Wednesday, 19th September 2018  

Vijayavani

ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ ಡೆಪಾಸಿಟ್ ಆಗ್ತಿದೆ ಹವಾಲಾ ಹಣ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಡಿಕೆಶಿ ಮನೆಯಲ್ಲಿ ಸಿಕ್ಕಿದೆ 20 ಕೋಟಿ ಹಣ - ಡಿಕೆಶಿ ಆಪ್ತ ಆಂಜನೇಯ ತಪ್ಪೊಪ್ಪಿಗೆ ಹೇಳಿಕೆ ಬಿಡುಗಡೆ - ಸಂಬಿತ್ ಪಾತ್ರ ಆರೋಪ        ರಾಜ್ಯ ಬಿಜೆಪಿ ಶಾಸಕರ ಸಭೆ ಆರಂಭ - ಗಾಯತ್ರಿ ವಿಹಾರದಲ್ಲಿ ಮೀಟಿಂಗ್ - ತೀವ್ರ ಕುತೂಹಲ ಕೆರಳಿಸಿದ ಬಿಎಸ್​ವೈ ಮೀಟಿಂಗ್        ನನಗೂ 2 ಮುಖಗಳಿವೆ, ಆದ್ರೂ ಶಾಂತವಾಗಿರ್ತೀನಿ - ಒಂದು ವಾರ ನೋಡಿ ಚಾಟಿ ಬೀಸ್ತೀನಿ - ಸಿಎಂ ಗುಡುಗು        ಶಕ್ತಿಕೇಂದ್ರವಾದ ರಮೇಶ್ ನಿವಾಸ - ಮಿನಿಸ್ಟರ್ ಮನೆಗೆ ಶಾಸಕರ ದಂಡು - ಎಂಟಿಬಿ, ರಾಮಪ್ಪ, ಅಬ್ಬಯ್ಯ ಸೇರಿ ಹಲವರ  ಮಾತುಕತೆ        ಜಾರಕಿಹೊಳಿ ಆಯ್ತು, ಈಗ ಬಳ್ಳಾರಿ ಹುಳಿ - ನಾಗೇಂದ್ರ ಪರ ಬ್ಯಾಟ್ ಬೀಸಿದ್ದ ರಮೇಶ್ ವಿರುದ್ಧ ಗರಂ       
Breaking News

