Wednesday, 19th September 2018  

Vijayavani

ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ ಡೆಪಾಸಿಟ್ ಆಗ್ತಿದೆ ಹವಾಲಾ ಹಣ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಡಿಕೆಶಿ ಮನೆಯಲ್ಲಿ ಸಿಕ್ಕಿದೆ 20 ಕೋಟಿ ಹಣ - ಡಿಕೆಶಿ ಆಪ್ತ ಆಂಜನೇಯ ತಪ್ಪೊಪ್ಪಿಗೆ ಹೇಳಿಕೆ ಬಿಡುಗಡೆ - ಸಂಬಿತ್ ಪಾತ್ರ ಆರೋಪ        ರಾಜ್ಯ ಬಿಜೆಪಿ ಶಾಸಕರ ಸಭೆ ಆರಂಭ - ಗಾಯತ್ರಿ ವಿಹಾರದಲ್ಲಿ ಮೀಟಿಂಗ್ - ತೀವ್ರ ಕುತೂಹಲ ಕೆರಳಿಸಿದ ಬಿಎಸ್​ವೈ ಮೀಟಿಂಗ್        ನನಗೂ 2 ಮುಖಗಳಿವೆ, ಆದ್ರೂ ಶಾಂತವಾಗಿರ್ತೀನಿ - ಒಂದು ವಾರ ನೋಡಿ ಚಾಟಿ ಬೀಸ್ತೀನಿ - ಸಿಎಂ ಗುಡುಗು        ಶಕ್ತಿಕೇಂದ್ರವಾದ ರಮೇಶ್ ನಿವಾಸ - ಮಿನಿಸ್ಟರ್ ಮನೆಗೆ ಶಾಸಕರ ದಂಡು - ಎಂಟಿಬಿ, ರಾಮಪ್ಪ, ಅಬ್ಬಯ್ಯ ಸೇರಿ ಹಲವರ  ಮಾತುಕತೆ        ಜಾರಕಿಹೊಳಿ ಆಯ್ತು, ಈಗ ಬಳ್ಳಾರಿ ಹುಳಿ - ನಾಗೇಂದ್ರ ಪರ ಬ್ಯಾಟ್ ಬೀಸಿದ್ದ ರಮೇಶ್ ವಿರುದ್ಧ ಗರಂ       
Breaking News

