Tuesday, 16th October 2018  

Vijayavani

ಉಪ ಮಹಾಸಂಗ್ರಾಮದ ಅಖಾಡ ಫೈನಲ್-ಕೊನೆದಿನ ಉಗ್ರಪ್ಪ, ಶಾಂತಾ, ಮಧು ನಾಮಪತ್ರ- ಎಲೆಕ್ಷನ್ ಗೆಲ್ಲಲು ತಂತ್ರ, ಪ್ರತಿತಂತ್ರ        ರಣಕಣದಲ್ಲಿ ಆರಂಭವಾಯ್ತಾ ಜಾತಿ ಮೇಲಾಟ?-ಡಿಕೆಗೆ ಪೋಸ್ ಲೀಡರ್ ಅಂತಾ ಜಾರಕಿಹೊಳಿ ಟಾಂಗ್- ಇನ್ನೂ ಆರದ ಕೈ ದಳ್ಳುರಿ.!        ನಾಮಿನೇಷನ್ ಆಯ್ತು ಈಗ ಯುದ್ಧ ಸ್ಟಾರ್ಟ್​- ಉಪಚುನಾವಣೆಯಲ್ಲಿ ಯಾರ ಪರ ಇದೆ ಜನಮತ- ದಿಗ್ವಿಜಯ ಗ್ರೌಂಡ್​ ರಿಪೋರ್ಟ್​        ನಾಳೆ ಶಬರಿಮಲೈ ದೇವಸ್ಥಾನ ಬಾಗಿಲು ಓಪನ್- ಪ್ರವೇಶಕ್ಕೆ ಕೆಲ ನಾರಿಯರ ಕಾತರ- ಮಹಿಳಾ ಎಂಟ್ರಿ ವಿರುದ್ಧ ಭುಗಿಲೆದ್ದ ಹೋರಾಟ        ಬಿಹಾರ ಲೋಕಗುರಿ ತಲುಪಲು ನಿತೀಶ್ ಹೊಸಬಾಣ- ಪ್ರಶಾಂತ್​ ಕಿಶೋರ್​​ ಗೆ ಪಕ್ಷದಲ್ಲಿ ಜವಾಬ್ದಾರಿ        ಮೈಸೂರು ದಸರಾದಲ್ಲಿ ಮತ್ತಷ್ಟು ವೈಭವ -2000 ಬೊಂಬೆಗಳ ಪ್ರದರ್ಶನ-ಆನೆಗಳಿಗೆ ಅಂತಿಮ ತಾಲೀಮು, ಕಳೆಗಟ್ಟಿದ ಪುಷ್ಪಲೋಕ       
Breaking News

ಜೂಜು ಸ್ವರ್ಗ ವಿಶ್ವದಲ್ಲೇ ಶ್ರೀಮಂತ ಮಕಾವ್

Saturday, 11.08.2018, 3:04 AM       No Comments

ಪ್ರಪಂಚದಲ್ಲೇ ಅತಿ ಶ್ರೀಮಂತ ಸ್ಥಳ ಯಾವುದು ಗೊತ್ತಾ? ಕತಾರ್ ಎಂದು ಹೇಳುವ ಮುನ್ನ ಸ್ವಲ್ಪ ತಾಳಿ. ಶೀಘ್ರವೇ ಆ ಪಟ್ಟವನ್ನು ಕತಾರ್​ನಿಂದ ಕಸಿಯಲು ಚೀನಾದ ವಿಶೇಷ ಆಡಳಿತ ಪ್ರಾಂತ್ಯ ‘ಮಕಾವ್ ’ ಸಜ್ಜಾಗಿದೆ. ವಿಶ್ವದ ‘ಜೂಜಾಟ ರಾಜಧಾನಿ’ ಎಂಬ ಖ್ಯಾತಿಯೂ ಮಕಾವ್​ಗೆ ಇದೆ. 2020ರ ವೇಳೆಗೆ ಮಕಾವ್​ನ ಪ್ರತಿ ಪ್ರಜೆಯ ಆದಾಯ ಅಂದಾಜು 1 ಕೋಟಿ ರೂ. ತಲುಪಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿಸಿದೆ. ಪ್ರವಾಸೋದ್ಯಮ ಹಾಗೂ ಜೂಜಾಟ (ಕ್ಯಾಸಿನೋ)ವನ್ನೇ ಆರ್ಥಿಕ ಅಭಿವೃದ್ಧಿಗಾಗಿ ನೆಚ್ಚಿಕೊಂಡಿರುವ ಈ ಪ್ರಾಂತ್ಯದ ಜನಸಂಖ್ಯೆ 6.5 ಲಕ್ಷ. 30.5 ಚದರ ಕಿ.ಮೀ . ಪ್ರದೇಶದಲ್ಲಿ ಇಷ್ಟು ಮಂದಿ ಜೀವಿಸುತ್ತಿದ್ದಾರೆ! ವಿಶ್ವದ ಅತಿ ಜನದಟ್ಟಣೆಯಿರುವ ಪ್ರಾಂತ್ಯಗಳಲ್ಲಿ ಕೂಡ ಮಕಾವ್ ನಂ.1.

ಕ್ಯಾಸಿನೋ ಕಾನೂನುಬದ್ಧ!

ಇಡೀ ಚೀನಾದಲ್ಲಿ ಕ್ಯಾಸಿನೋ (ಜೂಜಾಟ ಕೇಂದ್ರ)ಗಳನ್ನು ಅಧಿಕೃತ ವಾಗಿ ನಡೆಸಲು ಸರ್ಕಾರ ಅನುಮತಿ ನೀಡುವುದು ಮಕಾವ್​ನಲ್ಲಿ ಮಾತ್ರ. 2001ರ ಬಳಿಕ ಮಕಾವ್ ಪ್ರಾಂತ್ಯದ ಜಿಡಿಪಿ ಮೂರು ಪಟ್ಟು ಹೆಚ್ಚಾಗಿದೆ.

Leave a Reply

Your email address will not be published. Required fields are marked *

Back To Top