Thursday, 19th July 2018  

Vijayavani

ಉಡುಪಿಯ ಶಿರೂರು ಶ್ರೀಗಳು ವೃಂದಾವನಸ್ಥ - ಚಿಕಿತ್ಸೆ ಫಲಕಾರಿಯಾಗದೇ ವಿಧಿವಶ - ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರು        ವಿವಿ ಸಿಂಡಿಕೇಟ್​​​​​​​​ ನಾಮನಿರ್ದೇಶಿತ ಸದಸ್ಯರ ರದ್ದು - ಸಿಎಂ ಎಚ್​ಡಿಕೆ ವಿರುದ್ಧ ಸಿಡಿದೆದ್ದ ಸಿದ್ದು - ಈ ಪ್ರಕರಣವನ್ನ ಸುಮ್ನೆ ಬಿಡಲ್ಲವೆಂದ ಮಾಜಿ ಸಿಎಂ        CWC ಸದಸ್ಯರಾದ ಸಿದ್ದರಾಮಯ್ಯಗೆ ಬಿಗ್​​​​​​​ ಶಾಕ್​​ - ಕ್ಯಾಬಿನೆಟ್ ಸ್ಥಾನಮಾನಕ್ಕೆ ಕೈ ನಾಯಕರೇ ಕೊಕ್ಕೆ - ಪರಂ,ಡಿಕೆಶಿಯಿಂದ ಮಾಸ್ಟರ್​ ಪ್ಲಾನ್​​        ಸಿಎಂ ಆದ ಬಳಿಕ ಕೊಡಗು ಜಿಲ್ಲೆಗೆ ಎಚ್​ಡಿಕೆ - ಹಾರಂಗಿ, ತಲಕಾವೇರಿಯಲ್ಲಿ ವಿಶೇಷ ಪೂಜೆ - ಮುಖ್ಯಮಂತ್ರಿಗೆ ಸ್ವಾಗತ ಕೋರಿದ ಫತಾಹ್​​​        ಬಿಟ್ಟ ಅಸ್ತ್ರವೇ ಜಮೀರ್​ಗೆ ತಿರುಗುಬಾಣ - ದೋಸ್ತಿ ವಿರುದ್ಧ ಹೋರಟಕ್ಕೆ ಬಿಜೆಪಿ ರಣತಂತ್ರ - ಸಚಿವರ ವಿರುದ್ಧ ಅನ್ವರ್ ಮಾಣಿಪ್ಪಾಡಿ ವರದಿ ಅಸ್ತ್ರ        ರಾತ್ರಿ ಬೀದಿ ನಾಯಿಗಳಿಗೆ ಊಟ ಹಾಕಿದ್ದೇ ತಪ್ಪಾಯ್ತು - ವಿದ್ಯಾರ್ಥಿನಿಗೆ ಸ್ಥಳೀಯರ ಕಿರಿಕ್​ - ಮಹಲಕ್ಷ್ಮಿ ಲೇಔಟ್​​​ನಲ್ಲಿ ಬೀದಿ ರಂಪಾಟ       
Breaking News

`ಸುವರ್ಣಗ್ರಾಮ’ಕ್ಕಿಲ್ಲ ಸಿಸಿ ಭಾಗ್ಯ

Friday, 13.07.2018, 5:30 AM       No Comments

ವಿಜಯವಾಣಿ ವಿಶೇಷ ದೋರನಹಳ್ಳಿ
ಸ್ವಲ್ಪ ಮಳೆ ಬಂದರೆ ಸಾಕು ರಸ್ತೆ ಸಂಪೂರ್ಣ ಕೆಸರುಮಯ, ಗ್ರಾಮದ ಜನರ ಪ್ರತಿ ಕಾರ್ಯಕ್ಕೂ ಅಲ್ಲಿಂದಲೇ ಸಾಗಬೇಕು. ಶಾಲೆಗೆ ಹೋಗುವ ವಿದ್ಯಾರ್ಥಿಗಳು ಮೊಳಕಾಳಿನವರೆಗೂ ಬಟ್ಟೆ ಎತ್ತಿಕೊಂಡೇ ಸಾಗಬೇಕು. ಇದು ದೋರನಹಳ್ಳಿ ಗ್ರಾಮದ ಮುಖ್ಯರಸ್ತೆಯ ದೃಶ್ಯ.

