Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಕಣ್ಸನ್ನೆ ಬೆಡಗಿ ಪ್ರಿಯಾ ಫೋಟೋಶೂಟ್​ ನೋಡಿ ಲವ್ವಲ್ಲಿ ಬೀಳ್ಬೇಡಿ!

Tuesday, 11.09.2018, 8:02 AM       No Comments

ನವದೆಹಲಿ: ಕೇವಲ ಕಣ್ಸನ್ನೆಯಿಂದ ರಾತ್ರೋರಾತ್ರಿ ಸ್ಟಾರ್​ ಆಗಿ ಹೊರಹೊಮ್ಮಿದ ಮಲೆಯಾಳಿ ಬೆಡಗಿ ಪ್ರಿಯಾ ಪ್ರಕಾಶ್​ ವಾರಿಯರ್, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಇನ್​​ಸ್ಟಾಗ್ರಾಂನಲ್ಲಿ ಇತ್ತೀಚಿನ ಫೋಟೋಶೂಟ್ ತುಣುಕುಗಳನ್ನು ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿವೆ.​​

ಪೋಟೋಗಳಲ್ಲಿ ಪ್ರಿಯಾ ಅವರು ಕೆಂಪು ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದಾರೆ. ಅವರ ಸ್ವಾಭಾವಿಕ ಗುಂಗುರು ಕೂದಲಿನ ಕೇಶ ಶೈಲಿಗೆ ಬದಲಾಗಿ ನೀಳ ಕೇಶ ಶೈಲಿಯಲ್ಲಿ ಮಿಂಚುತ್ತಿದ್ದಾರೆ. ಅವಳ ಸುಂದರವಾದ ಕಣ್ಣುಗಳು ಹಾಗೂ ಪರಿಪೂರ್ಣವಾದ ಮೇಕಪ್​​ ನೋಡಿ ನೀವೇನಾದರೂ ಅವರ ಪ್ರೀತಿಯ ಬಲೆಯಲ್ಲಿ ಬಿದ್ದರೆ ನಾವೇನು ಮಾಡೋಕ್ಕಾಗಲ್ಲ.

ಸ್ಥಳೀಯ ಮ್ಯಾಗಜಿನ್​ಗಾಗಿ ಪ್ರಿಯಾ ಅವರು ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಸುಮಾರು 6.4 ಮಿಲಿಯನ್ಸ್​ ಹಿಂಬಾಲಕರನ್ನು ಹೊಂದಿದ್ದು, ಪ್ರಿಯಾ ಅವರು ಅಪ್​ಲೋಡ್​ ಮಾಡಿರುವ ಫೋಟೋಗಳನ್ನು ಈಗಾಗಲೇ ಐದು ಲಕ್ಷ ಮಂದಿ ವೀಕ್ಷಿಸಿದ್ದಾರೆ.

18ರ ಹರೆಯದ ಮಲೆಯಾಳಿ ಬೆಡಗಿ ಒರು ಅದಾರ್​ ಲವ್​ ಚಿತ್ರದ ಮಾಣಿಕ್ಯ ಮಲರಾಯ ಪೂವಿ ಎಂಬ ಹಾಡಿನ ವಿಡಿಯೋ ಮೂಲಕ ‘ನ್ಯಾಷನಲ್​ ಕ್ರಶ್​’ ಎಂಬ ಖ್ಯಾತಿಯನ್ನು ಗಳಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. ಅಲ್ಲದೆ, ಅವರ ಪದಾರ್ಪಣೆ ಸಿನಿಮಾದಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟುಮಾಡಿದ್ದರು. (ಏಜೆನ್ಸೀಸ್​)

View this post on Instagram

🥀 Pc: @syam__babu Mua: @jaan_moni_das

A post shared by priya prakash varrier (@priya.p.varrier) on

View this post on Instagram

🥀

A post shared by priya prakash varrier (@priya.p.varrier) on

Leave a Reply

Your email address will not be published. Required fields are marked *

Back To Top