Monday, 25th June 2018  

Vijayavani

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ವಿಚಾರ- ಪರಂ, ಸಿದ್ದು ನಡುವೆ ಮೂಡದ ಒಮ್ಮತ- ಸಿದ್ದು ಟ್ರೀಟ್‌ಮೆಂಟ್‌ ಮುಗಿಯೋವರೆಗೂ ವೇಟಿಂಗ್‌        ಸಾಲಮನ್ನಾ ಹೇಗೆ ಮಾಡ್ತಾರೆ ಕಾದು ನೋಡ್ತೀನಿ- ಜೆಡಿಎಸ್‌ ಅಂದಿದಕ್ಕೆಲ್ಲಾ ತಲೆ ಅಲ್ಲಾಡಿಸಬೇಡಿ- ಪರಂಗೆ ಸಿದ್ದರಾಮಯ್ಯ ಕಿವಿಮಾತು        ಐಎಎಸ್‌ ಅಧಿಕಾರಿಗಳ ಫೀಡ್‌ಬ್ಯಾಕ್‌ ಕೇಳಿದ ಕೇಂದ್ರ- ಎಲ್ಲಾ ರಾಜ್ಯಗಳಿಗೂ ಸುತ್ತೋಲೆ ರವಾನೆ- ಬಡ್ತಿ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟ ಮೋದಿ ಸರ್ಕಾರ        ಸಿಎಂ ಗ್ರಾಮ ವಾಸ್ತವ್ಯದ ಫಲದಿಂದ ಬಂತು ಬಸ್‌- ಎಚ್‌ಡಿಕೆ ಸೇತುವೆ ಭರವಸೆ ಠುಸ್‌- ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಗ್ರೌಂಡ್‌ ರಿಪೋರ್ಟ್‌        ಕೈಗಾ ಸುತ್ತಮುತ್ತಾ ಕ್ಯಾನ್ಸರ್‌ ಭೀತಿ- ಭಯ ಪಡಬೇಡಿ ಇದು ಕೇವಲ ವದಂತಿ- ಉತ್ತರಕನ್ನಡ ಜನತೆಗೆ ಜಿಲ್ಲಾಧಿಕಾರಿ ಅಭಯ        ಊಟ, ತಿಂಡಿ, ಸ್ನ್ಯಾಕ್ಸ್‌ ಎಲ್ಲದಕ್ಕೂ ಅದೇ- 19 ವರ್ಷದಿಂದ ಪಾರ್ಲೆ ಜಿ ಬಿಸ್ಕೆಟ್‌ ತಿಂದೇ ಜೀವನ- ಚಿಕ್ಕೋಡಿ ಯುವತಿ ವೈದ್ಯಲೋಕಕ್ಕೆ ಸವಾಲ್‌       
Breaking News

ರಷ್ಯಾದಲ್ಲಿ ಇಂದಿನಿಂದ ಕಾಲ್ಚಳಕದ ಕೌತುಕ

Thursday, 14.06.2018, 3:03 AM       No Comments

ವಿಶ್ವದ ಅತಿದೊಡ್ಡ ದೇಶ ರಷ್ಯಾದಲ್ಲಿ ಇಂದಿನಿಂದ (ಗುರುವಾರ) ಫುಟ್​ಬಾಲ್ ಉತ್ಸವ. ಚೊಚ್ಚಲ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿಕೊಂಡಿರುವ ರಷ್ಯಾ ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲು ಮದುವಣಗಿತ್ತಿಯಂತೆ ಸಜ್ಜಾಗಿದೆ. ಸುಮಾರು 6 ಲಕ್ಷ ವಿದೇಶಿ ಪ್ರವಾಸಿಗರು ಸೇರಿದಂತೆ ಲಕ್ಷಾಂತರ ಮಂದಿ ಈ ಕಾಲ್ಚೆಂಡಿನ ಹಬ್ಬದ ಮಜಾ ಸವಿಯಲು ರಷ್ಯಾದತ್ತ ಮುಖಮಾಡಿದ್ದಾರೆ. ಹಾಲಿ ಚಾಂಪಿಯನ್ ಜರ್ಮನಿ, ಸಾರ್ವಕಾಲಿಕ ಫೇವರಿಟ್ ತಂಡಗಳಾದ ಬ್ರೆಜಿಲ್, ಅರ್ಜೆಂಟೀನಾ, ಸ್ಪೇನ್ ಸಹಿತ 32 ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿವೆ.

