Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ಫಿಫಾ ಸೆಮಿಫೈನಲ್​ ಪ್ರಾನ್ಸ್ ಗೆಲುವನ್ನು ಥಾಯ್​ ಬಾಲಕರಿಗೆ ಸಮರ್ಪಣೆ

Wednesday, 11.07.2018, 6:30 PM       No Comments

ಮಾಸ್ಕೋ: ಫಿಫಾ ವಿಶ್ವಕಪ್‌ ಮೊದಲ ಸೆಮಿಫೈನಲ್​ ಹಣಾಹಣಿಯಲ್ಲಿ ಫ್ರಾನ್ಸ್​ ತಂಡ ಪ್ರಬಲ ಬೆಲ್ಜಿಯಂ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು, ಈ ಗೆಲುವನ್ನು ಪಾಲ್ ಪೋಗ್ಬಾ ಥಾಯ್‌ ಗುಹೆಯಲ್ಲಿ ಸಿಲುಕಿದ್ದ ಜನ ಫುಟ್‌ಬಾಲ್‌ ತಂಡದ ಮಕ್ಕಳಿಗೆ ಅರ್ಪಿಸಿದ್ದಾರೆ.

ಸತತ 18 ದಿನಗಳ ಕಾಲ ಪ್ರವಾಹದಿಂದಾಗಿ ಥಾಯ್‌ನ ಗುಹೆಯಲ್ಲಿ ಸಿಲುಕಿದವನ್ನು ರಕ್ಷಿಸಲು ಕಾರ್ಯಾಚರಣೆ ಕೈಗೊಂಡಿದ್ದ ಎಲೈಟ್‌ ಫಾರಿನ್‌ ಡೈವರ್ಸ್‌ ಮತ್ತು ಥಾಯ್‌ನ ನೌಕಾಪಡೆ ಸಿಬ್ಬಂದಿ ಕೊನೆಯ ನಾಲ್ವರು ಫುಟ್ಬಾಲ್‌ ಯುವ ಆಟಗಾರರು ಮತ್ತು 25 ವರ್ಷದ ಕೋಚ್‌ರನ್ನು ಕಿರಿದಾದ ಮತ್ತು ನೀರು ತುಂಬಿದ ಸುರಂಗಗಳಲ್ಲಿ ತೆರಳಿ ರಕ್ಷಿಸಿರುವುದು ಜಗತ್ತಿನ ಅಚ್ಚರಿಗೆ ಕಾರಣವಾಗಿದೆ.

ಈ ಮಧ್ಯೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಮಿಡ್‌ಫೀಲ್ಡರ್‌ ಪೋಗ್ಬಾ ಟ್ವೀಟ್‌ ಮಾಡಿ, ಈ ವಿಜಯವು ಈ ದಿನದ ನಾಯಕರಿಗೆ ಸಲ್ಲುತ್ತದೆ. ಒಳ್ಳೆಯದಾಗಲಿ ಹುಡುಗರೇ. ನೀವೆಲ್ಲ ತುಂಬ ಪ್ರಬಲರಾಗಿದ್ದೀರ ಎಂದಿದ್ದಾರೆ.

ಇನ್ನು ಫಿಫಾದ ಬಾಸ್‌ ಗಿಯಾನಿ ಇನ್ಫಾಂಟಿನೋ ಬಾಲಕರ ವೈಲ್ಡ್‌ ಬೋರ್ಸ್‌ ಫುಟ್ಬಾಲ್‌ ತಂಡವನ್ನು ಮುಂಬರುವ ಭಾನುವಾರದಂದು ನಡೆಯಲಿರುವ ವರ್ಲ್ಡ್‌ ಕಪ್‌ ಫೈನಲ್‌ ಪಂದ್ಯಾವಳಿಗೆ ಆಹ್ವಾನಿಸಿದ್ದಾರೆ.

ಆದರೆ ಬಾಲಕರ ಆರೋಗ್ಯದ ಕಾರಣದಿಂದಾಗಿ ಈಗಿರುವ ಪರಿಸ್ಥಿತಿಯಲ್ಲಿ ಅವರೆಲ್ಲ ಮಾಸ್ಕೋಗೆ ಪ್ರಯಾಣ ನಡೆಸಲು ಸಾಧ್ಯವಿಲ್ಲ ಎನ್ನಲಾಗಿದೆ.
ಫಿಫಾ ಬಾಸ್ ಗಿಯಾನಿ ಇನ್ಫಾಂಟಿನೊ ಬಾಲಕಿಯರ ವೈಲ್ಡ್ ಬೋರ್ಸ್ ಫುಟ್ಬಾಲ್ ತಂಡವನ್ನು ಕಳೆದ ವಾರ ಭಾನುವಾರದ ವರ್ಲ್ಡ್ ಕಪ್ ಫೈನಲ್ಗೆ ಆಹ್ವಾನಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top