Monday, 22nd October 2018  

Vijayavani

₹9 ಲಕ್ಷ ಅಡ್ವಾನ್ಸ್ ಪಡೆದಿದ್ದು ನಿಜ - ಸರ್ಜಾ ವಿರುದ್ಧ ಮೀ ಟೂ ಬಳಸಿಕೊಂಡಿಲ್ಲ - ದಿಗ್ವಿಜಯ ನ್ಯೂಸ್​ಗೆ ಚೇತನ್ ಹೇಳಿಕೆ        ಸರ್ಜಾ ವಿರುದ್ಧ ಮೀಟೂ ಆರೋಪ - ಕಿತ್ತಾಟ ಪರಿಹರಿಸಲು ಸಂಧಾನಕಾರರಾಗ್ತಾರಾ ಅಂಬಿ..?        ಅರ್ಜುನ್ ಸರ್ಜಾ ಮೀ ಟೂ ಕೇಸ್​​ಗೆ ಬಿಗ್ ಟ್ವಿಸ್ಟ್ - ಪ್ರೇಮಬರಹದಲ್ಲಿ ಚಾನ್ಸ್​ ಸಿಗದ್ದಕ್ಕೆ ರೀವೆಂಜ್ ಆರೋಪ        ಶ್ರುತಿ ವಿರುದ್ಧ ಚೇಂಬರ್​ಗೆ ದೂರು - ನಟಿ ಆರೋಪಕ್ಕೆ ಮತ್ತೆ ಗುಡುಗಿದ ನಟ ರಾಜೇಶ್        ಬೈಎಲೆಕ್ಷನ್​​ ಆಂತರಿಕ ಸಮೀಕ್ಷೆಯಲ್ಲಿ ಸೋಲಿನ ಸುಳಿವು - ಎಲ್ಲ ಕಾರ್ಯಕ್ರಮ ರದ್ದುಗೊಳಿಸಿ ಸಿಎಂ ತಂತ್ರಗಾರಿಕೆ        ಕರ್ತವ್ಯ ಬಹಿಷ್ಕರಿಸಿ ಸಿಬ್ಬಂದಿ ಪ್ರತಿಭಟನೆ - ಬೆಂಗಳೂರಿನ ಪೆನೇಷಿಯಾ ಆಸ್ಪತ್ರೆ ವಿರುದ್ಧ ಸಿಬ್ಬಂದಿ ಆಕ್ರೋಶ       
Breaking News

ವಿಮೆ ಕಂತು ತುಂಬಲು 14 ಕೊನೆ ದಿನ

Friday, 10.08.2018, 5:34 AM       No Comments

ದೋರನಹಳ್ಳಿ: ರೈತರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೆ ತಂದಿದ್ದು 2018ನೇ ಸಾಲಿನ ವಿಮೆ ಕಂತು ತುಂಬಲು ಆಗಸ್ಟ್ 14 ಅಂತಿಮ ದಿನವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ವಿವಿಧ ಬೆಳೆಗಳ ವಿಮಾ ಕಂತು ಕಟ್ಟುವ ಅವಧಿ ಮುಗಿದಿದ್ದು ತೊಗರಿ ಮತ್ತು ಭತ್ತಕ್ಕೆ ಆಗಸ್ಟ್ 14ರವರೆಗೂ ವಿಮೆ ಮಾಡಿಸಲು ಅವಕಾಶವಿದೆ. ವಿಮೆ ಕಂತು ತುಂಬಲು ಎಕರೆಗೆ ಅನುಸಾರವಾಗಿ ಹಣ ನಿಗದಿಯಿದ್ದು ತೊಗರಿ ಮಳೆಯಾಶ್ರಿತ ಹಾಗೂ ನೀರಾವರಿ ಎಕರೆಗೆ 336 ರೂ. ಇದೆ. ಬೆಳೆ ನಷ್ಟವಾದರೆ ಬರುವ ವಿಮಾ ಹಣವು ನಷ್ಟದ ಪ್ರತಿಶತ ಆಧಾರದ ಮೇಲೆ ದೊರಕುತ್ತದೆ. ಒಂದು ವೇಳೆ ಸಂಪೂರ್ಣ ಪ್ರಮಾಣದಲ್ಲಿ ತೊಗರಿ ಬೆಳೆ ನಷ್ಟವಾದರೆ ಎಕರೆಗೆ 42000 ರೂ. ಪರಿಹಾರ ದೊರಕುತ್ತದೆ.

ಭತ್ತದ ಬೆಳೆಗೆ ಮಳೆಯಾಶ್ರಿತವಾದರೆ ಎಕರೆಗೆ 432 ರೂ.ವಿಮೆ ಕಂತು ತುಂಬಿದರೆ ಸಂಪೂರ್ಣ ನಷ್ಟವಾದರೆ ಎಕರೆಗೆ 54 ಸಾವಿರ ಒಂದು ವೇಳೆ ಅಲ್ಪ, ಸ್ವಲ್ಪ ನಷ್ಟವಾದರೆ ಪ್ರತಿಶತ ಆಧಾರದ ಮೇಲೆ ವಿಮೆ ಪರಿಹಾರ ದೊರಕುತ್ತದೆ. ಇನ್ನೂ ನೀರಾವರಿ ಭತ್ತದ ಬೆಳೆಗೆ ಎಕರೆಗೆ 688ರೂ. ವಿಮೆ ಹಣವನ್ನು ತುಂಬಿದರೆ ಬೆಳೆ ಸಂಪೂರ್ಣ ನಷ್ಟವಾದರೆ ಎಕರೆಗೆ 86 ಸಾವಿರ ವಿಮಾ ಹಣ ದೊರಕುತ್ತದೆ. ಅಲ್ಪ ನಷ್ಟವಾದರೆ ಪ್ರತಿಶತ ಆಧಾರದ ಮೇಲೆ ವಿಮಾ ಪರಿಹಾರ ರೈತರ ಖಾತೆಗೆ ಜಮೆ ಆಗಲಿದೆ.

ವಿಮೆಯನ್ನು ತುಂಬಲು ರೈತರು ತೊಗರಿ, ಭತ್ತವನ್ನು ಬಿತ್ತನೆ ಮಾಡಿದ ಜಮೀನಿನ ಪಹಣಿ, ಪಟ್ಟೆದಾರನ ಬ್ಯಾಂಕ್ ಖಾತೆ, ಪಟ್ಟೆದಾರನ ಆಧಾರ್ ಕಾರ್ಡ್​ನೊಂದಿಗೆ ತಾವು ಖಾತೆಹೊಂದಿದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ, ಕಂದಾಯ ಇಲಾಖೆ ನೀಡಿರುವ ವಿಮಾ ಫಾರ್ಮ ಭರ್ತಿ ಮಾಡಿ ಹಣ ತುಂಬಿ ನಂತರ ಸ್ವೀಕೃತಿ ಚೀಟಿ ಪಡೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಕಂದಾಯ ಇಲಾಖೆ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *

Back To Top