Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಪೀಠೋಪಕರಣ ತಯಾರಿಸುವ ಶೆಡ್ ಧ್ವಂಸ

Friday, 13.07.2018, 5:00 AM       No Comments

ಶ್ರೀರಂಗಪಟ್ಟಣ: ಸಮೀಪದ ಗಂಜಾಂನಲ್ಲಿ ಅಜೀಜ್‌ಖಾನ್ ಎಂಬುವರಿಗೆ ಸೇರಿದ ಪೀಠೋಪಕರಣ ತಯಾರಿಸುವ ತಗಡಿನ ಶೆಡ್ ಅನ್ನು ಗುರುವಾರ ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ.

ಬೆಂಗಳೂರಿನ ಚಾಂದ್‌ಪಾಷ ಸೇರಿದಂತೆ ಇತರರು ಈ ಕೃತ್ಯ ಎಸಗಿದ್ದಾರೆ. ಮಾರಕಾಸ್ತ್ರ ಸಹಿತ ದಾಳಿ ನಡೆಸಿ ಶೆಡ್ ಅನ್ನು ಭಾಗಶಃ ಜಖಂಗೊಳಿಸಿದ್ದು, ಶೆಡ್‌ನೊಳಗಿದ್ದ 2 ಲಕ್ಷ ರೂ.ಮೌಲ್ಯದ ಯಂತ್ರೋಪಕರಣಗಳನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ ಎಂದು ಅಜೀಜ್‌ಖಾನ್ ಟೌನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಪ್ರಭಾವತಿ ಎಂಬುವರಿಗೆ ಸೇರಿದ ಜಾಗವನ್ನು ಸ್ಥಳೀಯರಾದ ಸಿದ್ದೇಗೌಡ ಎಂಬುವರು ಕ್ರಯಕ್ಕೆ ಪಡೆದಿದ್ದು, ಸಿದ್ದೇಗೌಡರ ಜತೆಗೂಡಿ ವ್ಯಾಪಾರ ವಾಹಿವಾಟು ನಡೆಸುತ್ತಿದ್ದೆ. ಚಾಂದ್‌ಪಾಷ ಸದರಿ ಜಾಗವನ್ನು ತಮಗೆ ಸೇರಿರದ್ದು ಎಂದು ಈ ರೀತಿ ಮಾಡಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ತನ್ನ ಹೆಸರಿಗೆ ರಿಜಿಸ್ಟ್ರರ್ ಆಗಿರುವ ಜಮೀನನ್ನು ವ್ಯಕ್ತಿಯೊಬ್ಬ ಅತಿಕ್ರಮಿಸಲು ಯತ್ನಿಸುತ್ತಿದ್ದಾನೆ. ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಮೀನನ್ನು ಕ್ರಯಕ್ಕೆ ಪಡೆದಿರುವ ಸಿದ್ದೇಗೌಡ ಪೊಲೀಸರನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

Back To Top