ಆಪ್ತ ಆಂಜನೇಯ ತಪ್ಪೊಪ್ಪಿಗೆ ಹೇಳಿಕೆ ಬಿಡುಗಡೆ - ಸಂಬಿತ್ ಪಾತ್ರ ಆರೋಪ        ರಾಜ್ಯ ಬಿಜೆಪಿ ಶಾಸಕರ ಸಭೆ ಆರಂಭ - ಗಾಯತ್ರಿ ವಿಹಾರದಲ್ಲಿ ಮೀಟಿಂಗ್ - ತೀವ್ರ ಕುತೂಹಲ ಕೆರಳಿಸಿದ ಬಿಎಸ್​ವೈ ಮೀಟಿಂಗ್        ನನಗೂ 2 ಮುಖಗಳಿವೆ, ಆದ್ರೂ ಶಾಂತವಾಗಿರ್ತೀನಿ - ಒಂದು ವಾರ ನೋಡಿ ಚಾಟಿ ಬೀಸ್ತೀನಿ - ಸಿಎಂ ಗುಡುಗು        ಶಕ್ತಿಕೇಂದ್ರವಾದ ರಮೇಶ್ ನಿವಾಸ - ಮಿನಿಸ್ಟರ್ ಮನೆಗೆ ಶಾಸಕರ ದಂಡು - ಎಂಟಿಬಿ, ರಾಮಪ್ಪ, ಅಬ್ಬಯ್ಯ ಸೇರಿ ಹಲವರ  ಮಾತುಕತೆ        ಜಾರಕಿಹೊಳಿ ಆಯ್ತು, ಈಗ ಬಳ್ಳಾರಿ ಹುಳಿ - ನಾಗೇಂದ್ರ ಪರ ಬ್ಯಾಟ್ ಬೀಸಿದ್ದ ರಮೇಶ್ ವಿರುದ್ಧ ಗರಂ       
Breaking News

ದವಾಖಾನ-ಎ-ನಿಜಾಮ ಇಂದು ಅನಾಥ

Tuesday, 10.07.2018, 5:56 AM       No Comments

ವಿಜಯವಾಣಿ ವಿಶೇಷ ಗುರುಮಠಕಲ್

ಪದವಿ ಕಾಲೇಜು, ಆಸ್ಪತ್ರೆ ಮತ್ತು ಐಟಿಐ ಕಾಲೇಜು ಸೇರಿ ಹೀಗೆ ಹತ್ತು ಹಲವಾರು ಸರ್ಕಾರಿ ಕಚೇರಿಗಳಿಗೆ ಆಸರೆಯಾದ ಪಟ್ಟಣದ ಗಡಿ ಮೊಹಲ್ಲಾದಲ್ಲಿರುವ ಶತಮಾನದ ಹಳೇ ಆಸ್ಪತ್ರೆ (ದವಾಖಾನ-ಎ-ನಿಜಾಮ) ಕಟ್ಟಡ ಇಂದು ಬೂತ ಬಂಗಲೆಯಂತಾಗಿದೆ.
ಸಧ್ಯ ಈ ಕಟ್ಟಡದ ಕೆಲವೊಂದು ಕೋಣೆ ಬಳಸಿಕೊಂಡು ನೈರ್ಮಲ್ಯ ನಿರೀಕ್ಷಕರ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಈ ಕಚೇರಿಗೆ ಹೇಳಿಕೊಳ್ಳುವ ಹಾಗೆ ಯಾವುದು ಕೂಡ ನೈರ್ಮಲ್ಯದಿಂದ ಕೂಡಿಲ್ಲ. ಕಟ್ಟಡಕ್ಕೆ ಸೂಕ್ತ ಭದ್ರತೆ ಇಲ್ಲದ ಕಾರಣ ಕಿಡಿಗೇಡಿಗಳು ಕಿಟಕಿ ಮತ್ತು ಬಾಗಿಲುಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಎಲ್ಲೆಂದರಲ್ಲಿ ಶೌಚ ಮತ್ತು ತಿಂದು ಉಗುಳಿದ ಗುಟ್ಕಾ ಚೀಟಿಗಳ ಆವರಿಸಿವೆ. ಈ ಕಟ್ಟಡದಲ್ಲಿ ಸದಾ ಜನಜಂಗುಳಿಯಿಂದ ಇರುತಿದ್ದ ಜನರು ಇಂದು ಅನಾಥ ಪ್ರಜ್ಞೆ ಎದುರಿಸುವಂತಾಗಿದೆ.
ಪಿಡೂ್ಲೃಡಿ ಇಲಾಖೆಗೆ ಒಳಪಡುವ ಈ ಕಟ್ಟಡ 1907ರಲ್ಲಿ ನಿಜಾಮ ಆಡಳಿತದಲ್ಲಿ `ದವಾಖಾನ-ಎ-ನಿಜಾಮ’ ಎಂಬ ಹೆಸರಿನಿಂದ ಆರಂಭಗೊಂಡ ಆಸ್ಪತ್ರೆ ನಿಜಾಮ ಆಡಳಿತದಿಂದ ವಿಮುಕ್ತಿ ಪಡೆದ ಮೇಲೆ ರಾಜ್ಯ ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಕಾಯರ್ಾರಂಭ ಮಾಡಿತು.

