Wednesday, 20th June 2018  

Vijayavani

ಐಟಿ ದೂರಿನಲ್ಲಿದೆ ಸ್ಫೋಟಕ ಮಾಹಿತಿ - ಎಐಸಿಸಿಗೆ ಕೋಟಿ ಕೋಟಿ ಕೊಟ್ಟಿದ್ರಾ ಡಿಕೆಶಿ - ಹವಾಲಾ ವ್ಯವಹಾರದಲ್ಲಿ ಡಿಕೆಶಿ ಹೆಸರು        ಉಪ್ಪು-ಹುಳಿ, ಖಾರ ಇಲ್ಲದ ಊಟ - ನಾನ್​ ವೆಜ್​​ನಿಂದ ದೂರ ದೂರ - ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ದು ಫುಲ್ ಸಸ್ಯಹಾರಿ        ಕಾಶ್ಮೀರದಲ್ಲಿ ಯೋಧನ ಕಿಡ್ನಾಪ್​​​, ಹತ್ಯೆ ಪ್ರಕರಣ - ಮೃತನ ಮನೆಗೆ ರಕ್ಷಣಾ ಸಚಿವ ಭೇಟಿ - ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಿರ್ಮಲಾ ಸೀತಾರಾಮನ್​​        ರೈತ ಎಂದರೆ, ರಕ್ತ, ಬೆವರು ಸುರಿಸುವ ಅನ್ನದಾತ - ದೇಶದ ಅಭಿವೃದ್ಧಿಗೆ ದೇಶದ ರೈತರ ಕೊಡುಗೆ ಆಪಾರ - ರೈತರ ಜತೆ ಪ್ರಧಾನಿ ಮೋದಿ ಸಂವಾದ        ಬಿಸಿಲು ಬರೋವರೆಗೂ ಬಯಲಲ್ಲೇ ಪಾಠ - ಕುಸಿಯುತ್ತಿರೋ ಶಾಲೆಯಲ್ಲೇ ವಿದ್ಯಾರ್ಥಿಗಳ ನರಳಾಟ - ದಾವಣಗೆರೆಯ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ        ಕಣಿವೆ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಹಿನ್ನೆಲೆ - ಮೈತ್ರಿ ಮುರಿದ ಬೆನ್ನಲ್ಲೇ ರಾಜ್ಯಪಾಲರ ಆಡಳಿತ ಜಾರಿ- ಮಧ್ಯಾಹ್ನ 2:30ಕ್ಕೆ ಅಧಿಕಾರಿಗಳ ಸಭೆ ಕರೆದ ಗವರ್ನರ್       
Breaking News

ಪತ್ರಕರ್ತ ರವಿ ಬೆಳಗೆರೆ ವಿರುದ್ಧ ಒಂದೇ ದಿನ 2 ವಾರಂಟ್ ಜಾರಿ

Thursday, 14.12.2017, 6:33 PM       No Comments

<< ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ಒರಟ ಪ್ರಶಾಂತ್, ಸಾಗರದ ಲಿಂಗರಾಜು >>

ಬೆಂಗಳೂರು: ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ನಿನ್ನೆಯಷ್ಟೇ ಮಧ್ಯಂತರ ಜಾಮೀನು ಪಡೆದಿರುವ ಪತ್ರಕರ್ತ ರವಿ ಬೆಳಗೆರೆ ವಿರುದ್ಧ ಗುರುವಾರ ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ವಾರಂಟ್ ಜಾರಿಗೊಳಿಸಿವೆ.

ರವಿ ಬೆಳಗೆರೆ ವಿರುದ್ಧ ಸಾಗರದ ಲಿಂಗರಾಜು ಎಂಬುವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆದರೆ, ನಿರಂತರವಾಗಿ ನ್ಯಾಯಾಲಯಕ್ಕೆ ಹಾಜರಾಗದೆ ಗೈರಾಗಿದ್ದ ಹಿನ್ನೆಲೆಯಲ್ಲಿ ಬಾಡಿ ವಾರಂಟ್ ಜಾರಿಗೊಳಿಸಿದೆ. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಜರುಗಿಸಲಿದ್ದಾರೆ.

ಬೆಂಗಳೂರು ನ್ಯಾಯಾಲಯ
ಮಾನನಷ್ಟ ಮೊಕದ್ದಮೆಯಲ್ಲಿ ರವಿ ಬೆಳಗೆರೆ ಬಂಧನಕ್ಕೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ವಾರಂಟ್ ನೀಡಿದೆ. ಡಿ.28 ರೂಳಗೆ ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಲು ಸಂಜಯ್ ನಗರ ಪೊಲೀಸರಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ಅವಹೇಳನಕಾರಿ ಲೇಖನ ಹಿನ್ನೆಲೆಯಲ್ಲಿ ಈ ಹಿಂದೆ ಒರಟ ಚಿತ್ರದ ನಾಯಕ ಪ್ರಶಾಂತ್​ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ವಿಚಾರವಾಗಿ ರವಿ ಬೆಳಗೆರೆಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತಾದರೂ ವಿಚಾರಣೆಗೆ ಗೈರಾಗಿದ್ದರು. ಹೀಗಾಗಿ ಇದೀಗ ನ್ಯಾಯಾಲಯ ಬಂಧನಕ್ಕೆ ವಾರಂಟ್​ ಜಾರಿಗೊಳಿಸಿದೆ.

Leave a Reply

Your email address will not be published. Required fields are marked *

Back To Top