Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಎರಡು ಮಹಾಯುದ್ದಗಳನ್ನು ಕಂಡ ವಿಶ್ವದ ಅಂತ್ಯಂತ ಹಿರಿಯ ವ್ಯಕ್ತಿ ಇನ್ನಿಲ್ಲ

Sunday, 13.08.2017, 4:07 PM       No Comments

ಇಸ್ರೇಲ್​: ಇವತ್ತಿನ ಆಧುನಿಕ ಯುಗದಲ್ಲಿ ಅತಿ ಹೆಚ್ಚು ಕಾಲ ಬದುಕುವುದು ಬಹಳ ಕಷ್ಟ. ಬದಲಾಗುತ್ತಿರುವ ವಾತಾವಾರಣ, ವಿಷಯುಕ್ತ ಆಹಾರ, ಒತ್ತಡದ ಬದುಕು, ಕಂಡುಕೇಳರಿಯದ ಹೊಸ ಹೊಸ ಕಾಯಿಲೆಗಳು ಮನುಷ್ಯನ ಆಯಸ್ಸನ್ನು ಕಿತ್ತು ತಿನ್ನುತ್ತಿವೆ. ಇವತ್ತಿನ ದಿನಗಳಲ್ಲಿ 60 ವರ್ಷ ಬದುಕುವುದೇ ಮಹಾ ಸಾಧನೆ ಅಂತಹದರಲ್ಲಿ 113 ವರ್ಷ ಬದುಕುವುದು ಸಾಮಾನ್ಯವಲ್ಲ ಅದು ಅಸಮಾನ್ಯವೇ.

ಹೌದು, ಈ ಅಸಮಾನ್ಯವನ್ನು ಸಾಧಿಸಿ ಪ್ರಪಂಚದ ಅತಿ ಹಿರಿಯ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದ ಇಸ್ರೆಲ್​ನ ‘ಕ್ರಿಸ್ಟಾಲ್​’ ಎಂಬುವವರು ಇತಿಹಾಸ ಪುಟ ಸೇರಿದ್ದಾರೆ. 113 ವರ್ಷ ವಯಸ್ಸಿನವರಾಗಿದ್ದ ಕ್ರಿಸ್ಟಾಲ್​ ಅವರು ಇನ್ನೊಂದು ತಿಂಗಳಲ್ಲಿ 114ನೇ ವಸಂತಕ್ಕೆ ಕಾಲಿಡುತ್ತಿದ್ದರು. ಅದಕ್ಕೂ ಮುನ್ನವೇ ಕ್ರಿಸ್ಟಾಲ್​ ಅವರಿಗೆ ಭೂಮಿಯ ಮೇಲಿನ ಋಣ ತೀರಿದೆ. ಕ್ರಿಸ್ಟಾಲ್​ ಅವರು ಕಳೆದ ಶುಕ್ರವಾರದಂದು ನಿಧನ ಹೊಂದಿದ್ದಾರೆ.

ಅಂದಹಾಗೆ ಕ್ರಿಸ್ಟಾಲ್​ ಅವರಿಗೆ ಕಳೆದ ವರ್ಷ ಗಿನ್ನೆಸ್​ ವರ್ಲ್ಡ್​​ ರೆಕಾರ್ಡ್​ ಪ್ರಶಸ್ತಿ ದೊರಕಿತ್ತು. ವಿಶ್ವದ ಅತಿ ಹಿರಿಯ ವ್ಯಕ್ತಿ ಎಂಬ ಪ್ರಮಾಣ ಪತ್ರ ನೀಡಿ ಗೌರವಿಸಲಾಗಿತ್ತು. ಇಸ್ರೆಲ್​ನ ಹೈಫಾ ಎಂಬಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು.