16 ನ್ಯಾಯಬೆಲೆ ಅಂಗಡಿಗೆ ಗೇಟ್​ ಪಾಸ್​

Friday, 13.07.2018, 3:25 AM       No Comments

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಸಕರ್ಾರ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಅತಿ ಕಮ್ಮಿ ದರದಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಧಾನ್ಯ ವಿತರಿಸಲಾಗುತ್ತಿದೆ. ಆದರೆ ಸಕರ್ಾರದ ನಿಯಮ ಪಾಲಿಸದ ಕೆಲ ನ್ಯಾಯಬೆಲೆ ಅಂಗಡಿಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಮಾನತಿನಲ್ಲಿರಿಸುವ ಮೂಲಕ ಗೇಟ್ಪಾಸ್ ನೀಡಿದೆ.
ಹಸಿವುಮುಕ್ತ ಕನರ್ಾಟಕ ನಿಮರ್ಾಣಕ್ಕಾಗಿ ಈ ಹಿಂದೆ ಕಾಂಗ್ರೆಸ್ ಸಕರ್ಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾಡರ್್ದಾರರಿಗೆ 1 ಕೆಜಿಯಂತೆ ಪ್ರತಿ ಕುಟುಂಬಕ್ಕೆ 30 ಕೆಜಿ ಅಕ್ಕಿ ವಿತರಿಸುತ್ತಿದೆ. ಗುಣಮಟ್ಟದ ತೊಗರಿ ಬೇಳೆ ಕೂಡ ನೀಡುತ್ತಿದ್ದು, ಈ ಧಾನ್ಯಗಳನ್ನು ಸಕಾಲಕ್ಕೆ ವಿತರಿಸುವಲ್ಲಿ ಕೆಲ ನ್ಯಾಯಬೆಲೆ ಅಂಗಡಿಗಳು ವಿಳಂಬ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಅಮಾನತು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ 399 ನ್ಯಾಯಬೆಲೆ ಅಂಗಡಿಗಳಿದ್ದು, ಪ್ರತಿ ತಿಂಗಳು ಆಹಾರ ಇಲಾಖೆ ನಿಗದಿಪಡಿಸಿದ ದಿನಾಂಕದೊಳಗೆ ಡಿಡಿ ಮೂಲಕ ಇಲಾಖೆಗೆ ಹಣ ಸಂದಾಯ ಮಾಡಿ ಪಡಿತರ ಧಾನ್ಯ ಕೊಂಡೊಯ್ದು ಕೆಡದಂತೆ ದಾಸ್ತಾನು ಮಾಡಬೇಕು. ಆದರೆ ಜಿಲ್ಲೆಯ 16 ನ್ಯಾಯಬೆಲೆ ಅಂಗಡಿಗಳು ಇಲಾಖೆ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಅಮಾನತ್ತಿನಲ್ಲಿರಿಸಿ ಇಲಾಖೆ ಉಪ ನಿದರ್ೆಶಕ ನಾಗಭೂಷಣ ಆದೇಶ ಹೊರಡಿಸಿದ್ದಾರೆ.
ಈ ಪೈಕಿ ಯಾದಗಿರಿ ತಾಲೂಕಿನಲ್ಲಿ 7, ಶಹಾಪುರ 3 ಹಾಗೂ ಸುರಪುರ ತಾಲೂಕಿನಲ್ಲಿ 6 ನ್ಯಾಯಬೆಲೆ ಅಂಗಡಿಗಳಿವೆ. ಕೆಲ ಅಂಗಡಿಗಳಲ್ಲಿ ನಾಮಫಲಕ ಸಹ ಅಳವಡಿಸಿಲ್ಲ. ಇನ್ನು ಹಲವು ಅಂಗಡಿಗಳಲ್ಲಿ ಮೂಲಸೌಕರ್ಯ ಕೊರತೆ ಇದೆ ಎಂಬ ಆರೋಪ ಕೇಳಿ ಬಂದಿದ್ದು, ಸದ್ಯ ತೆಗೆದುಕೊಂಡಿರುವ ಕ್ರಮ ಮೊದಲ ಹಂತದ್ದಾಗಿದೆ. ಪಿಕ್ಚರ್ ಇನ್ನೂ ಬಾಕಿ ಇದ್ದು, ಇಲಾಖೆ ಅಧಿಕಾರಿಗಳು ಜಿಲ್ಲಾದ್ಯಂತ ಸಂಚರಿಸಿ ಎಲ್ಲ ನ್ಯಾಯಬೆಲೆ ಅಂಗಡಿಗಳನ್ನು ಪರಿಶೀಲಿಸುವ ನಿಧರ್ಾರಕ್ಕೆ ಬಂದಿದ್ದಾರೆ.
ಹಳ್ಳಿ ಜನರು ಎರಡೊಪ್ಪತ್ತು ಹೊಟ್ಟೆ ತುಂಬ ಊಟ ಮಾಡಲಿ ಎಂದು ಸಕರ್ಾರ ಆಹಾರ ಇಲಾಖೆ ಮೂಲಕ ನಾನಾ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಕೆಲ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳು ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಇರುವುದರಿಂದ ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ. ದುರಂತದ ಸಂಗತಿ ಎಂದರೆ, ಕೆಲ ಹಳ್ಳಿ ಹಾಗೂ ತಾಂಡಾಗಳಲ್ಲಿ ಪಡಿತರ ಧಾನ್ಯಗಳನ್ನು ನಿವಾಸಿಗಳಿಗೆ ವಿತರಿಸುತ್ತಿಲ್ಲ ಎನ್ನಲಾಗುತ್ತಿದೆ.
ಒಟ್ಟಾರೆ, ಅಸಡ್ಡೆ ತೋರುವ ನ್ಯಾಯಬೆಲೆ ಅಂಗಡಿಗಳಿಗೆ ಮೂಗುದಾರ ಹಾಕಲು ಇಲಾಖೆ ಮೊದಲ ಹೆಜ್ಜೆ ಇರಿಸಿದ್ದಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅದರಂತೆ ಕಳಪೆ ಸಾಧನೆ ತೋರುವ ಮೂಲಕ ಗ್ರಾಮೀಣರ ಜೀವ ತಿನ್ನುತ್ತಿರುವ ನ್ಯಾಯಬೆಲೆ ಅಂಗಡಿಗಳ ಮಾಲೀಕರ ವಿರುದ್ಧವೂ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಿ ಎಂಬ ಅಭಿಪ್ರಾಯ ಜನಸಾಮಾನ್ಯರದ್ದಾಗಿದೆ.