ವಿಶ್ವಕಪ್​ಗೆ ಕಲರ್​ಫುಲ್ ಚಾಲನೆ

ಮಾಸ್ಕೊ: ಇನ್ನು ಒಂದು ತಿಂಗಳು ಭರಪೂರ ಮನರಂಜನೆ ನೀಡಲಿರುವ ರೋಮಾಂಚಕ ಫಿಫಾ ವಿಶ್ವಕಪ್ ಫುಟ್​ಬಾಲ್ ಟೂರ್ನಿಗೆ ಗುರುವಾರ ಅದ್ದೂರಿ ಚಾಲನೆ ಸಿಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 6.00ಕ್ಕೆ ವೈವಿಧ್ಯಮ ನೃತ್ಯ, ಸಂಗೀತ ಕಾರ್ಯಕ್ರಮಗಳೊಂದಿಗೆ ಕಲರ್​ಫುಲ್ ಆಗಿ ಟೂರ್ನಿ ಉದ್ಘಾಟನೆ ಯಾಗಲಿದೆ. ಮಾಸ್ಕೋದ ಲಜ್ನಿಕಿ ಸ್ಟೇಡಿಯಂನಲ್ಲಿ ರಷ್ಯಾ ಮತ್ತು ಸೌದಿ ಅರೇಬಿಯಾ ತಂಡಗಳ ನಡುವೆ ನಡೆಯಲಿರುವ ಉದ್ಘಾಟನಾ ಪಂದ್ಯಕ್ಕೂ ಮುನ್ನ ಕಾರ್ಯಕ್ರಮ ನಡೆಯಲಿದೆ.

44 ವರ್ಷದ ಇಂಗ್ಲೆಂಡ್ ಖ್ಯಾತ ಪಾಪ್ ಗಾಯಕ ರಾಬಿ ವಿಲಿಯಮ್್ಸ ರಷ್ಯಾ ಸಿಂಗರ್ ಏಯ್ಡಾ ಗ್ಯಾರಿಫುಲ್ಲಿನಾ ವಿವಿಧ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ. ಫಿಫಾ ಧ್ಯೇಯ ಗೀತೆಯನ್ನು ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್, ಸಿಂಗರ್ ಎರಾ ಇಸ್ಟ್ರೆಫಿ ಹಾಗೂ ನಿಕ್ ಜಾಮ್ ಜತೆ ಹಾಡುವರು. ಬ್ರೆಜಿಲ್​ನ 2 ಬಾರಿಯ ವಿಶ್ವಕಪ್ ವಿಜೇತ ಸ್ಟಾರ್ ಆಟಗಾರ ರೊನಾಲ್ಡೊ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಗ್ಲಾಮರ್ ಮಾತ್ರವಲ್ಲದೆ, ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಂದೇಶಗಳಿರುವ ಕಾರ್ಯಕ್ರಮಗಳಿರಲಿವೆ. 500ಕ್ಕೂ ಅಧಿಕ ಡ್ಯಾನ್ಸರ್, ಜಿಮ್ನಾಸ್ಟ್​ಗಳು ಗಮನ ಸೆಳೆಯಲಿದ್ದಾರೆ. ಪ್ರಸಿದ್ಧ ಒಪೆರಾ ಸಿಂಗರ್ ಪ್ಲೆಸಿಡೊ ಡೊಮಿಂಗೊ, ಲೂಸಿಯಾನಿ ಪವರೊಟ್ಟಿ, ಜೋಸ್ ಕೆರೆರಸ್, ಪೆರುವಿಯನ್ ಟೆನರ್, ಜುವಾನ್ ಡಿಯಾಗೊರಿಂದ ಗಾಲಾ ಕನ್ಸರ್ಟ್ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಫಿಫಾ ಮಾಜಿ ಹಾಗೂ ನಿಷೇಧಿತ ಅಧ್ಯಕ್ಷ ಸೆಪ್ ಬ್ಲಾಟರ್ ಕೂಡ ಉಪಸ್ಥಿತಲಿರುವರು.

Leave a Reply

Your email address will not be published. Required fields are marked *

Back To Top