ಕ್ರಿಸ್ಟಾಲ್​ ಅವರು 1903 ರಂದು ಪೋಲ್ಯಾಂಡ್​ನ ಝರ್ನಾವ್​ ಪಟ್ಟಣದ ಜಿವಿಶ್​ ಎಂಬ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದರು. ಇವರು 12 ವರ್ಷದವರಿದ್ದಾಗ ಮೊದಲ ವಿಶ್ವ ಯುದ್ಧ ನಡೆಯುತ್ತಿತ್ತು. ಆ ವೇಳೆಗಾಗಲೇ ಕ್ರಿಸ್ಟಲ್​ ಆಲ್ಕೋಹಾಲ್​ ಸ್ಮಗ್ಲಿಂಗ್​ ಮಾಡುತ್ತಿದ್ದರೆಂದು ಮೊಮ್ಮಗ ಓರೆನ್​ ಕ್ರಿಸ್ಟಾಲ್​ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಕ್ರಿಸ್ಟಾಲ್​ ಹುಟ್ಟಿನಿಂದಲೂ ತುಂಬಾ ವೇಗವಾಗಿ ನಡೆಯುತ್ತಿದ್ದರಂತೆ. ನಾವು ಕೊನೆಯವರೆಗೂ ವೇಗವಾಗಿ ನಡೆಯುತ್ತಿರಲೇ ಬೇಕು, ಎಲ್ಲಿ ನಾವು ನಡೆಯದೇ ಸ್ಥಗಿತರಾಗುತ್ತೇವೋ ಅಂದು ನಾವು ಹೆಪ್ಪುಗಟ್ಟಿದ ಮಂಜುಗೆಡ್ಡೆಯಂತಾಗಿ ಬಿಡುತ್ತೇವೆ ಎಂದು ಹೇಳುತ್ತಿದ್ದರು ಎಂದು ಮೊಮ್ಮಗ ಓರೆನ್​ ಕ್ರಿಸ್ಟಾಲ್​ ಸ್ಮರಿಸಿದ್ದಾರೆ.

ಮೊದಲ ವಿಶ್ವ ಯುದ್ಧದ ನಂತರ ಕ್ರಿಸ್ಟಾಲ್​ ತನ್ನವರೆಲ್ಲರನ್ನು ಕಳೆದುಕೊಂಡು ಅನಾಥರಾಗಿ ಬಿಟ್ಟರು. ನಂತರ ತಮ್ಮ ಕುಟುಂಬಕ್ಕೆ ಸಂಬಂಧಪಟ್ಟ ವ್ಯವಹಾರವನ್ನು ನೋಡಿಕೊಳ್ಳತೊಡಗಿದರು. ಈ ಮಧ್ಯೆ ಮದುವೆಯಾಗಿದ್ದ ಅವರ ಮೊದಲ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಅಡಾಲ್ಫ ಹಿಟ್ಲರ್​ನ ನಾಜಿ ಬಣ ನಡೆಸಿದ ನರಮೇಧಕ್ಕೆ ಬಲಿಯಾದರು.

ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಜರ್ಮನ್​ ನಾಜೀ ಬಣದವರು ವ್ಯವಸ್ಥಿತ ಪಿತೂರಿ ಹೂಡಿ ಸುಮಾರು 6 ಮಿಲಿಯನ್​ ಜೀವ್ ವಂಶಸ್ಥರನ್ನುನಾಶ ಮಾಡಿದರು. ಈ ದೊಡ್ಡ ವಂಶದಲ್ಲಿ ಕ್ರಿಸ್ಟಾಲ್ ಬದುಕುಳಿದರು.​ ಆನಂತರ ಕ್ರಿಸ್ಟಾಲ್​ ಮರು ಮದುವೆಯಾದರು. ನಂತರ ತನ್ನ ಹೆಂಡತಿ ಮಕ್ಕಳೊಂದಿಗೆ ಇಸ್ರೇಲ್​ಗೆ ಸ್ಥಳಾಂತರವಾದರು. ಹೊಸ ಕುಟುಂಬದೊಂದಿಗೆ ನೂತನ ವ್ಯವಹಾರ ಸ್ಥಾಪಿಸಿ ಉತ್ತಮ ಜೀವನ ಕಟ್ಟಿಕೊಂಡರು.(ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top