ಖಡಕ್ ನಿರ್ಧಾರಕ್ಕೆ ಭೇಷ್ ಎಂದ ಜನತೆ: ಗ್ರಾಮೀಣ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿಗಳ ಪಾತ್ರ ಪ್ರಮುಖವಾಗಿದೆ. ಈ ಅಂಗಡಿಗಳು ಬಡ ಜನರ ಆಹಾರಕ್ಕಾಗಿ ಭರವಸೆಯ ಕೇಂದ್ರ ಬಿಂದುಗಳಾಗಿವೆ. ಸಕರ್ಾರ ನೀಡುವ ಪಡಿತರಕ್ಕಾಗಿಯೇ ಕಾಯುವ ಅದೆಷ್ಟೋ ಬಡ ಕುಟುಂಬಗಳನ್ನು ಸಮಾಜದಲ್ಲಿ ಕಾಣಬಹುದಾಗಿದೆ. ಬಡವರ ನಿರೀಕ್ಷೆಗೆ ನ್ಯಾಯಬೆಲೆ ಅಂಗಡಿಗಳು ತಣ್ಣೀರೆರಚಿದರೆ ಯಾರ ಬಳಿ ನ್ಯಾಯ ಕೇಳಬೇಕು? ಈ ಹಿನ್ನೆಲೆಯಲ್ಲಿ ಅಸಡ್ಡೆ ತೋರಿದ ನ್ಯಾಯಬೆಲೆ ಅಂಗಡಿಗಳನ್ನು ಅಮಾನತಿನಲ್ಲಿರಿಸಿದ ಇಲಾಖೆ ಕ್ರಮಕ್ಕೆ ಜಿಲ್ಲೆಯ ಜನತೆ ಭೇಷ್ ಎಂದಿದ್ದಾರೆ. ಇದರಂತೆ ಬೇರೆ ಇಲಾಖೆಗಳಲ್ಲೂ ಬದಲಾವಣೆ ಬಂದರೆ ಸಂವಿಧಾನದ ಮೂಲ ಆಶಯ ಈಡೇರುವುದರಲ್ಲಿ ಸಂಶಯವಿಲ್ಲ.

8 ಸಾವಿರ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಉಳಿತಾಯ: ಜಿಲ್ಲೆಯ 399 ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಇಲಾಖೆಯಿಂದ ಅಳವಡಿಸಲಾಗಿರುವ ಬಯೋಮೆಟ್ರಿಕ್ ವ್ಯವಸ್ಥೆಯಿಂದ ಈ ತಿಂಗಳು 8 ಸಾವಿರ ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿ ಉಳಿತಾಯಗೊಂಡಿದೆ. ಬಯೋಮೆಟ್ರಿಕ್ ಸಿಸ್ಟಮ್ನಿಂದ ಬಿಪಿಎಲ್ ಕಾಡರ್್ದಾರರು ಪಡಿತರ ಧಾನ್ಯ ಪಡೆಯಬೇಕಾಗಿದೆ. ಹೀಗಾಗಿ ಇಷ್ಟು ದಿನ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಸಕರ್ಾರದ ಧಾನ್ಯಗಳಿಗೆ ಬ್ರೇಕ್ ಬಿದ್ದಂತಾಗಿದೆ.

ಇಲಾಖೆ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶ ನಮ್ಮದು. ಸರ್ಕಾರಿ ನಿಯಮಗಳನ್ನು ಪಾಲಿಸದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳ ಪರಿಶೀಲನೆ ನಡೆಸಲಾಗುವುದು.
| ನಾಗಭೂಷಣ
ಆಹಾರ ಇಲಾಖೆ ಉಪ ನಿರ್ದೇಶಕ

ಅಶಿಸ್ತು ತೋರಿದ ನ್ಯಾಯಬೆಲೆ ಅಂಗಡಿಗಳನ್ನು ಅಮಾನತಿನಲ್ಲಿ ಇರಿಸಿರುವುದು ಸ್ವಾಗತಾರ್ಹ. ಗ್ರಾಮೀಣ ಪ್ರದೇಶದ ನ್ಯಾಯಬೆಲೆ ಅಂಗಡಿಗಳಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗುತ್ತಿದೆ. ಅಂಥ ಅಂಗಡಿಗಳ ವಿರುದ್ಧವೂ ಇಲಾಖೆ ಕ್ರಮ ಕೈಗೊಳ್ಳಲಿ.
| ರಮೇಶ ಪವಾರ್ ಬದ್ದೇಪಲ್ಲಿ
ಬಿಜೆಪಿ ಯುವ ಮುಖಂಡ

Leave a Reply

Your email address will not be published. Required fields are marked *

Back To Top