ಕೂಡಲೇ ಉಚಿತ ಬಸ್​ ಪಾಸ್ ವಿತರಿಸಿ

Tuesday, 10.07.2018, 4:52 AM       No Comments

ಯಾದಗಿರಿ: ಗ್ರಾಮೀಣ ಪ್ರದೇಶದಲ್ಲಿನ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡದ ರಾಜ್ಯ ಸಮ್ಮಿಶ್ರ ಸರ್ಕಾರದ ಕ್ರಮ ಖಂಡಿಸಿ ಎಐಡಿಎಸ್ಒ ಸಂಘಟನೆಯಿಂದ ಸೋಮವಾರ ನಗರದ ಸುಭಾಷ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ಸಂಘಟನೆ ಕಾರ್ಯದರ್ಶಿ ಸೈದಪ್ಪ ಎಚ್.ಪಿ.ಮಾತನಾಡಿ, ಈ ಬಾರಿಯ ಬಜೆಟ್ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವ ಯೋಜನೆ ಜಾರಿಯಾಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಘಾತವಾಗಿದೆ. ಅಲ್ಲದೆ ರಾಜ್ಯ ಸರ್ಕಾರದ ವಚನಭ್ರಷ್ಟತೆ ಬಗ್ಗೆ ತೀವ್ರಆಕ್ರೋಶ ಮೂಡಿದೆ. 20 ದಿನಗಳ ಹಿಂದೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಉಚಿತ ಬಸ್ಪಾಸ್ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಮನ್ವಯ ಸಮಿತಿ ಸಭೆಯ ನಂತರ ಘೋಷಿಸಿದ್ದರು. ಹಾಗೆಯೇ ಸಾರಿಗೆ ಸಚಿವರು ಸಹ ಉಚಿತ ಬಸ್ಪಾಸ್ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದರು ಆದರೆ ಬಜೆಟ್ನಲ್ಲಿ ಈ ಬಗ್ಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಚಿತ ಬಸ್ ಪಾಸ್ ನೀಡಲು ಹೆಚ್ಚುವರಿ 600 ಕೋಟಿ ರೂ.ಗಳ ಅಗತ್ಯವಿದೆ ಎಂದು ನೆಪವೊಡ್ಡಿ ರಾಜ್ಯ ಸರ್ಕಾರ ಹಾಗೂ ಕೆಎಸ್ಆರ್ಟಿಸಿ ಈ ಯೋಜನೆಗೆ ಕೊಕ್ಕೆ ಹಾಕಿವೆ. ನಿಜಾಂಶವೆಂದರೆ ತಲಾ ವಿದ್ಯಾರ್ಥಿಯ ಬಸ್ಪಾಸ್ಗೆ 1 ಸಾವಿರ ರೂ. ಎಂದು ಲೆಕ್ಕ ಹಿಡಿದರೂ, 19 ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರವು ಪ್ರತಿ ವರ್ಷ ಸಾರಿಗೆ ಇಲಾಖೆಗೆ ನೀಡುವ 860 ರೂ. ಕೋಟಿ ಹಣದಲ್ಲೇ ಎಲ್ಲರಿಗೂ ಉಚಿತ ಬಸ್ಪಾಸ್ ನೀಡಬಹುದು. ಇದಲ್ಲದೆ ಸಮಾಜಕಲ್ಯಾಣ ಇಲಾಖೆಯು ಸಹ ಲಕ್ಷಾಂತರ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಬಸ್ಪಾಸ್ ಶುಲ್ಕವನ್ನು ಭರಿಸುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎನ್.ರಾಮಲಿಂಗಪ್ಪ, ಸುಭಾಷ್ಚಂದ್ರ ಬಾವನೊರ್, ಸಿಂಧು.ಬಿ, ಮಲ್ಲಮ್ಮ, ಮಹೇಶ್ವರಿ, ಯಶೋಧ, ನಿಂಗಮ್ಮ, ಚೈತ್ರ, ಕಾವೇರಿ, ನಾಗರಾಜ, ಮಲ್ಲಿಕಾರ್ಜುನ, ಶಿವಶರಣ ಇದ್ದರು.
ಬಡ ಮಕ್ಕಳ ಹಿತ ಕಾಪಾಡದ ಸರ್ಕಾರ: ರಾಜ್ಯ ಸಕರ್ಾರ ತನ್ನ ಮಾತು ಉಳಿಸಿಕೊಳ್ಳದೆ ವಿದ್ಯಾಥರ್ಿಗಳಿಗೆ ವಿಶ್ವಾಸದ್ರೋಹ ಎಸಗಿದೆ. ಒಂದು ತಿಂಗಳಿಂದ ರಾಜ್ಯ ಸಕರ್ಾರ ಹಾಗೂ ಕೆಎಸ್ಆರ್ಟಿಸಿ ನಾಟಕವಾಡುತ್ತಾ, ಲಕ್ಷಾಂತರ ಬಡ ವಿದ್ಯಾಥರ್ಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿವೆ. ಸಕರ್ಾರ ಹೇಳುವಂತೆ ಹಣದ ಕೊರತೆ ಸಹ ನಿಜಾಂಶವಲ್ಲ. ಮಾತಿಗೆ ಮುಂಚೆ ರೈತರ ಬಗ್ಗೆ ಮಾತನಾಡುವ ರಾಜ್ಯ ಸಕರ್ಾರ, ರೈತರ ಮತ್ತು ಬಡವರ ಮಕ್ಕಳ ಹಿತ ಈ ಸಕರ್ಾರಕ್ಕಿಲ್ಲ.

Leave a Reply

Your email address will not be published. Required fields are marked *

Back To Top