2013ರಲ್ಲಿ ಗ್ರಾಮವನ್ನು ಸುವರ್ಣಗ್ರಾಮ ಯೋಜನೆಯಡಿ ಆಯ್ಕೆ ಮಾಡಲಾಗಿತ್ತು. ಆಗ ಯೋಜನೆ ಉದ್ಘಾಟಿಸಿದ ಶಾಸಕರು ಈಗ ಮಾಜಿ ಆಗಿದ್ದಾರೆ. ಆದರೆ ಇಲ್ಲಿನ ಕಾಮಗಾರಿಗಳು ಮಾತ್ರ ಮುಗಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಗ್ರಾಮ ಪಂಚಾಯಿತಿ ಇದೆಯೋ ಇಲ್ಲವೋ ಎಂಬ ಅನುಮಾನ ದಿನೇ ದಿನೆ ಸಾರ್ವಜನಿಕರಲ್ಲಿ ಹೆಚ್ಚಾಗುತ್ತಿದೆ. ಗ್ರಾಪಂ ಜನಪ್ರತಿನಿಧಿಗಳಿಗೂ ಅಭಿವೃದ್ಧಿ ಅಧಿಕಾರಿಗಳಿಗೆ ಈ ರಸ್ತೆ ಕಾಣುವುದಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಗ್ರಾಮದ ಹಲವು ಮುಖ್ಯ ರಸ್ತೆಗಳಿಗೆ ಸಿಸಿ ರಸ್ತೆ ನಿರ್ಮಿಸಲಾಗುತ್ತಿದ್ದು, ಅವುಗಳ ಕಾಮಗಾರಿ 6 ವರ್ಷಗಳ ಹಿಂದೆ ಆರಂಭಿಸಲಾಗಿದೆ. ಆದರೆ ಇಲ್ಲಿವರೆಗೂ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತಿದ್ದಾರೆ.

ರಸ್ತೆ ಪಕ್ಕದ ಕಟ್ಟಡಗಳ ತೆರವು ಕಾರ್ಯ ಮತ್ತು ಚರಂಡಿಗಳ ನಿಮರ್ಾಣ ಕಾರ್ಯಕ್ಕೆ ಗ್ರಾಮದ ಕೆಲವರು ನಿರಂತರವಾಗಿ ತಕರಾರು ಮಾಡುತ್ತಿದ್ದಾರೆ. ಈ ಕುರಿತು ಸೂಕ್ತವಾದ ಪೊಲೀಸ್ ಭದ್ರತೆ ಒದಗಿಸುವಲ್ಲಿ ಗ್ರಾಪಂ ವಿಫಲವಾಗಿದೆ. ಇದರಿಂದಾಗಿ ಗ್ರಾಮದ ಮಲ್ಲಯ್ಯನ ದೇವಸ್ಥಾನದಿಂದ ರಾಜ್ಯ ಹೆದ್ದಾರಿವರೆಗೂ ಮತ್ತು ರಾಜ್ಯ ಹೆದ್ದಾರಿಯಿಂದ ಆದೀಲ್ಶಾಹಿ ಮಜೀದ್ವರೆಗಿನ ಸುವರ್ಣಗ್ರಾಮ ಸಿಸಿ ರಸ್ತೆ ಕಾರ್ಯಕ್ಕೆ ಎಳ್ಳು ನೀರು ಬಿಟ್ಟಂತಾಗಿದೆ.
ಈಗಲಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ನಾವು ಕಾಮಗಾರಿ ಮುಗಿಸಿಕೊಡಲು ಸಿದ್ದರಿದ್ದೇವೆ. ಆದರೆ ದೋರನಹಳ್ಳಿ ಗ್ರಾಪಂ ಸಹಕಾರದ ಕೊರತೆ ಕಾಡುತ್ತಿದೆ. ಅಲ್ಲದೆ ಗ್ರಾಮದ ಜನರು ನಮ್ಮ ಕಾಮಗಾರಿ ಆರಂಭದ ವೇಳೆ ವಿರೋಧಿಸಿದ್ದಾರೆ. ಹೀಗಾಗಿ ಕಾಮಗಾರಿ ಸ್ಥಗಿತವಾಗಿದೆ. ನಮಗೆ ಸೂಕ್ತ ಭದ್ರತೆ ಒದಗಿಸಿ ಕೊಟ್ಟರೆ ಎಂಟು ದಿನದಲ್ಲಿ ಕಾಮಗಾರಿ ಮುಗಿಸಲಾಗುವುದು.
| ಹೊನ್ನಪ್ಪ ಎ. ಪೂಜಾರಿ, ಜೆಇ ಭೂ ಸೇನಾ ನಿಗಮ

Leave a Reply

Your email address will not be published. Required fields are marked *

Back To Top