ಕಳೆದ ಎಂಟು ದಶಕಗಳ ಕಾಲ ಸುಮಾರು ನಲವತ್ತು ಹಳ್ಳಿಗಳಿಗೆ ಆರೋಗ್ಯ ಸೇವೆ ನೀಡಿದ ಈ ಕಟ್ಟಡದಲ್ಲಿ ಸಾವಿರಾರು ಹೆರಿಗೆಗಳು ನಡೆದಿವೆ. ಹೆರಿಗೆ ನಂತರ ಮನೆಗೆ ತೆರಳುವಾಗ ಸಾರ್ವಜನಿಕರು ಪೂಜ್ಯ ಭಾವನೆಯಿಂದ ಆಸ್ಪತ್ರೆ ಬಾಗಿಲಿಗೆ ತೆಂಗಿನ ಕಾಯಿ ಒಡೆದು ತೆರಳುತಿದ್ದರು. ಆದರೆ ಇಂದು ಅಂಥಹ ಯಾವುದೇ ಲಕ್ಷಣ ಇಲ್ಲಿ ಕಾಣುತ್ತಿಲ್ಲ.

ಸ್ಥಳದ ಅಭಾವದಿಂದ ಈ ಆಸ್ಪತ್ರೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಆಗತಾನೆ ಮಟ್ಟಣಕ್ಕೆ ಮಂಜೂರಾದ ಪದವಿ ಕಾಲೇಜಿಗೆ ಈ ಕಟ್ಟಡ ನೆನಪಿಗೆ ಬಂತು. ಇದು ಕೂಡ ಸ್ಥಳಾಂತರಗೊಂಡ ನಂತರ ಐಟಿಐ ಕಾಲೇಜಿಗಾಗಿ ಬಳಸಿಕೊಂಡು ಇದು ಕೂಡ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಮೇಲೆ ಪುರಸಭೆಯಲ್ಲಿ ಸ್ಥಳದ ಅಭಾವಂದಿಂದ ಕೆಲ ಕೋಣೆಗಳನ್ನು ಬಳಸಿಕೊಂಡು ನೈರ್ಮಲ್ಯ ನಿರೀಕ್ಷಕರ ಕಚೇರಿ ಕಾಯರ್ಾರಂಭ ಮಾಡಿದೆ. ಆದರೆ ಇಲ್ಲಿ ಯಾವುದೂ ಕೂಡ ನೈರ್ಮಲ್ಯದಿಂದ ಕೂಡಿಲ್ಲ ಎಂಬ ಆರೋಪ ಇದೆ.

ಆಸ್ಪತ್ರೆ, ಪದವಿ ಮತ್ತು ಐಟಿಐ ಕಾಲೇಜುಗಳಿಗೆ ಆಶ್ರಯ ನೀಡಿದ ಈ ಕಟ್ಟಡ ಇಂದು ಸಾರ್ವಜನಿಕರು ಸಾಮೂಹಿಕ ಮೂತ್ರ ವಿಸರ್ಜನೆಯ ತಾಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಕಟ್ಟಡದ ನವೀಕರಣಕ್ಕಾಗಿ ಪ್ರಯತ್ನಿಸಿಲ್ಲ ಎಂಬ ದೂರು ಕೇಳಿಬಂದಿವೆ. ಈಗಲಾದರು ಕಟ್ಟಡದ ಸುತ್ತ ಮತ್ತು ಒಳಗೆ ಶುಚಿತ್ವಕ್ಕೆ ಆದ್ಯತೆ ನೀಡಬೇಕಾಗಿದ್ದು ಜರೂರಿಯಾಗಿದೆ.

ಹಳೇ ಆಸ್ಪತ್ರೆ ಕಟ್ಟಡ ಭದ್ರವಾಗಿದ್ದು ರಕ್ಷಣೆಯಿಲ್ಲದ ಕಾರಣ ಜನರು ಶೌಚಕ್ಕೆ ಬಳಸುತ್ತಿದ್ದಾರೆ. ಇದರಿಂದಾಗಿ ಬಡಾವಣೆಯಲ್ಲಿ ದುವರ್ಾಸನೆ ಹಾಗೂ ರೋಗಗಳ ಭೀತಿ ಉಂಟಾಗಿದೆ. ಸಂಬಮಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಕೊಳ್ಳಬೇಕು.
| ಸತ್ಯನಾರಯಣ ತಿವಾರಿ, ಸ್ಥಳೀಯ ನಿವಾಸಿ

Leave a Reply

Your email address will not be published. Required fields are marked *

Back To Top